ಬ್ರೇಕಿಂಗ್ ನ್ಯೂಸ್
22-10-25 11:51 am Mangalore Correspondent ಕ್ರೈಂ
ಪುತ್ತೂರು, ಅ.22 : ಅಕ್ರಮವಾಗಿ ಹತ್ತು ಜಾನುವಾರುಗಳನ್ನು ಸಾಗಿಸುತ್ತಿದ್ದ ಈಚರ್ ಟೆಂಪೋವನ್ನು ಪೊಲೀಸರು ಬೆನ್ನಟ್ಟಿದ್ದು ಈ ವೇಳೆ ಪೊಲೀಸ್ ಜೀಪಿಗೆ ಡಿಕ್ಕಿಯಾಗಿಸಲು ಯತ್ನಿಸಿದ ಘಟನೆ ನಡೆದಿದ್ದು ಪುತ್ತೂರು ಗ್ರಾಮಾಂತರ ಠಾಣೆ ಪಿಎಸ್ಐ ಒಬ್ಬನಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ.
ಪುತ್ತೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಕೇರಳ ಗಡಿಭಾಗ ಈಶ್ವರಮಂಗಲದ ಬೆಳ್ಳಿಚಡವು ಎಂಬಲ್ಲಿ ನಸುಕಿನ ವೇಳೆಗೆ ಘಟನೆ ನಡೆದಿದೆ. ಜಾನುವಾರುಗಳನ್ನು ಈಚರ್ ಲಾರಿಯಲ್ಲಿ ತುಂಬಿಕೊಂಡು ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ. ಸುಮಾರು ಹತ್ತು ಕಿಮೀ ಉದ್ದಕ್ಕೆ ಪೊಲೀಸರು ಬೆನ್ನಟ್ಟಿದ್ದು ಈ ವೇಳೆ ಜೀಪಿಗೆ ಡಿಕ್ಕಿಪಡಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದಾರೆ. ನೆಟ್ಟಣಿಗೆ ಮುಡ್ನೂರು ಬೆಳ್ಳಿಚಡವು ಒಳರಸ್ತೆಯ ಮೂಲಕ ಕೇರಳಕ್ಕೆ ಸಾಗುತ್ತಿದ್ದಾಗ ಪೊಲೀಸರು ಅಡ್ಡಹಾಕಿದ್ದಾರೆ.




ವಾಹನ ನಿಲ್ಲಿಸಲು ಸೂಚಿಸಿದ ಪೊಲೀಸರ ಮೇಲೆ ಲಾರಿ ಹತ್ತಿಸಲು ಯತ್ನಿಸಿದ್ದಾರೆ. ಅಲ್ಲದೆ, ವಾಹನ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾರೆ. ಬೆಳ್ಳಿಚಡವು ಬಳಿ ಲಾರಿ ಬಿಟ್ಟು ಒಬ್ಬಾತ ಓಡಿದ್ದು ಈ ವೇಳೆ ಪಿಎಸ್ಐ ಜಂಬುರಾಜ್ ಮಹಾಜನ್ ತನ್ನ ಪಿಸ್ತೂಲಿನಿಂದ ಫೈರ್ ಮಾಡಿದ್ದಾರೆ. ಒಂದು ಗುಂಡು ಈಚರ್ ಲಾರಿ ಮೇಲೆ ಬಿದ್ದಿದ್ದು, ಇನ್ನೊಂದು ಗುಂಡು ಲಾರಿ ಚಲಾಯಿಸುತ್ತಿದ್ದ ಅಬ್ದುಲ್ಲಾ (40) ಎಂಬಾತನ ಕಾಲಿಗೆ ಬಿದ್ದಿದೆ. ಈ ವೇಳೆ, ಲಾರಿ ನಿಲ್ಲುತ್ತಲೇ ಇನ್ನೊಬ್ಬ ಆರೋಪಿ ಇಳಿದು ಪರಾರಿಯಾಗಿದ್ದು ಗಾಯಾಳು ಚಾಲಕನನ್ನು ಬಂಧಿಸಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ತರಲಾಗಿದೆ. ಆರೋಪಿ ಅಬ್ದುಲ್ಲಾ ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಯಾಗಿದ್ದು ಅಕ್ರಮವಾಗಿ ನೋವುಗಳನ್ನು ಸುಳ್ಯ, ಪುತ್ತೂರು ಮೂಲಕ ಕೇರಳಕ್ಕೆ ಸಾಗಿಸುತ್ತಿದ್ದ.
ಗೋವುಗಳನ್ನು ಹಾಸನದಿಂದ ಕೇರಳಕ್ಕೆ ಸಾಗಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಲಾರಿಯಲ್ಲಿದ್ದ 10 ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಬ್ದುಲ್ಲಾ ವಿರುದ್ಧ ಈ ಹಿಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ 33/2025 ಗೋ ಹತ್ಯೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
In a dramatic chase on the Karnataka–Kerala border near Ishwaramangala’s Bellichadavu, Puttur Rural Police intercepted an Eicher tempo illegally transporting ten cattle. When ordered to stop, the driver allegedly tried to ram the police jeep. PSI Jamburaj Mahajan fired two rounds — one bullet hit the vehicle, and another struck the driver, identified as Abdullah (40) from Kasaragod, in the leg.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am