ಎಲ್ಲರಂತೆ ನನಗೂ ಆಕಾಂಕ್ಷೆ ಇದೆ  ; ಕುರ್ಚಿ ಫೈಟ್ ನಡುವೆ ಸಿಎಂ ಆಗುವ ಆಸೆ ಬಿಚ್ಚಿಟ್ಟ ಗೃಹ ಸಚಿವ ಪರಮೇಶ್ವರ್

01-01-26 06:21 pm       Bangalore Correspondent   ಕರ್ನಾಟಕ

ಹೊಸ ವರ್ಷದ ಮೊದಲ ದಿನವೇ ಸಿಎಂ ಆಗುವ ಆಕಾಂಕ್ಷೆಯನ್ನು ಗೃಹ ಸಚಿವ ಪರಮೇಶ್ವರ್‌ ವ್ಯಕ್ತಪಡಿಸಿದರು.

ಬೆಂಗಳೂರು, ಜ 01, 26: ಹೊಸ ವರ್ಷದ ಮೊದಲ ದಿನವೇ ಸಿಎಂ ಆಗುವ ಆಕಾಂಕ್ಷೆಯನ್ನು ಗೃಹ ಸಚಿವ ಪರಮೇಶ್ವರ್‌ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಮಾತಾಡಿದ ಅವರು, 2026ರಲ್ಲಿ ತಮಗೆ ರಾಜಕೀಯ ಪದೋನ್ನತಿ ಸಿಗಲಿದೆ ಅನ್ನೋ ಆಶಾವಾದ ವ್ಯಕ್ತಪಡಿಸಿದರು. ಪದೋನ್ನತಿ ವಿಚಾರ ನಮ್ಮ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಹೈಕಮಾಂಡ್ ನವ್ರು ತೀರ್ಮಾನ ಮಾಡಿದರೆ ಆಗುತ್ತೆ. ನಾನು ಯಾವತ್ತೂ ಇಲ್ಲಿಯವರೆಗೂ ಆಶಾವಾದಿಯಾಗಿಯೇ ಬದುಕಿದ್ದೇನೆ, ಅದೇನು ಹೊಸದಾಗಿ ಆಗಬೇಕು ಅಂತೇನಿಲ್ಲ ಎಂದರು.

ಎಲ್ಲರಿಗೂ ಜೀವನದಲ್ಲಿ ಏನೇನೋ ಆಗಬೇಕು ಅಂತ ಇರುತ್ತೆ. ಮನುಷ್ಯನಿಗೆ ಆಕಾಂಕ್ಷೆ ಅನ್ನೋದು‌ ಇರಲೇಬೇಕು, ಇಲ್ಲಾಂದ್ರೆ ಮನುಷ್ಯ ಅನಿಸಿಕೊಳ್ಳಲ್ಲ. ನನಗೂ ಆಕಾಂಕ್ಷೆ ಇದೆ, ಎಲ್ಲರ ರೀತಿಯಲ್ಲಿ ನನಗೂ ಇದೆ.‌ ರಾಜಕೀಯ ಸೇರಿದಾಗ ಶಾಸಕ ಆಗಬೇಕು, ನಂತರ ಮಂತ್ರಿ ಆಗಬೇಕು ಅಂತೆಲ್ಲ ಆಸೆ ಇರುತ್ತೆ.‌ ಒಂದೊಂದು ಹಂತದಲ್ಲೂ ಮುಂದಿನ ಹಂತಕ್ಕೆ‌ ಹೋಗಬೇಕು ಅಂತ ಇರುತ್ತೆ. ಅದೆಲ್ಲ ನಮ್ಮ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅದಕ್ಕೆ ವಾತಾವರಣ ಪೂರಕವಾಗಿದೆಯಾ ಇಲ್ವಾ ಅಂತ ನೀವೇ ಗಮನಿಸ್ತಿದ್ದೀರಲ್ಲ. ಯಾರ‍್ಯಾರಿಗೆ ವಾತಾವರಣ ಪೂರಕವಾಗಿದೆ ಯಾರಿಗೆ ಇಲ್ಲ ಅಂತ ನಿಮ್ಮ ಕ್ಯಾಮೆರ‌ ಲೆನ್ಸ್‌ಗಳಲ್ಲಿ ನೀವು ಸೂಕ್ಷ್ಮವಾಗಿ ಗಮನಿಸ್ತಿದ್ದೀರಲ್ಲ, ನಿಮಗೆ ಎಲ್ಲಾ ಕಾಣ್ಸತ್ತೆ ಎಂದರು.

On the first day of the new year, Karnataka Home Minister Dr. G. Parameshwara openly acknowledged his aspiration to become Chief Minister. Speaking in Bengaluru, he said political elevation depends on the Congress high command, expressing hope that 2026 may bring a promotion. Parameshwara noted that ambition is natural for every individual, adding that politicians also wish to rise step-by-step—from MLA to minister and beyond.