ಬ್ರೇಕಿಂಗ್ ನ್ಯೂಸ್
13-07-25 05:23 pm Bangalore Correspondent ಕ್ರೈಂ
ಬೆಂಗಳೂರು, ಜುಲೈ 13 : ತನ್ನ ಬಾಳ ಸಂಗಾತಿಯನ್ನು ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಹುಡುಕಲು ಹೋದ ಯುವಕನೊಬ್ಬ ಅದರಲ್ಲಿ ಕನೆಕ್ಟ್ ಆದ ಯುವತಿಯನ್ನು ನಂಬಿ 44 ಲಕ್ಷ ರೂಪಾಯಿ ಮೊತ್ತವನ್ನು ನಕಲಿ ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ ಮಾಡಿ ಪಂಗನಾಮ ಹಾಕಿಕೊಂಡಿದ್ದಾನೆ.
ಬೆಂಗಳೂರಿನಲ್ಲಿ ನೆಲೆಸಿರುವ ಉಳ್ಳಾಲ ಮೂಲದ ವ್ಯಕ್ತಿಯೊಬ್ಬ ಮೇ 5ರಂದು ಮ್ಯಾಟ್ರಿಮೋನಿಯಲ್ ಸೈಟ್ ತಡಕಾಡುತ್ತಿದ್ದಾಗ ಅರ್ಚನಾ ಎಂಬಾಕೆಯ ಪ್ರೊಫೈಲ್ ಕಣ್ಣಿಗೆ ಬಿದ್ದಿತ್ತು. ನೋಡಲು ಅಂದವಾಗಿದ್ದ ಆಕೆಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ಆಕೆ ರಿಕ್ವೆಸ್ಟ್ ಸ್ವೀಕರಿಸಿ ವಾಟ್ಸಪ್ ನಂಬರ್ ಕೇಳಿ ಚಾಟಿಂಗ್ ಆರಂಭಿಸಿದ್ದಳು. ಅರ್ಚನಾ ತನ್ನನ್ನು ಜರ್ಮನಿಯಲ್ಲಿ ವಾಸವಿದ್ದೇನೆಂದು ಹೇಳಿದ್ದಲ್ಲದೆ, ವಾಟ್ಸಪ್ ನಲ್ಲಿ ಚಾಟಿಂಗ್ ಮಾಡುತ್ತ ಆತ್ಮೀಯತೆ ಬೆಳೆಸಿದ್ದಳು.
ಕೆಲವು ದಿನಗಳ ನಂತರ ಇಬ್ಬರೂ ತಮ್ಮ ಆಸಕ್ತಿ, ಇನ್ನಿತರ ವಿಷಯಗಳನ್ನು ವಿನಿಮಯ ಮಾಡಿಕೊಂಡಿದ್ದರು. ಈ ನಡುವೆ, ಕ್ರಿಪ್ಟೋ ಕರೆನ್ಸಿ ಮೇಲೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ಹೇಳಿ ಆಕೆ ಲಿಂಕ್ ಒಂದನ್ನು ಷೇರ್ ಮಾಡಿದ್ದಳು. ಲಾಭದ ಬಗ್ಗೆ ವಿವರವನ್ನೂ ಹೇಳಿಕೊಂಡಿದ್ದಳು. ಹೇಗೂ ಮದುವೆಯಾಗಲು ಬಯಸಿದ್ದ ಹುಡುಗಿಯೇ ಆಫರ್ ಮಾಡಿದ್ದಾಳೆಂದ ಮೇಲೆ ತಾನು ಕಡಿಮೆಯಾಗುವುದು ಬೇಡ ಎಂದು ಕ್ರಿಪ್ಟೋ ಮೇಲೆ ಹೂಡಿಕೆಗೆ ಯುವಕನೂ ಒಪ್ಪಿಗೆ ನೀಡಿದ್ದ. ಆಕೆ ಕಳಿಸಿದ್ದ www.bitcoin.-az.com ಎನ್ನುವ ನಕಲಿ ವೆಬ್ ಸೈಟ್ ನಲ್ಲಿ ತನ್ನ ಖಾತೆಯನ್ನು ತೆರೆದಿದ್ದ ಯುವಕ ಮೊದಲಿಗೆ 1.50 ಲಕ್ಷ ಹೂಡಿಕೆ ಮಾಡಿದ್ದಾನೆ. ಜರ್ಮನಿ ದೇಶದ ಹೆಚ್ಚುವರಿ ಟ್ಯಾಕ್ಸ್ ಎಂದು ಪ್ರತಿ ಹೂಡಿಕೆಯ ಮೇಲೂ ಹತ್ತು ಸಾವಿರವನ್ನೂ ಪಡೆಯಲಾಗಿತ್ತು.
ಇದೇ ರೀತಿ ಮೇ 18ರಿಂದ ತೊಡಗಿ ಜೂನ್ 23ರ ವರೆಗೂ ಬೆಂಗಳೂರಿನ ವ್ಯಕ್ತಿ ನಕಲಿ ಕ್ರಿಪ್ಟೋ ವೆಬ್ ಸೈಟ್ ಮೇಲೆ ಹೂಡಿಕೆ ಮಾಡಿದ್ದು, ಶಂಕಿತ ಯುವತಿ ನೀಡಿದ್ದ ಏಳು ಬ್ಯಾಂಕ್ ಖಾತೆ ಮತ್ತು ಯುಪಿಐ ಐಡಿ ಮೇಲೆಯೂ ಹಣ ಸಂದಾಯ ಮಾಡಿದ್ದ. ಆನಂತರ ತನ್ನ ಹಣವನ್ನು ಮರಳಿ ಪಡೆಯಲು ಮುಂದಾಗಿದ್ದು ಇದರ ಬಗ್ಗೆ ಆಕೆಗೂ ತನ್ನ ವಹಿವಾಟು ದೊಡ್ಡ ಮೊತ್ತಕ್ಕೆ ಹೋಗಿರುವುದನ್ನೂ ತಿಳಿಸಿದ್ದ. ಹಣ ಹಾಕುತ್ತಿದ್ದಷ್ಟು ದಿನವೂ ನಿರಂತರ ಟಚ್ ನಲ್ಲಿದ್ದ ಯುವತಿ ಮತ್ತಷ್ಟು ಹಣ ಹಾಕುವಂತೆ ಪ್ರೋತ್ಸಾಹ ನೀಡುತ್ತಿದ್ದಳು. ಈ ವ್ಯಕ್ತಿ ತನ್ನ ಹಣ ಹಿಂತಿರುಗಿ ಪಡೆಯಲು ಯತ್ನಿಸಿದಾಗ, ಜರ್ಮನಿ ಆಗಿರುವುದರಿಂದ ಹೆಚ್ಚುವರಿ ತೆರಿಗೆ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಳು. ಆನಂತರ ತನ್ನ ಸಂಪರ್ಕವನ್ನೇ ಕಡಿತ ಮಾಡಿದ್ದು ಹಣ ಹೂಡಿದ್ದ ಯುವಕನನ್ನು ಮೋಸಗೊಳಿಸಿದ್ದಾಳೆ. ಮೋಸ ಅರಿವಾಗುತ್ತಲೇ ಯುವಕ ಬೆಂಗಳೂರಿನ ಪಶ್ಚಿಮ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
A young man from Bengaluru has allegedly lost ₹44 lakh after being tricked into investing in a fake cryptocurrency scheme by a woman he met through a matrimonial website.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm