ಬ್ರೇಕಿಂಗ್ ನ್ಯೂಸ್
10-07-25 08:09 pm HK News Desk ಕ್ರೈಂ
ರಾಮನಗರ ಜು.10: ಮನೆಯಲ್ಲಿ ಒಂಟಿಯಾಗಿ ಇದ್ದ 14 ವರ್ಷದ ಬಾಲಕಿಯ ಮೇಲೆ ಆತ್ಯಚಾರವೆಸಗಿ ನಂತರ ಆಕೆಯನ್ನ ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ತಾವರೆಕೆರೆ ನಗರದಲ್ಲಿ ನಡೆದಿದೆ.
ಘಟನೆ ನಡೆದ ಕೆಲವೇ ತಾಸುಗಳಲ್ಲಿ ಆರೋಪಿ ಯಲ್ಲಪ್ಪ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಯಚೂರು ಜಿಲ್ಲೆಯ 25 ವರ್ಷದ ಯಲ್ಲಪ್ಪ ಕಟ್ಟಡ ಕಾರ್ಮಿಕ. ತಾವರೆಕೆರೆಯಲ್ಲಿ ಒಬ್ಬನೇ ನೆಲೆಸಿದ್ದ ಆರೋಪಿ, ಬಾಲಕಿ ಮನೆ ಬಳಿ ಆಗಾಗ ಬಂದು ಹೋಗುತ್ತಿದ್ದ. ದಂಪತಿ ಕೆಲಸಕ್ಕೆ ಮತ್ತು ಅವರ ಮಕ್ಕಳು ಶಾಲೆಗೆ ಹೋದ ನಂತರ, ಬಾಲಕಿ ಒಬ್ಬಳೇ ಮನೆಯಲ್ಲಿರುವುದನ್ನು ಅರಿತಿದ್ದ.
ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಬೈಕ್ನಲ್ಲಿ ಬಾಲಕಿ ಮನೆಗೆ ಬಂದಿದ್ದ ಆರೋಪಿ, ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಬಲವಾದ ಪ್ರತಿರೋಧ ತೋರಿ ಕೂಗಿಕೊಳ್ಳಲು ಯತ್ನಿಸಿದ್ದಾಳೆ. ಆಗ ಆರೋಪಿ, ಎಲ್ಲಿ ತಾನು ಸಿಕ್ಕಿ ಬೀಳುತ್ತೆನೊ ಎಂಬ ಭಯದಿಂದ ಮನೆಯೊಳಗೆ ಇದ್ದ ದೊಣ್ಣೆಯಿಂದ ತಲೆ ಮತ್ತು ಮುಖಕ್ಕೆ ಹೊಡೆದು ಕೊಲೆ ಮಾಡಿದ್ದಾನೆ.
ಕೃತ್ಯದ ಬಳಿಕ ಮನೆಯಿಂದ ಹಾಗೆಯೇ ಹೋದರೆ ಯಾರಿಗಾದರೂ ಅನುಮಾನ ಬರಲಿದೆ ಅಂದುಕೊಂಡು, ಒಳಗಿದ್ದ ಸಿಲಿಂಡರ್ ತೆಗೆದುಕೊಂಡು ಹೋಗಿದ್ದಾನೆ. ಮಧ್ಯಾಹ್ನ 2ರ ಸುಮಾರಿಗೆ ಬಾಲಕಿ ಸಹೋದರ ಮನೆಗೆ ಬಂದಾಗ ತನ್ನ ಅಕ್ಕ ಅರೆ ನಗ್ನಾವಸ್ಥೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದ.
ಸುಳಿವು ಕೊಟ್ಟ ಕ್ಯಾಮೆರಾ ;
ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಆಗ ಆರೋಪಿ ಯಲ್ಲಪ್ಪ ಬೈಕ್ನಲ್ಲಿ ಮನೆ ಬಳಿ ಬಂದು, ಕೆಲ ನಿಮಿಷದ ಬಳಿಕ ಅನುಮಾನಾಸ್ಪದವಾಗಿ ಸಿಲಿಂಡರ್ನೊಂದಿಗೆ ಹೋಗುವುದು ಗೊತ್ತಾಯಿತು. ಆತನ ಮಾಹಿತಿ ವಿವರ ಕಲೆಹಾಕಿ ರಾತ್ರಿಯೇ ಆತನನ್ನು ವಶಕ್ಕೆ ಪಡೆಯಲಾಗಿದೆ.
In a horrifying incident near Bengaluru, a 14-year-old girl was brutally raped and murdered in Tavarekere town while she was alone at home. The accused, identified as 25-year-old Yallappa, was arrested by police within hours of the crime, thanks to a key clue involving a stolen gas cylinder.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm