ಬ್ರೇಕಿಂಗ್ ನ್ಯೂಸ್
26-03-25 08:38 pm Bangalore Correspondent ಕ್ರೈಂ
ಬೆಂಗಳೂರು, ಮಾ.26 : ಕಾನೂನು ಪಾಲಿಸಬೇಕಾದ ಪೊಲೀಸ್ ಇನ್ಸ್ ಪೆಕ್ಟರ್ ಅಧಿಕಾರಿಯೇ ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ಕೊಟ್ಟು ಸೊಂಟದ ಬೆಲ್ಟ್ ನಲ್ಲಿ ಬಾಸುಂಡೆ ಬರುವಂತೆ ಹೊಡೆದು ಹಲ್ಲೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಠಾಣೆಯಲ್ಲಿ ಪಿಎಸ್ಐ ಆಗಿರುವ ಪಿ.ಕಿಶೋರ್ ಮತ್ತು ಕುಟುಂಬಸ್ಥರ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪತಿ ಕಿಶೋರ್ ಎಸಗಿರುವ ಹಲ್ಲೆ, ಕಿರುಕುಳದ ಬಗ್ಗೆ ವೈದ್ಯಕೀಯ ದಾಖಲೆ ಸಹಿತ ದೂರು ನೀಡಿರುವ ಪತ್ನಿ ವರ್ಷಾ (27) ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಪಿಎಸ್ಐ ಕಿಶೋರ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
2024ರ ಫೆಬ್ರವರಿ ತಿಂಗಳಲ್ಲಿ ನೆಲಮಂಗಲ ನಿವಾಸಿ ಕಿಶೋರ್ ಜೊತೆಗೆ ನಾಗರಬಾವಿ ನಿವಾಸಿ ಬಿಬಿಎ ಪದವೀಧರೆ ವರ್ಷಾ ಮದುವೆ ಅದ್ದೂರಿಯಾಗಿ ನಡೆದಿತ್ತು. ಮದುವೆ ಸಮಯದಲ್ಲಿ ಬ್ರೇಸ್ಲೆಟ್, ಉಂಗುರ, ಎರಡು ಲಕ್ಷ ರೂ. ನಗದನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಮದುವೆ ಖರ್ಚಿಗೆಂದು ಪ್ರತ್ಯೇಕವಾಗಿ ಹತ್ತು ಲಕ್ಷ ರೂ.ವನ್ನು ಕಿಶೋರ್ ಕುಟುಂಬಸ್ಥರು ಹೆಣ್ಣಿನ ಕಡೆಯಿಂದ ಪಡೆದಿದ್ದರು. ಇದಲ್ಲದೆ, 23.60 ಲಕ್ಷ ರೂ. ಮೌಲ್ಯದ ಕಾರನ್ನು ಕಿಶೋರ್ ಅವರಿಗೆ ಗಿಫ್ಟ್ ಮಾಡಲಾಗಿತ್ತು. ಸರಕಾರಿ ನೌಕರಿಯಲ್ಲಿ ಇರುವುದರಿಂದ ತೊಂದರೆಯಾಗುತ್ತೆ ಎಂದು ಹೇಳಿ ತನ್ನ ತಂದೆಯ ಹೆಸರಿನಲ್ಲಿ ಖರೀದಿಸಿದ್ದ ಕಾರನ್ನು ಕಿಶೋರ್ ಅವರೇ ಬಳಸುತ್ತಿದ್ದಾರೆ. ಇಷ್ಟಾದರೂ ತವರು ಮನೆಯಿಂದ ಪ್ರತಿ ತಿಂಗಳು 50 ಸಾವಿರ ತರುವಂತೆ ಕಿಶೋರ್ ಮತ್ತು ಆತನ ಕುಟುಂಬಸ್ಥರು ಪೀಡಿಸುತ್ತಿದ್ದರು ಎಂದು ವರ್ಷಾ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆಯಾದ ಕೆಲವು ತಿಂಗಳಲ್ಲೇ ತವರು ಮನೆಯಿಂದ ಹಣ ತರುವಂತೆ ಪೀಡಿಸಿ ಹಲ್ಲೆ ಮಾಡಿದ್ದರು. ತಲೆಗೆ ಗನ್ ಇಟ್ಟು ಕೊಲ್ಲುವುದಾಗಿ ಬೆದರಿಸುತ್ತಿದ್ದರು. ಮಾರ್ಚ್ 21ರಂದು ರಾತ್ರಿ 9 ಗಂಟೆಯಿಂದ ತಡರಾತ್ರಿ ವರೆಗೂ ಜಗಳ ಮಾಡಿ ಹಲ್ಲೆ ನಡೆಸಿದ್ದು, ಪೊಲೀಸ್ ಬೆಲ್ಟ್ ನಿಂದ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಚಪಾತಿ ಲಟ್ಟಣಿಗೆಯಿಂದ ಮುಖಕ್ಕೆ ಹೊಡೆದಿದ್ದು, ಇದರಿಂದಾಗಿ ಕಿವಿಯಲ್ಲಿ ರಕ್ತ ಬಂದಿತ್ತು. ಅದೇ ದಿನ ರಾತ್ರಿ ತಲೆದಿಂಬಿನಿಂದ ಉಸಿರುಕಟ್ಟಿಸಿ ಕೊಲ್ಲಲು ಪ್ರಯತ್ನಿಸಿದ್ದರು ಎಂದು ವರ್ಷಾ ದೂರಿನಲ್ಲಿ ತಿಳಿಸಿದ್ದಾರೆ. ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದುದನ್ನು ತಿಳಿದ ನೆರೆಯವರು ಪೋಷಕರಿಗೆ ತಿಳಿಸಿದ್ದರು. ಮರುದಿನ ಬೆಳಗ್ಗೆ ಅವರು ಮನೆಗೆ ಬಂದು ನಿತ್ರಾಣ ಸ್ಥಿತಿಯಲ್ಲಿದ್ದ ತನ್ನನ್ನು ಬೆಂಗಳೂರಿಗೆ ಕರೆತಂದಿದ್ದರು. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ, ವೈದ್ಯರ ಸಲಹೆ ಮೇರೆಗೆ ಕಿವಿ ಹಾಗೂ ಗಂಟಲು ಶಸ್ತ್ರಚಿಕಿತ್ಸಕರ ಬಳಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ವರ್ಷಾ ತಿಳಿಸಿದ್ದಾರೆ.
ಪ್ರಕರಣ ಸ್ಥಳೀಯ ಠಾಣೆಗೆ ವರ್ಗಾವಣೆ
ಪಿಎಸ್ಐ ಕಿಶೋರ್, ಅವರ ತಂದೆ- ತಾಯಿ, ಸೋದರನ ವಿರುದ್ಧ ಕೊಲೆಯತ್ನ, ಕ್ರಿಮಿನಲ್ ಪಿತೂರಿ, ವರದಕ್ಷಿಣೆ ಕಿರುಕುಳ, ಅಪಾಯಕಾರಿ ಮಾರಕಾಸ್ತ್ರ ಬಳಸಿ ಹಲ್ಲೆ ಆರೋಪದಲ್ಲಿ ಎಫ್ಐಆರ್ ದಾಖಲಾಗಿದೆ. ಧರ್ಮಸ್ಥಳ ಠಾಣೆ ಬಳಿಯಿರುವ ಕಿಶೋರ್ ಅವರ ಮನೆಯಲ್ಲಿಯೇ ಕೃತ್ಯ ನಡೆದಿದ್ದು ಈ ನಿಟ್ಟಿನಲ್ಲಿ ಪ್ರಕರಣದ ತನಿಖೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಪೊಲೀಸರಿಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ ಎಂದು ಚಂದ್ರಾಲೇಔಟ್ ಠಾಣೆ ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ದಕ್ಷಿಣ ಕನ್ನಡ ಎಸ್ಪಿ ಎನ್.ಯತೀಶ್ ಪ್ರತಿಕ್ರಿಯಿಸಿದ್ದು, ಧರ್ಮಸ್ಥಳ ಠಾಣೆ ಪಿಎಸ್ಐ ಕಿಶೋರ್ ವಿರುದ್ಧ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ. ಪ್ರಕರಣದ ತನಿಖೆ ಇಲ್ಲಿಗೆ ವರ್ಗಾಯಿಸಬೇಕಿದ್ದು ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವರ್ಗಾವಣೆಗೆ ಹತ್ತು ಲಕ್ಷ ರೂ. ಲಂಚ
