ಬ್ರೇಕಿಂಗ್ ನ್ಯೂಸ್
02-01-26 06:09 pm HK News Desk ಕರ್ನಾಟಕ
ಬಳ್ಳಾರಿ, ಜ.02: ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಶುರುವಾದ ಗಲಾಟೆ ಕೊನೆಗೆ ಓರ್ವ ಕಾರ್ಯಕರ್ತನ ಸಾವಲ್ಲಿ ಅಂತ್ಯವಾಗಿದೆ. ಗುಂಡಿನ ದಾಳಿಗೆ ಕಾರ್ಯಕರ್ತನೊಬ್ಬ ಬಲಿಯಾಗಿದ್ದಾನೆ. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದೆ. ಈ ಘಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದು, ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ಗರಂ ಆಗಿದ್ದಾರೆ. ಜೊತೆಗೆ ಪೊಲೀಸರ ಮೇಲೂ ಅಸಮಾಧಾನ ಹೊರಹಾಕಿದ್ದಾರೆ.
ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಘಟನೆಯ ಮಾಹಿತಿ ನೀಡಲು ತೆರಳಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಫೋನ್ ಮಾಡಿದ್ರೂ ಸ್ವೀಕರಿಸದ ಸಿದ್ದರಾಮಯ್ಯ ಜಮೀರ್ ಮುಂದೆಯೇ ಅಸಮಾಧಾನ ಹೊರ ಹಾಕಿ ಎಚ್ಚರಿಕೆ ನೀಡಿದ್ದಾರೆ.
ಬಳ್ಳಾರಿಯಲ್ಲಿ ಫ್ಲೆಕ್ಸ್ ವಿಚಾರಕ್ಕೆ ಶುರುವಾದ ಗಲಾಟೆಯಲ್ಲಿ ಗುಂಡಿನ ದಾಳಿ ನಡೆದಿದೆ, ಈ ವೇಳೆ ಕಾರ್ಯಕರ್ತ ರಾಜಶೇಖರ್ ಗುಂಡು ತಗುಲಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಶಾಸಕ ಭರತ್ ರೆಡ್ಡಿ ಅವರ ಪಾತ್ರದ ಬಗ್ಗೆ ಆರೋಪಗಳು ಕೇಳಿಬಂದಿವೆ. ಘಟನೆಯ ಪ್ರಾಥಮಿಕ ವರದಿ ತಂದ ಡಿಜಿಪಿ ಡಾ. ಸಲೀಂ ಅಹಮದ್ ಮತ್ತು ಗುಪ್ತಚರ ಇಲಾಖೆ ಡಿಜಿಪಿ ಅವರು ಸಿಎಂಗೆ ಮಾಹಿತಿ ನೀಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಪೊಲೀಸರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಣ್ಣ ಘಟನೆ ಇಷ್ಟೊಂದು ದೊಡ್ಡದಾಗೋವರೆಗೂ ಪೊಲೀಸರು ಏನು ಮಾಡುತ್ತಿದ್ದರು? ಅಮಾಯಕ ಯುವಕನ ಜೀವ ಹೋಗಿದೆ ಎಂದು ಸಿಎಂ ಗರಂ ಆಗಿದ್ದಾರೆ.
ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮೇಲೆ ಸಿಎಂ ಸಿದ್ದರಾಮಯ್ಯ ಗರಂ !
ಜಮೀರ್ ಅಹಮದ್ ಖಾನ್ ಘಟನೆಯ ಮಾಹಿತಿ ನೀಡಲು ಸಿಎಂ ಭೇಟಿಗೆ ತೆರಳಿದ್ದರು. ಈ ವೇಳೆ ಶಾಸಕ ಭರತ್ ರೆಡ್ಡಿ ಅವರಿಗೆ ಫೋನ್ ಮಾಡಿ ಮಾತನಾಡಿಸಲು ಜಮೀರ್ ಯತ್ನಿಸಿದ್ದಾರೆ. ಆದರೆ ಸಿಎಂ ಫೋನ್ ತೆಗೆದುಕೊಳ್ಳದೆ "ಹೋಗ್ರಿ, ಏನು ಭರತ್ ರೆಡ್ಡಿ? ಸರಿಯಾಗಿ ಬುದ್ಧಿ ಹೇಳಿ ಆತನಿಗೆ. ಗಲಾಟೆ ಬೇಕಿರಲಿಲ್ಲ, ಕಾರ್ಯಕರ್ತನ ಸಾವಾಗಿದೆ. ಜನಾರ್ದನ್ ರೆಡ್ಡಿ ಮನೆ ಮುಂದೆ ಹೋಗಿ ಬ್ಯಾನರ್ ಕಟ್ಟುವುದು ರಾಂಗ್ ಡೈರೆಕ್ಷನ್" ಎಂದು ಗರಂ ಆಗಿದ್ದಾರೆ. "ನಾನು ಭರತ್ ರೆಡ್ಡಿ ಜೊತೆ ಮಾತಾಡಲ್ಲ" ಎಂದು ಫೋನ್ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.
