ಬ್ರೇಕಿಂಗ್ ನ್ಯೂಸ್
16-07-25 09:48 pm Mangaluru Correspondent ಕ್ರೈಂ
ಉಳ್ಳಾಲ, ಜು.16: ಒಂಟಿ ಮಹಿಳೆಯನ್ನ ಪ್ರಜ್ಞಾಹೀನಗೊಳಿಸಿ ಅತ್ಯಾಚಾರ ನಡೆಸಿ ಕೊಲೆಗೈದು ಮೃತದೇಹಕ್ಕೆ ಕಲ್ಲು ಕಟ್ಟಿ ಕೆರೆಗೆಸೆದು ಬಿಹಾರಕ್ಕೆ ಪರಾರಿಯಾಗಿದ್ದ ವಲಸೆ ಕಾರ್ಮಿಕನನ್ನ ಕೊಣಾಜೆ ಪೊಲೀಸರು ಕಡೆಗೂ ಬಂಧಿಸಿ ಕರೆತಂದಿದ್ದಾರೆ.
ಬಿಹಾರ ಮೂಲದ ವಲಸೆ ಕಾರ್ಮಿಕ ಫಿರೋಝ್ ಅಲಂ (26) ಬಂಧಿತ ಕೊಲೆ ಆರೋಪಿ. ಫಿರೋಝ್ ವಲಸೆ ಕಾರ್ಮಿಕನಾಗಿದ್ದು ಮೊಂಟೆಪದವು ಪ್ರದೇಶದಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿದ್ದನೆನ್ನಲಾಗಿದೆ.
ಕಳೆದ ಮೇ 29 ರಂದು ಮೊಂಟೆಪದವಿನ ಗುದ್ರು ಕೆರೆಯಲ್ಲಿ ಸೊಂಟಕ್ಕೆ ಕಲ್ಲುಗಳನ್ನು ಕಟ್ಟಿದ್ದ ಸ್ಥಿತಿಯಲ್ಲಿ ಸಕಲೇಶಪುರ ಮೂಲದ ಸುಂದರಿ(36) ಎಂಬ ಅವಿವಾಹಿತ ಮಹಿಳೆಯ ಮೃತದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಒಂದೂವರೆ ವರ್ಷಗಳಿಂದ ಮೊಂಟೆಪದವು ಪ್ರದೇಶದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಸುಂದರಿ ಅವರು ಜೀವನೋಪಾಯಕ್ಕಾಗಿ ಸ್ಥಳೀಯ ಮನೆಗಳಿಗೆ ತೆರಳಿ ಸ್ವಚ್ಚತಾ ಕೆಲಸ ನಿರ್ವಹಿಸುತ್ತಿದ್ದರು.
ಸುಂದರಿಯವರ ಬಾಡಿಗೆ ಮನೆಯಲ್ಲಿ ಮತ್ತೋರ್ವ ವಲಸೆ ಕಾರ್ಮಿಕ ವಾಸವಿದ್ದು ಹತ್ಯೆಯ ಕೆಲ ದಿನಗಳ ಹಿಂದಷ್ಟೆ ಆತ ಊರಿಗೆ ತೆರಳಿದ್ದನೆನ್ನಲಾಗಿದೆ. ಇದೇ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸುಂದರಿ ಅವರು ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಪಿರೋಝ್ ನುಗ್ಗಿ ಗಲಾಟೆ ನಡೆಸಿದ್ದು ಏಟು ತಗುಲಿ ಸುಂದರಿ ಪ್ರಜ್ನೆ ತಪ್ಪಿದ್ದರೆನ್ನಲಾಗಿದೆ. ಆಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸುಂದರಿಯನ್ನ ಅತ್ಯಾಚಾರಗೈದು ಬಳಿಕ ಕತ್ತು ಹಿಸುಕಿ ಕೊಲೆಗೈದು, ಮೃತದೇಹಕ್ಕೆ ಕಲ್ಲು ಕಟ್ಟಿ ಕೆರೆಗೆ ಎಸೆದಿರೋದಾಗಿ ಆರೋಪಿ ಫಿರೋಝ್ ಪೊಲೀಸರ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾನೆ.
In a chilling crime, a 26-year-old migrant worker from Bihar, who allegedly raped and murdered a 36-year-old unmarried woman, has been arrested by Konaje Police after he fled to Bihar following the crime. The accused, Firoz Alam, was employed as a construction laborer in the Montepadavu area near Mangaluru. According to police, he entered the woman’s house when she was alone, assaulted her, and rendered her unconscious. He then allegedly raped her while she was unconscious, strangled her to death, and later tied stones to her body and dumped it in a nearby lake to hide the crime.
07-02-26 05:09 pm
HK News Desk
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
08-02-26 10:18 pm
HK News Desk
25 ವರ್ಷಗಳ ಬಳಿಕ ಮುಂಬೈ ಪಾಲಿಕೆ ಬಿಜೆಪಿ ತೆಕ್ಕೆಗೆ ;...
07-02-26 10:53 pm
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
08-02-26 11:17 pm
HK News Desk
ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ ; ಕೋಡಿ- ಕನ್ಯಾನ...
08-02-26 10:10 pm
ಬೈಂದೂರು ಕ್ಷೇತ್ರದ ಮಾಜಿ ಶಾಸಕ, ಜನತಾ ಪರಿವಾರದ ಹಿರಿ...
07-02-26 12:55 pm
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
08-02-26 02:07 pm
Mangalore Correspondent
MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಪೊಲೀಸ್ ದಾ...
08-02-26 12:59 pm
Mangalore Robbery, Crime: ಕಳವಾರಿಗೆ ಮೆಹಂದಿ ಹೋಗ...
08-02-26 12:37 pm
ಫ್ರೀ ಫೈರ್ ಗೇಮ್ ಚಟ ; ಅಕ್ಕನ ಮಗನ ಕೊಂದಿದ್ದ ಮಾವ, ಪ...
07-02-26 10:48 pm
ಡಿಜಿಟಲ್ ಅರೆಸ್ಟ್ ; ಮಹಿಳೆಗೆ 15 ನಿಮಿಷದಲ್ಲಿ 50 ಲಕ...
07-02-26 10:07 pm