ಮದುವೆಯಾದ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಠಾಣೆಯಲ್ಲಿದ್ದ ಪಿಎಸ್ಐ ಕಿಶೋರ್, ತನ್ನ ವರ್ಗಾವಣೆಗಾಗಿ ಮೇಲಧಿಕಾರಿಗಳಿಗೆ ಹತ್ತು ಲಕ್ಷ ರೂ. ಲಂಚ ನೀಡಬೇಕೆಂದು ಪತ್ನಿಯಲ್ಲಿ ಹಣ ಕೇಳಿದ್ದ. ಮದುವೆಯಾದ 15 ದಿನಕ್ಕೇ ಈ ಠಾಣೆಯಲ್ಲಿ ಹೆಚ್ಚಿನ ಆದಾಯ ಸಿಗುತ್ತಿಲ್ಲ. ಹೀಗಾಗಿ ಬೇರೆ ಠಾಣೆಗೆ ವರ್ಗಾವಣೆಗೆ ಪ್ರಯತ್ನಿಸುತ್ತಿದ್ದೇನೆ. ವರ್ಗಾವಣೆ ಮಾಡಿಕೊಳ್ಳಲು ಮೇಲಿನ ಅಧಿಕಾರಿಗಳಿಗೆ 10 ಲಕ್ಷ ರೂ. ಲಂಚ ನೀಡಬೇಕು. ಇದಕ್ಕಾಗಿ ನಿನ್ನ ತಂದೆಯಿಂದ 10 ಲಕ್ಷ ಹಣ ಕೊಡಿಸು ಎಂದು ಕಿಶೋರ್ ಕಿರುಕುಳ ನೀಡಿದ್ದರು ಎಂಬುದಾಗಿಯೂ ವರ್ಷಾ ದೂರಿನಲ್ಲಿ ತಿಳಿಸಿದ್ದಾರೆ.
In a shocking incident, a Police Sub-Inspector (PSI) from Dharmasthala P Kishor has been accused of violently attacking his wife with a belt and threatening her life with a firearm. The incident has raised serious concerns regarding domestic violence and abuse of power among law enforcement officials.
12-07-25 10:47 pm
HK News Desk
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
ಸಿಎಂ ಬದಲಾವಣೆ ಎಲ್ಲ ಮುಗಿದ ಕಥೆ, ಸೆಪ್ಟೆಂಬರ್ನಲ್ಲಿ...
11-07-25 05:41 pm
24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ;...
11-07-25 04:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
12-07-25 11:00 pm
Mangalore Correspondent
Mangalore Accident, Bolero, Deralakatte: ದೇರಳ...
12-07-25 10:26 pm
Gas Leak at MRPL, Mangalore, death: ಎಂಆರ್ ಪಿಎ...
12-07-25 01:42 pm
Dharmasthala News, Dead bodies, Court: ಧರ್ಮಸ್...
11-07-25 08:55 pm
Dc Mangalore, Darshan; ಯುವ ಜಿಲ್ಲಾಧಿಕಾರಿ ಚುರುಕ...
10-07-25 07:23 pm
12-07-25 11:10 pm
Mangalore Correspondent
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm
ಮಂಗಳೂರಿಗೆ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಡ್ರಗ್ಸ್...
11-07-25 07:13 pm