ಆದಾಗ್ಯೂ ಸಚಿವ ಜಮೀರ್ ಫೋನ್ ಮಾಡಿ ಮಾತನಾಡಿಸಲು ಯತ್ನಿಸಿದ್ದಾರೆ. ಸಿಎಂ ಗರಂ ಆದ ಬಳಿಕ ಕಂಪ್ಲಿ ಗಣೇಶ್ ಮತ್ತು ನಾಗೇಂದ್ರ ಅವರೊಂದಿಗೆ ಮಾತನಾಡಿದ್ದಾರೆ. ನೀವು ಅಲ್ಲಿ ಪರಿಸ್ಥಿತಿ ಕಂಟ್ರೋಲ್ ಮಾಡಿ. ಸುಮ್ನೆ ಇರಲು ಹೇಳಿ. ಬೇಕಾಬಿಟ್ಟಿ ಮಾತಾಡುವುದನ್ನು ನಿಲ್ಲಿಸಿ ಎಂದು ಇಬ್ಬರು ಶಾಸಕರಿಗೆ ಸೂಚನೆ ನೀಡಿದ್ದಾರೆ. ಭರತ್ ರೆಡ್ಡಿ ಅವರನ್ನು ಕಂಟ್ರೋಲ್ ಮಾಡುವ ಜವಾಬ್ದಾರಿಯನ್ನು ನಾಗೇಂದ್ರ ಮತ್ತು ಕಂಪ್ಲಿ ಗಣೇಶ್ ಅವರಿಗೆ ವಹಿಸಲಾಗಿದೆ.
ಇನ್ನೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಜಮೀರ್ ಅಹಮದ್ ಖಾನ್, ಸಿಎಂ ಭೇಟಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸಿಎಂ ಕೂಡ ಕೋಪ ಮಾಡಿಕೊಂಡಿದ್ರು. ಈ ಗಲಾಟೆ ಬೇಕಿರಲಿಲ್ಲ ಅಂತಾ ಹೇಳಿದ್ರು, ಸಿಟ್ಟಾಗಿದ್ರು. ನಾನು ರಾತ್ರಿ ಬಳ್ಳಾರಿಗೆ ಹೋಗುತ್ತೇನೆ. ಯಾವ ತಪ್ಪಿತಸ್ಥರನ್ನ ಬಿಡೋದಿಲ್ಲ, ಯಾರೇ ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಳುತ್ತೇವೆ. ಸಣ್ಣ ವಿಚಾರ ಹೋಗಿ ದೊಡ್ಡದಾಗಿದೆ. ಇಲ್ಲಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ . ಅವರು ಅನುಕಂಪ ಪಡೆಯಲು ಹಾಗೇ ಮಾತಾಡ್ತಿದ್ದಾರೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
The banner-related clash in Ballari, which escalated into gunfire and claimed the life of Congress worker Rajshekhar, has triggered political turbulence in Karnataka. Chief Minister Siddaramaiah expressed strong displeasure over the incident, reprimanding MLA Nara Bharat Reddy and questioning police failure to control the situation.
02-01-26 06:09 pm
HK News Desk
Ballari Banner Fight, FIR, Death: ಬ್ಯಾನರ್ ವಿಚ...
02-01-26 04:13 pm
ಕೋಗಿಲು ಬಡಾವಣೆ ನಿರಾಶ್ರಿತರಿಗೆ ಮನೆ ಹಂಚಿಕೆ ; ವ್ಯಾ...
02-01-26 01:58 pm
ಎಲ್ಲರಂತೆ ನನಗೂ ಆಕಾಂಕ್ಷೆ ಇದೆ ; ಕುರ್ಚಿ ಫೈಟ್ ನಡು...
01-01-26 06:21 pm
ಜನವರಿ 15ರ ನಂತರ ಸಂಪುಟ ವಿಸ್ತರಣೆ ಆಗಲಿದೆ, ನನಗೂ ಮಂ...
01-01-26 05:18 pm
02-01-26 06:43 pm
HK News Desk
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
02-01-26 02:02 pm
Mangalore Correspondent
Dr Vinaya Hegde Death, NItte Mangalore: ನಿಟ್ಟ...
01-01-26 09:43 am
ಧರ್ಮಸ್ಥಳ ಪ್ರಕರಣದಲ್ಲಿ ಕ್ಷೇತ್ರದ ಪರ ಬೆಳ್ತಂಗಡಿ ಕೋ...
31-12-25 10:57 pm
ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ...
31-12-25 09:16 pm
ಕೋಟೆಕಾರು ಪ.ಪಂ ಸಭೆ ; ಸರ್ಕಾರಿ ಜಮೀನು ಅತಿಕ್ರಮಣ ಪರ...
31-12-25 03:35 pm
02-01-26 12:58 pm
Mangalore Correspondent
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm
ಹೊಸ ವರ್ಷ ಸಂಭ್ರಮಾಚರಣೆ ; ಮಂಗಳೂರಿನಲ್ಲಿ ಒಂದು ಸಾವಿ...
01-01-26 08:25 pm
ಕಾರು ಬಾಡಿಗೆ ನೆಪದಲ್ಲಿ ಸುಳ್ಯದಿಂದ ಯುವಕನ ಕರೆದೊಯ್ದ...
31-12-25 07:05 pm
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm