ಬ್ರೇಕಿಂಗ್ ನ್ಯೂಸ್
20-02-26 09:07 pm HK News Desk ಕ್ರೈಂ
ಗದಗ, ಫೆ 20: ಲಕ್ಕುಂಡಿ ನಿಧಿ ಪತ್ತೆಯ ಪ್ರಕರಣದ ಬೆನ್ನಲ್ಲೇ, ಇದೀಗ ಮತ್ತೊಂದು ನಿಧಿ ಶೋಧದ ಮೋಸದ ದೊಡ್ಡ ಜಾಲ ಬಯಲಾಗಿದೆ. ಹಳೆ ಪ್ರಕರಣ ಇದಾಗಿದ್ದು, ಹೊಸ ತಿರುವು ಸಿಕ್ಕಿದೆ. 01-01-2021 ರಿಂದ 30-05-2022ರ ಅವಧಿಯಲ್ಲಿ ನಡೆದ ನಿಧಿ ಶೋಧ ಪ್ರಕರಣದಲ್ಲಿ ಪೊಲೀಸರ ತನಿಖೆ ವೇಳೆ ನಕಲಿ ಬಂಗಾರದ ಬಿಸ್ಕತ್ ಪತ್ತೆಯಾಗಿದ್ದು, ನಿಧಿ ಹೆಸರಿನಲ್ಲಿ ನಡೆದ ಅಂತಾರಾಜ್ಯ ಮಟ್ಟದ ಮೋಸ ಇದೀಗ ಬಹಿರಂಗವಾಗಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದು, ಅಂತಾರಾಜ್ಯ ಮೋಸಗಾರರ ಜಾಲವನ್ನು ಗದಗ ಗ್ರಾಮೀಣ ಪೊಲೀಸರು ಭೇದಿಸಿದ್ದು, ಅಂದು ಲಕ್ಕುಂಡಿಯಲ್ಲಿ ನಿಧಿ ಹುಡುಕಿ ಕೊಡುವುದಾಗಿ ಮೋಸ ಮಾಡಿದ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಉತ್ತರಾಖಂಡದ ಕಿಂಗ್ಪಿನ್ ಬಂಧನ:
ಉತ್ತರಾಖಂಡದ ಕಾಶಿಪುರ ಮೂಲದ ಹಜರತ್ ಮೌಲ್ವಿ ಎಂಬಾತನೇ ಈ ನಿಧಿ ಶೋಧದ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದು, ಈತನನ್ನು ಗದಗ ಪೊಲೀಸರು ಈಗ ಬಂಧಿಸಿದ್ದಾರೆ. ಆರೋಪಿಯು ಆರು ಅಡಿ ಆಳದ ಗುಂಡಿ ತೆಗೆಸಿ, ಅದರಲ್ಲಿ ಹಂಡಿ ಇಟ್ಟು ಹಂಡಿಯೊಳಗೆ ಬಂಗಾರದ ನಾಣ್ಯಗಳಿವೆ ಎಂದು ಹಲವರನ್ನು ನಂಬಿಸಿ ಜನರಿಗೆ ಮೋಸ ಮಾಡುತ್ತಿದ್ದ. ಹೀಗೆ ಹಲವರಿಗೆ ಮೋಸ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಹಜರತ್ ಮೌಲ್ವಿಯನ್ನು ಬಂಧಿಸಿರುವುದಾಗಿ ಎಸ್ಪಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದಾರೆ.
ಮೋಸದ ಜಾಲ ಶುರುವಾಗಿದ್ದು ಹೇಗೆ? :
ಧಾರವಾಡ ಮೂಲದ ಬಸೀರಾಬೇಗಂ ಎಂಬ ಮಹಿಳೆಗೆ, ಶಾದಿ ಡಾಟ್ ಕಾಂ ಮೂಲಕ ಉತ್ತರಾಖಂಡದ ಈ ಹಜರತ್ ಮೌಲ್ವಿಯ ಪರಿಚಯವಾಗಿತ್ತು. ಬಸೀರಾಬೇಗಂ ಧಾರವಾಡದಲ್ಲಿ ಗ್ಯಾಸ್ ಎಜೆನ್ಸಿ ಇಟ್ಟುಕೊಂಡಿದ್ದು, ಅನಿರೀಕ್ಷಿತವಾಗಿ ಆದ ಭೇಟಿಯ ವೇಳೆ ತನಗೆ ಮಾಟ - ಮಂತ್ರ ಹಾಗೂ ನಿಧಿ ತೆಗೆಯುವ ವಿದ್ಯೆ ಗೊತ್ತಿದೆ ಎಂದು ಮೌಲ್ವಿ ಈ ವೇಳೆ ಹೇಳಿಕೊಂಡಿದ್ದ. ಇದನ್ನೂ ಬಸೀರಾಬೇಗಂ ನಂಬಿದ್ದಳು. ನಂತರ ಬಸೀರಾಬೇಗಂ ಮೂಲಕ ಗದಗದ ಇಕ್ಬಾಲ್, ಗೂಳಪ್ಪ, ಸಣ್ಣಬಸಪ್ಪ ಹಾಗೂ ದೊಡ್ಡಬಸಪ್ಪ ಹೀಗೆ...ಒಬ್ಬರಿಗೊಬ್ಬರ ಪರಿಚಯ ಒಂದು ಕೊಂಡಿ ರೂಪದಲ್ಲಿ ಬೆಳೆದಿತ್ತು. ಸಣ್ಣಬಸಪ್ಪ ಹಾಗೂ ದೊಡ್ಡಬಸಪ್ಪ ಅವರ ಜಮೀನಿನಲ್ಲಿ ನಿಧಿ ಇದೆ ಅಂತ ಹೇಳಿ ನಂಬಿಸಿ ಅಗೆಯಿಸಲಾಗಿತ್ತು. ಅದಕ್ಕೂ ಮುನ್ನ ಗದಗದ ಅಂಗಡಿಯಲ್ಲಿ ಹಳೆ ಬಿಂದಿಗೆಯನ್ನು ಖರೀದಿ ಮಾಡಿ, ಅದನ್ನು ಜಮೀನಿನಲ್ಲಿ ಹುದುಗಿಸಿದ್ದ. ಬಳಿಕ ನಿಧಿ ಶೋಧ ಮಾಡಿದ ಹಾಗೇ ನಾಟಕ ಮಾಡಿದ್ದ ಹಜರತ್, ಎಲ್ಲರಿಗೂ ಮೋಸ ಮಾಡಿದ್ದ. ಅಲ್ಲದೇ, ಸಣ್ಣಬಸಪ್ಪ ಮತ್ತು ದೊಡ್ಡ ಬಸಪ್ಪರಿಂದ ಹಣದ ಬೇಡಿಕೆ ಇಟ್ಟಿದ್ದನು. ಹಣ ನೀಡಲು ನಿರಾಕರಿಸಿದಾಗ ಕೋಪಗೊಂಡ ಮೌಲ್ವಿ, ಚಿನ್ನವೆಲ್ಲಾ ಮಣ್ಣಾಗಿದೆ ಎಂದು ಹೇಳಿ ಎಸ್ಕೇಪ್ ಆಗಿದ್ದನು. ಈಗ ಈ ಹಜರತ್ ಮೌಲ್ವಿಯನ್ನು ಅರೆಸ್ಟ್ ಮಾಡಿದ್ದು, ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಎಸ್ಪಿ ಹೇಳಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am