ಬ್ರೇಕಿಂಗ್ ನ್ಯೂಸ್
23-07-25 04:49 pm Udupi Correspondent ಕ್ರೈಂ
ಉಡುಪಿ, ಜುಲೈ 23 : ಹೈದರಾಬಾದ್ನಲ್ಲಿ ಉಚ್ಚಿಲ ಮೂಲದ ಮಹಿಳೆಯೊಂದಿಗೆ ಎರಡು ವರ್ಷ ರಿಯಲ್ ಎಸ್ಟೇಟ್ ಉದ್ಯಮ ನಡೆಸಿದ್ದ ವ್ಯಕ್ತಿಯೊಬ್ಬ ಮಂಗಳವಾರ ಪಡುಬಿದ್ರಿ ಠಾಣೆ ವ್ಯಾಪ್ತಿಯ ಉಚ್ಚಿಲದ ಆಕೆಯ ಮನೆಗೆ ನುಗ್ಗಿ ಕುತ್ತಿಗೆ ಹಿಸುಕಿ ಕೊಲೆಗೈಯಲು ಯತ್ನಿಸಿದ ಘಟನೆ ನಡೆದಿದೆ. ಅಷ್ಟರಲ್ಲಿ ಮಹಿಳೆಯ ಗಂಡ ಮತ್ತು ಸ್ಥಳೀಯರು ಸೇರಿದ್ದರಿಂದ ಆರೋಪಿ ಪರಾರಿಯಾಗಿದ್ದಾನೆ.
ವಿಷಯ ತಿಳಿಯುತ್ತಲೇ ಕಾರ್ಯಾಚರಣೆ ನಡೆಸಿದ ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್ಐ ಶಕ್ತಿವೇಲು ಮತ್ತು ಸಿಬಂದಿ ಆರೋಪಿ ಹೈದರಾಬಾದ್ ಮೂಲದ ವಿಶ್ವನಾಥ ನಾಯ್ಡು ಎಂಬಾತನನ್ನು ಉಚ್ಚಿಲದಲ್ಲೇ ಬಂಧಿಸಿದ್ದಾರೆ. ಪಡುಬಿದ್ರಿ ಮೂಲದ ಮಹಿಳೆ ಈ ಹಿಂದೆ ಹೈದರಾಬಾದ್ನ ವ್ಯಕ್ತಿಯ ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮ ನಡೆಸಿದ್ದು ಈ ವೇಳೆ ಪತಿಯನ್ನು ಬಿಟ್ಟು ತನ್ನನ್ನು ಮದುವೆಯಾಗುವಂತೆ ವಿಶ್ವನಾಥ ನಾಯ್ಡು ಒತ್ತಾಯಿಸಿದ್ದ.
ಮಹಿಳೆಯನ್ನು ಪ್ರೀತಿಸುವುದಾಗಿ ಹೇಳಿ ಪತಿಗೆ ವಿಚ್ಚೇದನ ನೀಡುವಂತೆ ಮತ್ತು ತನ್ನನ್ನು ಮದುವೆಯಾಗಿ ಜೊತೆಗೆ ಇರುವಂತೆ ಪೀಡಿಸುತ್ತಿದ್ದ. ಮಹಿಳೆ ಇದಕ್ಕೆ ವಿರೋಧಿಸಿದಾಗ ನಿನ್ನನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಬೆದರಿಕೆ ಹಾಕಿದ್ದ. ಇದರಿಂದ ಹೆದರಿದ್ದ ಮಹಿಳೆ ತನ್ನ ಗಂಡನೊಂದಿಗೆ ಉಡುಪಿ ಜಿಲ್ಲೆಯ ಉಚ್ಚಿಲಕ್ಕೆ ಬಂದು ನೆಲೆಸಿದ್ದರು. 2 ತಿಂಗಳ ಬಳಿಕ ಆತ ಹುಡುಕುತ್ತ ಬಂದಿದ್ದು ಮನೆಗೆ ನುಗ್ಗಿ ಮಹಿಳೆಯನ್ನು ಮದುವೆಯಾಗದಿದ್ದರೆ ಸಾಯಿಸುತ್ತೇನೆ ಎಂದು ಹೇಳಿ ಹಲ್ಲೆಗೆ ಯತ್ನಿಸಿದ್ದಾನೆ. ಪಡುಬಿದ್ರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ.
A shocking incident unfolded on Tuesday in Ucchila, Padubidri, where a Hyderabad-based realtor allegedly attempted to strangle a woman with whom he had a past personal and professional relationship. The woman, originally from Ucchila, had recently returned to her hometown with her husband, refusing to continue ties with the accused.
20-12-25 03:05 pm
Bangalore Correspondent
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 01:09 pm
Mangalore Correspondent
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm