ಬ್ರೇಕಿಂಗ್ ನ್ಯೂಸ್
23-10-25 05:20 pm Bangalore Correspondent ಕ್ರೈಂ
ಬೆಂಗಳೂರು, ಅ 23 : ಬೆಂಗಳೂರಿನ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುನೀಲ್ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಪ್ರಕರಣ ಕೇಳಿಬಂದಿದೆ. ಮಹಿಳೆಯೊಬ್ಬರು ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದು ಈ ಸಂಬಂಧ ಡಿಜಿ ಮತ್ತು ಐಜಿಪಿ ಕಚೇರಿಗೂ ದೂರು ನೀಡಿದ್ದಾರೆ.
ಹಣದ ಮೋಸದ ವಿಚಾರಕ್ಕೆ ಠಾಣೆಗೆ ಬಂದಿದ್ದ 36 ವರ್ಷದ ಮಹಿಳೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡ ಸುನೀಲ್ ನಂತರ ಮದುವೆಯಾಗುವುದಾಗಿ ನಂಬಿಸಿದ್ದಾರೆ. ಅಷ್ಟೇ ಅಲ್ಲದೆ ರಿಜಿಸ್ಟರ್ ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ನನಗೆ ಮನೆ ಕೊಡಿಸುತ್ತೇನೆ. ಬ್ಯೂಟಿ ಪಾರ್ಲರ್ ಓಪನ್ ಮಾಡಿಕೊಡುತ್ತೇನೆ ಎಂದು ಹೇಳಿ ನನ್ನನ್ನು ತಮ್ಮ ಮನೆ ಮತ್ತು ಹೋಟೆಲ್ ಗೆ ಕರೆಸಿಕೊಂಡು ಮೂರು ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆಯೇಷಾ ದೂರು ನೀಡಿದ್ದಾರೆ.


ಈ ಮಧ್ಯೆ, ಆರೋಪರಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ಹೇಳಿಕೆ ಮತ್ತು ಅವರ ನಡುವೆ ನಡೆದ ಚಾಟಿಂಗ್ ವಿವರಗಳು ಈಗ ಬಹಿರಂಗಗೊಂಡಿದ್ದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿವೆ. ಇನ್ಸ್‌ಪೆಕ್ಟರ್ ಸುನೀಲ್ ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬ ಸಂತ್ರಸ್ತೆಯ ದೂರಿನ ಸತ್ಯಾಂಶಗಳನ್ನು ಈ ಚಾಟ್‌ಗಳು ಬಿಚ್ಚಿಟ್ಟಿವೆ.
ಇನ್ನು ಖಾಸಗಿ ಪೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ನಡೆಸಿರುವ ಆರೋಪವನ್ನು ಮಹಿಳೆ ಮಾಡಿದ್ದಾರೆ. ನಮ್ಮ ವಿಚಾರವನ್ನು ಯಾರಿಗಾದರೂ ಹೇಳಿದರೇ ಕೊಲೆ ಮಾಡೋದಾಗಿ ಬೆದರಿಕೆ ಕೂಡ ಹಾಕಿದ್ದಾರಂತೆ. ಪ್ರತಿ ಭಾರಿ ವಿಡಿಯೋ ಕಾಲ್ ಮಾಡು ಎಂದು ಪೀಡಿಸುತ್ತಿದ್ದಾರೆ ಎಂದು ಸಂತ್ರಸ್ಥ ಮಹಿಳೆ ಆರೋಪ ಮಾಡಿದ್ದಾರೆ.
ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಂತ್ರಸ್ಥೆ ನಡುವೆ ವಾಟ್ಸಾಫ್ ಚಾಟಿಂಗ್ ಕೂಡ ನಡೆದಿದೆ. ತನ್ನ ಮನೆ ಲೊಕೇಷನ್ ಶೇರ್ ಮಾಡಿ ಮನೆಗೆ ಬರುವಂತೆ ಆಹ್ವಾನ…ಕೂಡ ನೀಡಿದ್ದಾರೆ. ಮನೆಯಲ್ಲಿ ಹೆಂಡತಿ , ಮಕ್ಕಳಿಲ್ಲ, ನನ್ನ ಮನೆಗೆ ಬಾ ಎಂದು ಇನ್ಸ್ ಪೆಕ್ಟರ್ ಮೆಸೇಜ್…ಮಾಡಿದ್ದಾರೆ. ಯು ಆರ್ ಲವ್ ಮೈ ಸ್ವೀಟ್ ಹಾರ್ಟ್ ಅಂಥ ಯುವತಿಯಿಂದಲೂ ಮೆಸೇಜ್ ಮಾಡಲಾಗಿದೆ. ಚಿನ್ನಿ, ಮಿಸ್ ಯೂ ಅಂಥ ಸಂತ್ರಸ್ಥೆಯಿಂದಲೂ ಮೆಸೇಜ್…ಮಾಡಲಾಗಿದೆ. ಅದಕ್ಕೆ ಮೀ ಟೂ ಅಂಥ ಇನ್ಸ್ ಪೆಕ್ಟರ್ ರಿಪ್ಲೈ ಮಾಡಿದ್ದಾರೆ. ವಿಡಿಯೋ ಕಾಲ್ ಮೂಲಕ ಇಬ್ಬರ ನಡುವೆ ಮಾತುಕತೆಯೂ ನಡೆದಿದೆ. ಇನ್ಸ್ ಪೆಕ್ಟರ್ ಸುನೀಲ್ ಹಾಗೂ ಸಂತ್ರಸ್ಥ ಮಹಿಳೆಯ ನಡುವಿನ ವಾಟ್ಸಾಫ್ ಚಾಟಿಂಗ್ ಅನ್ನು ಮಹಿಳೆ ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದಾರೆ.
A shocking case has emerged in Bengaluru, where DJ Halli Police Inspector Sunil has been accused of raping and cheating a 36-year-old woman who had come to the police station regarding a financial dispute.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am