ಬ್ರೇಕಿಂಗ್ ನ್ಯೂಸ್
13-08-25 05:40 pm Udupi Correspondent ಕ್ರೈಂ
ಕುಂದಾಪುರ, ಆ.13 : ವಾಟ್ಸ್ಆ್ಯಪ್ ಗ್ರೂಪ್ಗೆ ವ್ಯಕ್ತಿಯೊಬ್ಬರನ್ನು ಸೇರಿಸಿ ಕಂಪೆನಿಯಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಿ ಬಳಿಕ ಅವರ ಬ್ಯಾಂಕ್ ಖಾತೆಯಿಂದಲೇ ಸುಮಾರು 10 ಲಕ್ಷ ರೂ. ಲಪಟಾಯಿಸಿದ ಘಟನೆ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ನಡೆದಿದೆ.
ಕಿರಿಮಂಜೇಶ್ವರ ಗ್ರಾಮದ ನಾಗೂರು ನಿವಾಸಿ ಅಲ್ತಾಫ್ ಹುಸೇನ್ ತನ್ನ ಫೇಸ್ಬುಕ್ ಖಾತೆಯಲ್ಲಿ ಬಂದಿರುವ ಲಿಂಕ್ ಅನ್ನು ತೆರೆದಾಗ ವಾಟ್ಸ್ಆ್ಯಪ್ ಗ್ರೂಪ್ ಒಂದಕ್ಕೆ ಸೇರ್ಪಡೆಯಾಗಿದ್ದರು. ಗ್ರೂಪ್ನಲ್ಲಿದ್ದ ಪರಿನಿಥಿ ಜೈನ್ ಎಂಬ ಮಹಿಳೆ ತಮ್ಮ ಕಂಪೆನಿಯ ಬಗ್ಗೆ ಹೇಳಿಕೊಂಡು ವಿಳಾಸ, ದೂರವಾಣಿ ಸಂಖ್ಯೆ ನೀಡಿ ವಾಟ್ಸ್ಆ್ಯಪ್ ಮೂಲಕ ಷೇರು ಮಾರುಕಟ್ಟೆ ಬಗ್ಗೆ ನಿರಂತರ ಮಾಹಿತಿ ನೀಡಿದ್ದಳು. ಅನುಪ್ ತಿವಾರಿ ಎಂಬಾತನೂ ಪ್ರತಿನಿತ್ಯ ಪ್ರಮುಖ ಷೇರುಗಳ ಮಾಹಿತಿ ಒದಗಿಸುತ್ತಿದ್ದ.
ಕೆಲವು ದಿನಗಳ ಬಳಿಕ ಒಂದು ವೆಬ್ಸೈಟ್ ವಿಳಾಸ ಕಳುಹಿಸಿ ಅದರಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿ ಲಾಗಿನ್ ಐ.ಡಿ. ಮತ್ತು ಪಾಸ್ ವರ್ಡ್ ನೀಡಿದ್ದರು. ಇದಾದ ಬಳಿಕ ವಾಟ್ಸ್ಆ್ಯಪ್ನಲ್ಲಿ ಕಳುಹಿಸಿದ ಬೇರೆ ಬೇರೆ ಬ್ಯಾಂಕ್ ಖಾತೆಗೆ ಅಲ್ತಾಫ್ ಅವರು ತನ್ನ ಬ್ಯಾಂಕ್ ಖಾತೆಯಿಂದ ಒಟ್ಟು 10,15,000 ರೂ. ಪಾವತಿಸಿದ್ದರು. ಅವರ ವೆಬ್ ಸೈಟ್ನಲ್ಲಿ ಹೂಡಿಕೆ ಮಾಡಿದ ಹಣ ಮತ್ತು ಅದರ ಲಾಭಾಂಶದ ಸೇರಿ ದುಪ್ಪಟ್ಟು ಆಗಿ ಒಟ್ಟು ಮೊತ್ತ 75,42,343 ಇದೆ ಎಂದು ತೋರಿಸುತ್ತಿತ್ತು. ಆ ಮೊತ್ತವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ವೆಬ್ ಸೈಟ್ ಖಾತೆ ಬ್ಲಾಕ್ ಆಗಿತ್ತು.
ಈ ಬಗ್ಗೆ ಪರಿನಿಥಿ ಜೈನ್ ಅವರಲ್ಲಿ ಪ್ರಶ್ನಿಸಿದಾಗ ಈ ಮೊತ್ತದಲ್ಲಿ ಶೇ. 20ರಷ್ಟು ಕಮಿಷನ್ ಕಂಪೆನಿಗೆ ನೀಡಬೇಕು ಎಂದಿದ್ದಾಳೆ. ಹೂಡಿಕೆ ಮಾಡಿರುವ ಹಣದಲ್ಲಿ ಕಮಿಷನ್ ಕಡಿತ ಮಾಡಿ ಉಳಿದ ಹಣ ನೀಡುವಂತೆ ಅಲ್ತಾಫ್ ತಿಳಿಸಿದರೆ, ಅದಕ್ಕೆ ಪರಿಮಿಥಿ ಜೈನ್ ಒಪ್ಪದೇ ಇದ್ದಾಗ ಅನುಮಾನಗೊಂಡು ಕಂಪೆನಿಯ ವಿಳಾಸ ಇದ್ದ ಬೆಂಗಳೂರಿನ ಜಾಗಕ್ಕೆ ಹೋಗಿ ವಿಚಾರಿಸಿದರು. ಅಲ್ಲಿ ಅ ಕಂಪೆನಿಯೇ ಇಲ್ಲ ಎಂದು ತಿಳಿದಾಗ ತಾನು ಮೋಸ ಹೋಗಿರುವುದು ಖಚಿತವಾಗಿದ್ದು, ನ್ಯಾಯ ಒದಗಿಸುವಂತೆ ಬೈಂದೂರು ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ.
A man from Uppunda in Byndoor taluk lost over ₹10 lakh after being lured into a fake stock market investment scheme through a WhatsApp group. The scam came to light when he went to the company’s listed address in Bengaluru, only to discover it did not exist.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am