ಬ್ರೇಕಿಂಗ್ ನ್ಯೂಸ್
08-10-25 08:47 pm HK News Desk ಕ್ರೈಂ
ಕಾರವಾರ, ಅ.8: ದುಬೈ, ಕುವೈತ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಕೇರಳ, ಕರ್ನಾಟಕದ ಹಲವಾರು ಮಂದಿಯಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿರುವ ಘಟನೆ ಬಗ್ಗೆ ಹೊನ್ನಾವರದಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಇಬ್ಬರು ಹಾಗೂ ಹೈದ್ರಾಬಾದ್ ಮೂಲಕ ಮಹಿಳೆ ಹಣ ಪಡೆದು ವಂಚಿಸಿದ್ದಾಗಿ ಆರೋಪ ಕೇಳಿಬಂದಿದೆ. ಹೊನ್ನಾವರ ತಾಲೂಕಿನ ಹೇರಂಗಡಿಯ ಜಾಫರ್ ಸಾದಿಕ್ ಮೊಕ್ತೆಸರ್, ನೌಶಾದ್ ಕ್ವಾಜಾ ಹಾಗೂ ಹೈದ್ರಾಬಾದ್ ನ ಸುಜಾತ ಜಮ್ಮಿ ಕುಂಟ ಎಂಬ ಮಹಿಳೆ ದುಬೈನಲ್ಲಿ ಉದ್ಯೋಗ ನೀಡುವ ಆಸೆ ತೋರಿಸಿ ಲಕ್ಷಾಂತರ ರೂ ಹಣ ಲಪಟಾಯಿಸಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಕರ್ನಾಟಕ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ನಿರುದ್ಯೋಗಿ ಯುವಕರಿಗೆ ಕುವೈತ್ ಡಿಫೆನ್ಸ್ ಆಸ್ಪತ್ರೆಯಲ್ಲಿ ಉದ್ಯೋಗ ಖಾಲಿ ಇದೆ ಎಂದು ಜಾಲತಾಣದ ಮೂಲಕ ಪ್ರಕಟಣೆ ನೀಡಿದ್ದರು. ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಸಿಗಲಿದೆ ಎಂದು ಹಲವಾರು ಮಂದಿಯನ್ನು ನಂಬಿಸಿ, ವೀಸಾ ತೆಗೆಸಿಕೊಡುತ್ತೇವೆಂದು ಹೇಳಿ ಒಟ್ಟು 52 ಲಕ್ಷ ರೂ. ಹಣ ವರ್ಗಾವಣೆ ಮಾಡಿಸಿಕೊಂಡು ಈಗ ನಾಪತ್ತೆಯಾಗಿದ್ದಾರೆ.
ದುಬೈ ಉದ್ಯೋಗಕ್ಕಾಗಿ ಹಣ ಕೊಟ್ಟವರಿಗೆ, ಕಾಗದ ಪತ್ರಗಳನ್ನು ನಾವೇ ಮಾಡಿಸಿ ಕೊಡುತ್ತೇವೆ. ನೀವು ಪಾಸ್ಪೋರ್ಟ್ ರೆಡಿ ಮಾಡಿ. ವೀಸಾ ಬಂದ ಕೂಡಲೇ ಹೋಗಬಹುದು ಎಂದು ಆಸೆ ತೋರಿಸಿದ್ದರು. ಆದರೆ ದಿನ ಕಳೆದಂತೆ ವೀಸಾ ಬರದೇ ಇದ್ದುದರಿಂದ ಮತ್ತು ಆರೋಪಿಗಳು ಸಂಪರ್ಕಕ್ಕೆ ಸಿಗದ್ದರಿಂದ ಹಣ ಕೊಟ್ಟವರಿಗೆ ಸಂಶಯ ಬಂದಿದೆ. ಹೀಗಾಗಿ ತಾವು ಮೋಸ ಹೋದ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು, ಕೇರಳ, ಕರ್ನಾಟಕ ಸೇರಿ ಇತರ ರಾಜ್ಯಗಳ ಜನರಿಗೂ ವಂಚಿಸಿದ್ದಾರೆಂದು ಹಣ ಕಳೆದುಕೊಂಡವರು ಆರೋಪಿಸಿದ್ದಾರೆ. ಕುವೈತ್ ಉದ್ಯೋಗ ನಂಬಿಕೊಂಡು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಯುವಕರು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಮೋಸ ಮಾಡಿದ ಜಾಫರ್ ಸಾಧಿಕ್ ಸೇರಿ ಈ ಜಾಲದಲ್ಲಿರುವ ಎಲ್ಲರನ್ನೂ ಬಂಧಿಸಬೇಕೆಂದು ಒತ್ತಾಯ ಕೇಳಿಬಂದಿದೆ. ಆರೋಪಿತರು ಕುವೈತ್ ಮತ್ತು ಕೆನಡಾದ ಪೋನ್ ನಂಬರ್ ಉಪಯೋಗಿಸಿ ಇನ್ನಷ್ಟು ಅಮಾಯಕರಿಗೆ ಮೋಸ ಮಾಡುವ ಸಾಧ್ಯತೆ ಇದೆ. ಹೀಗಾಗಿ ಪೊಲೀಸರು ಕೂಡಲೇ ಇವರನ್ನ ಬಂಧಿಸಬೇಕೆಂದು ಗಡಿನಾಡ ರಕ್ಷಣಾ ವೇದಿಕೆಯ ಸಿದ್ದಿಕ್ ತಲಪಾಡಿ ಒತ್ತಾಯಿಸಿದ್ದಾರೆ.
A major foreign job scam has come to light in Honnavar, Uttara Kannada, where three individuals allegedly cheated several unemployed youths from Karnataka and Kerala by promising high-paying jobs at a Kuwait Defence Hospital. The accused — Jaffar Sadiq Moktesar and Noushad Khwaja from Honnavar, along with Sujata Jammi Kunta from Hyderabad — reportedly collected ₹52 lakh from multiple victims before going missing.
08-07-26 02:06 pm
HK News Staffer
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
ದೇಶದ 'ತೂಗುಸೇತುವೆಗಳ ಸರದಾರ' ಪದ್ಮಶ್ರೀ ಡಾ. ಗಿರೀಶ್...
07-07-26 10:52 am
ಮೈಸೂರು ದಸರಾದಲ್ಲಿ ಕಂಬಳ ಬೇಡವೇ ಬೇಡ ; ಯದುವೀರ್ ಒಡ...
06-07-26 04:40 pm
07-07-26 03:22 pm
HK News Staffer
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
ಚೀನಾ ಮಹಾಗೋಡೆ ಮಾದರಿಯಲ್ಲೇ ಆಫ್ರಿಕಾ ಮರುಭೂಮಿಯಲ್ಲಿ...
04-07-26 08:09 pm
08-07-26 11:04 pm
HK News Desk
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿ...
08-07-26 06:53 pm
ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ ಕೇಂದ್ರದಿಂದ 49.22...
08-07-26 01:17 pm
ರಾಮ ಮಂದಿರ ದೇಣಿಗೆ ಲೂಟಿ ; ಹಿಂದೂ ಸಂಘಟನೆಗಳು ಯಾಕೆ...
07-07-26 11:13 pm
09-07-26 11:38 am
HK News Staffer
ಅಡುಗೆ ವಿಚಾರದಲ್ಲಿ ಹೆಂಡತಿಯೊಂದಿಗೆ ಜಗಳ ; ಅಡ್ಡ ಬಂದ...
07-07-26 08:07 pm
Konaje Police, Accused Escapes, Mangalore: ಪೋ...
07-07-26 03:50 pm
Mangalore Panambur Truck Block; ಪಣಂಬೂರಿನಲ್ಲಿ...
06-07-26 04:49 pm
Panambur Gold Robbery, Photo Released: ಚಿನ್ನದ...
06-07-26 12:28 pm