ಬ್ರೇಕಿಂಗ್ ನ್ಯೂಸ್
18-07-25 12:01 pm Mangalore Correspondent ಕ್ರೈಂ
ಮಂಗಳೂರು, ಜುಲೈ 18 : ಜಾಲತಾಣ ಬಳಸಿಕೊಂಡು ಕಂಪನಿ ಅಧಿಕಾರಿಗಳನ್ನು ಈ ರೀತಿಯೂ ಮೋಸ ಮಾಡಬಹುದು ಅನ್ನೋದಕ್ಕೆ ಸಾಕ್ಷಿಯೆನ್ನುವಂತೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಕಂಪನಿಯೊಂದರ ಎಂಡಿ ಹೆಸರಿನಲ್ಲಿ ನಕಲಿ ವಾಟ್ಸಪ್ ನಂಬರ್ ಸೃಷ್ಟಿಸಿಕೊಂಡು ಅಕೌಂಟೆಂಟ್ ಸಿಬಂದಿಯಿಂದಲೇ ಬೇರೊಂದು ಖಾತೆಗೆ 26 ಲಕ್ಷ ರೂಪಾಯಿ ವರ್ಗಾವಣೆ ಮಾಡಿಸಿದ ಬಗ್ಗೆ ದೂರು ದಾಖಲಾಗಿದೆ.
ಕಂಪನಿಯ ಆಡಳಿತ ನಿರ್ದೇಶಕ ಅರವಿಂದ ಕುಮಾರ್ ಹೆಸರಿನಲ್ಲಿ ಸಂಸ್ಥೆಯ ಮಂಗಳೂರಿನ ಕಚೇರಿಯಲ್ಲಿ ಕೆಲಸ ಮಾಡುವ ಅಕೌಂಟೆಂಟ್ ಯುವತಿಯ ವಾಟ್ಸಪ್ ಗೆ ಜುಲೈ 15ರಂದು ಇಂಗ್ಲಿಷ್ ನಲ್ಲಿ ಮೆಸೇಜ್ ಬಂದಿತ್ತು. ಇದು ನನ್ನ ಹೊಸ ವಾಟ್ಸಪ್ ನಂಬರ್, ಸೇವ್ ಮಾಡಿಕೊಳ್ಳಿ ಎಂದಿತ್ತು. ಕಂಪನಿಯ ಹಣದ ವಹಿವಾಟು ಎಲ್ಲ ನೋಡಿಕೊಂಡಿದ್ದ ಯುವತಿ ವಾಟ್ಸಪ್ ಡಿಪಿಯಲ್ಲಿ ಅಸಲಿ ಎಂಡಿ ಅರವಿಂದ್ ಅವರದ್ದೇ ಫೋಟೋ ಇದ್ದುದರಿಂದ ಇವರದ್ದೇ ಮೆಸೇಜ್ ಎಂದು ನಂಬಿದ್ದರು. ಯುವತಿ ನಂಬರನ್ನು ಸೇವ್ ಮಾಡಿಕೊಂಡಿದ್ದರು. ಜುಲೈ 16ರಂದು ಕಂಪನಿಯ ಖಾತೆಯಲ್ಲಿ ಎಷ್ಟು ಹಣ ಇದೆಯೆಂದು ಚೆಕ್ ಮಾಡಿ ಹೇಳುವಂತೆ ಸೂಚನೆ ಬಂದಿತ್ತು. ಇತ್ತ ಯುವತಿ ಕಂಪನಿ ಖಾತೆ ಚೆಕ್ ಮಾಡಿ ಹಣ ಇರುವ ಬಗ್ಗೆಯೂ ಆ ಕುರಿತ ವಿವರಗಳನ್ನೂ ವಾಟ್ಸಪ್ ಮಾಡಿದ್ದಳು.
ಆನಂತರ, ಬೇರೊಂದು ಪ್ರಾಜೆಕ್ಟ್ ಫೈನಲ್ ಮಾಡಿದ್ದು ಮುಂಗಡ ಹಣ ನೀಡಬೇಕಿದೆ. ಅದಕ್ಕಾಗಿ ತಾನು ಕಳಿಸುವ ಯೆಸ್ ಬ್ಯಾಂಕ್ ಖಾತೆಗೆ 26 ಲಕ್ಷ ಹಣವನ್ನು ಕೂಡಲೇ ನೆಫ್ಟ್ ಮಾಡುವಂತೆ ವಾಟ್ಸಪ್ ಮೆಸೇಜ್ ಮಾಡಿ ಸೂಚಿಸಲಾಗಿತ್ತು. ಇದನ್ನು ನಂಬಿದ ಅಕೌಂಟೆಂಟ್ ಯುವತಿ, ಅಸಲಿ ಎಂಡಿ ಅರವಿಂದ್ ಅವರೇ ಈ ಸೂಚನೆ ನೀಡಿದ್ದಾರೆಂದು ಭಾವಿಸಿ 26 ಲಕ್ಷವನ್ನು ಅಪರಿಚಿತ ಸೂಚಿಸಿದ ಖಾತೆಗೆ ನೆಫ್ಟ್ ಮಾಡಿದ್ದರು. ಹಣ ವರ್ಗಾವಣೆ ಆಗಿರುವುದನ್ನು ತಿಳಿದ ಅಸಲಿ ಎಂಡಿ ಅರವಿಂದ್ ಕುಮಾರ್, ಅಕೌಂಟೆಂಟ್ ಬಳಿ ಈ ಬಗ್ಗೆ ಪ್ರಶ್ನೆ ಮಾಡಿದಾಗ ಅಪರಿಚಿತನ ಕರಾಮತ್ತು ತಿಳಿದುಬಂದಿದೆ. ಈ ಬಗ್ಗೆ ಕಂಪನಿಯ ಮ್ಯಾನೇಜರ್ ಜೆಸಿ ಪಾಟೀಲ್ ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಸದ್ರಿ ಅಕೌಂಟೆಂಟ್ ಒಂದು ವರ್ಷದಿಂದ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಯಾರು ಲೋಪ ಎಸಗಿದ್ದಾರೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
In a shocking case of cyber fraud, a young accountant working for a private company in Mangaluru was duped into transferring ₹26 lakh to an unknown bank account after receiving WhatsApp messages from a number impersonating the company’s Managing Director (MD).
09-07-26 02:56 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
08-07-26 11:04 pm
HK News Desk
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿ...
08-07-26 06:53 pm
ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ ಕೇಂದ್ರದಿಂದ 49.22...
08-07-26 01:17 pm
ರಾಮ ಮಂದಿರ ದೇಣಿಗೆ ಲೂಟಿ ; ಹಿಂದೂ ಸಂಘಟನೆಗಳು ಯಾಕೆ...
07-07-26 11:13 pm
09-07-26 05:34 pm
HK News Staffer
ಯಲ್ಲಾಪುರ ಅರಬೈಲ್ ಘಾಟ್ನಲ್ಲಿ ಲಾರಿ-ಕ್ರೂಸರ್ ಮುಖಾಮ...
09-07-26 11:38 am
ಅಡುಗೆ ವಿಚಾರದಲ್ಲಿ ಹೆಂಡತಿಯೊಂದಿಗೆ ಜಗಳ ; ಅಡ್ಡ ಬಂದ...
07-07-26 08:07 pm
Konaje Police, Accused Escapes, Mangalore: ಪೋ...
07-07-26 03:50 pm
Mangalore Panambur Truck Block; ಪಣಂಬೂರಿನಲ್ಲಿ...
06-07-26 04:49 pm