ಬ್ರೇಕಿಂಗ್ ನ್ಯೂಸ್
21-07-25 10:17 pm Mangalore Correspondent ಕ್ರೈಂ
ಮಂಗಳೂರು, ಜುಲೈ 21 : ದೇಶಾದ್ಯಂತ ಉದ್ಯಮಿಗಳನ್ನು ಗುರಿಯಾಗಿಸಿ ಮೋಸದ ಜಾಲದಲ್ಲಿ ಸಿಲುಕಿಸುತ್ತಿದ್ದ ರೋಶನ್ ಸಲ್ಡಾನ ವಿರುದ್ಧ ಬಿಹಾರ ಮೂಲದ ಉದ್ಯಮಿಯೊಬ್ಬರು ಮಂಗಳೂರಿನಲ್ಲಿ ಕೇಸು ದಾಖಲಿಸಿದ್ದಾರೆ. ತನಗೆ ಹತ್ತು ಕೋಟಿಗೂ ಮಿಕ್ಕಿ ಮೋಸ ಮಾಡಿದ್ದಾಗಿ ದೂರು ನೀಡಿದ್ದಾರೆ. ಹತ್ತು ಕೋಟಿಯಷ್ಟು ಮೊತ್ತದ ವಂಚನೆ ಪ್ರಕರಣ ದಾಖಲಾದರೆ, ಸಿಐಡಿಗೆ ಕೊಡಬೇಕೆಂಬ ಕಾನೂನಿನಂತೆ ಸದ್ರಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಹಾರಾಷ್ಟ್ರ, ಬೆಂಗಳೂರಿನ ಉದ್ಯಮಿಗಳು ಸೇರಿ ಒಟ್ಟು ಐದು ಮಂದಿ ರೋಶನ್ ಸಲ್ಡಾನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಸೋಮವಾರ ಬಿಹಾರ ಮೂಲದ ಉದ್ಯಮಿಯೊಬ್ಬರು ಹತ್ತು ಕೋಟಿ ವಂಚನೆ ಮಾಡಿರುವ ಬಗ್ಗೆ ದೂರು ನೀಡಿದ್ದಾರೆ. ಈವರೆಗೆ ಒಟ್ಟು 50 ಕೋಟಿಗೂ ಹೆಚ್ಚು ವಂಚನೆ ಎಸಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಬಿಹಾರ ಮೂಲದ ಉದ್ಯಮಿಯ ಪ್ರಕರಣ ಹೊರತುಪಡಿಸಿ ಉಳಿದವನ್ನು ಮಂಗಳೂರು ಪೊಲೀಸರೇ ತನಿಖೆ ನಡೆಸಲಿದ್ದಾರೆ.




ದೇಶದ ಪ್ರಮುಖ ನಗರಗಳಲ್ಲಿ 20ಕ್ಕೂ ಹೆಚ್ಚು ಏಜಂಟರನ್ನು ಇಟ್ಟುಕೊಂಡಿದ್ದ ರೋಶನ್ ಸಲ್ಡಾನ ಉದ್ಯಮಿಗಳನ್ನು ಪರಿಚಯಿಸಿ ಕೊಟ್ಟರೆ ಇಂತಿಷ್ಟು ಕಮಿಷನ್ ನೀಡುತ್ತಿದ್ದ. ಏಜಂಟರ ಮಾಹಿತಿ ಆಧರಿಸಿ ಉದ್ಯಮಿಗಳೇ ರೋಶನ್ ಸಲ್ಡಾನನ್ನು ಸಂಪರ್ಕಿಸುತ್ತಿದ್ದರು. ಆನಂತರ, ಬೆಂಗಳೂರಿನ ಐಷಾರಾಮಿ ಹೊಟೇಲ್ ಗಳಲ್ಲಿ ಕುಳಿತು ಅಥವಾ ಮಂಗಳೂರಿಗೆ ಬಂದರೆ ತನ್ನ ಮನೆಗೆ ಕರೆದೊಯ್ದು ವಿಶೇಷ ಆತಿಥ್ಯ ಕೊಡಿಸುತ್ತಿದ್ದ. ತನ್ನ ಮನೆಯ ಐಷಾರಾಮಿ ಬಂಗಲೆಯಲ್ಲಿ ಎಲ್ಲ ರೀತಿಯ ಆತಿಥ್ಯ ಕೊಟ್ಟು ಅವರನ್ನು ತೃಪ್ತಿಪಡಿಸುತ್ತಿದ್ದ. ಇದರಿಂದ ಉತ್ತೇಜಿತರಾಗುತ್ತಿದ್ದ ಉದ್ಯಮಿಗಳು ಈತನನ್ನು ನಂಬಿ ಸಾಲಕ್ಕಾಗಿ 3-4 ಪರ್ಸೆಂಟಿನಷ್ಟು ಸ್ಟಾಂಪ್ ಡ್ಯೂಟಿಗೆಂದು ನಗದು ರೂಪದಲ್ಲಿ ನೀಡಲು ಒಪ್ಪುತ್ತಿದ್ದರು. ಇದನ್ನೇ ದಾಳವನ್ನಾಗಿಸಿ ರೋಶನ್ ದೇಶಾದ್ಯಂತ ಉದ್ಯಮಿಗಳನ್ನು ಲೂಟಿ ಮಾಡಿದ್ದ ಎನ್ನೋದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ತಾನು ಆಗರ್ಭ ಶ್ರೀಮಂತ ಎಂದು ಪೋಸು ನೀಡುವುದಕ್ಕಾಗಿ ಮನೆಯ ಆವರಣದಲ್ಲಿ, ವೆರಾಂಡಾದಲ್ಲಿ ಅತಿ ಬೆಲೆಯ ಬೋನ್ಸಾಯ್ ಗಿಡಗಳನ್ನು ನೆಟ್ಟಿದ್ದ. ಅಲ್ಲದೆ, ವಿದೇಶಿ ಮದ್ಯದ ಬಾಟಲಿಗಳನ್ನು ಬಾರ್ ಅಂಡ್ ರೆಸ್ಟೋರೆಂಟ್ ರೀತಿಯಲ್ಲಿ ಶೇಖರಣೆ ಮಾಡಿಟ್ಟಿದ್ದ. ಹೊಂಬಣ್ಣದಿಂದ ಮಿಂಚುವ ಸೋಫಾ ಸೆಟ್, ಬೇರೆ ಬೇರೆ ಆಕಾರದ ಕೆತ್ತನೆಗಳು, ಬಂಗಾರ ಬಣ್ಣದ ಮೂರ್ತಿಗಳು ಬಂದ ಅತಿಥಿಗಳನ್ನು ಮೋಡಿ ಮಾಡುತ್ತಿದ್ದವು. ರೋಶನ್ ಸಲ್ದಾನ ಹೆಚ್ಚಿನ ಪ್ರಕರಣಗಳಲ್ಲಿ ನಗದು ರೂಪದಲ್ಲಿಯೇ ಪಡೆದಿದ್ದರಿಂದ ಉದ್ಯಮಿಗಳು ಐಟಿ, ಇಡಿಯ ಉಸಾಬರಿ ಬೇಡವೆಂದು ದೂರು ನೀಡುತ್ತಿರಲಿಲ್ಲ. ಈಗ ಅಸಲಿ ಬಣ್ಣ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಇದನ್ನು ನೋಡಿ ದಿನದಿಂದ ದಿನಕ್ಕೆ ಬೇರೆ ಬೇರೆ ಕಡೆಯ ಉದ್ಯಮಿಗಳು ದೂರು ನೀಡಲು ಮುಂದೆ ಬರುತ್ತಿದ್ದಾರೆ.
ದೊಡ್ಡ ಮಟ್ಟದ ಆರ್ಥಿಕ ವಂಚನೆ ಆಗಿರುವುದರಿಂದ ಇಡಿ, ಐಟಿ ಇಲಾಖೆಯವರೂ ಈತನ ಬೆನ್ನು ಬೀಳುವ ಸಾಧ್ಯತೆಯಿದೆ. ಈತನ ಜೊತೆಗೆ ಸಂಪರ್ಕದಲ್ಲಿದ್ದ ಏಜಂಟರನ್ನೂ ಪೊಲೀಸರು ಪತ್ತೆ ಮಾಡುತ್ತಿದ್ದು, ಇನ್ನೊಂದು ವಾರದಲ್ಲಿ ಎಲ್ಲ ಚಿತ್ರಣ ಲಭಿಸಲಿದೆ ಎಂಬ ವಿಶ್ವಾಸದಲ್ಲಿ ಸೆನ್ ಕ್ರೈಮ್ ವಿಭಾಗದ ಪೊಲೀಸರಿದ್ದಾರೆ.
In a major financial fraud case unfolding in Mangaluru, a businessman from Bihar has lodged a complaint against Roshan Saldanha, accusing him of duping him of over ₹10 crore. Following legal protocol, since the amount exceeds ₹10 crore, the case has been officially handed over to the Criminal Investigation Department (CID) for a deeper probe, confirmed Police Commissioner Sudhir Reddy.
14-05-26 10:19 am
HK News Staffer
ಬಿಜೆಪಿ ಸರ್ಕಾರ ನಿಷೇಧಿಸಿದ್ದ ಹಿಜಾಬ್ ನಿಷೇಧ ಹಿಂಪಡೆ...
13-05-26 10:18 pm
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
14-05-26 12:36 pm
HK News Staffer
ಜ್ಯೋತಿಷಿಗೆ ಕೂಡದ ಜಾತಕ ; ಟೀಕೆಗಳ ಸುಳಿಯಲ್ಲಿ ವಿಜಯ್...
13-05-26 06:42 pm
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
14-05-26 05:39 pm
HK News Staffer
ಮಂಗಳೂರಿನಲ್ಲೂ "ಲಾಕ್ಡ್ ಹೌಸ್ ಬೀಟ್ ಸಿಸ್ಟಮ್" ಜಾರಿ...
13-05-26 11:02 pm
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
14-05-26 01:41 pm
HK News Staffer
ತುಮಕೂರಿನ ಮದರಸಾದಲ್ಲಿ ಸಿಬ್ಬಂದಿಗಳಿಂದ ಮಕ್ಕಳ ಮೇಲೆ...
14-05-26 10:49 am
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; 30 ಸಾವಿರದಿಂದ 28...
13-05-26 09:25 pm
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm