ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು ನುಡಿಸುತ್ತಿದ್ದಾರೆ ; ಬಾಂಗ್ಲಾ ಹಿಂಸಾಚಾರ ಬಗ್ಗೆ ತಸ್ಲಿಮಾ ನಸ್ರೀನ್ ಆಕ್ರೋಶ 

30-12-25 03:32 pm       HK News Desk   ದೇಶ - ವಿದೇಶ

ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮಿತಿಮೀರಿದ್ದು ನಿತ್ಯವೂ ಹಿಂದೂಗಳ ಕಗ್ಗೊಲೆ ಸಾಮಾನ್ಯವಾಗಿದ್ದು, ಮತಾಂಧರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿ ವಿಕೃತ ನಗೆ ಬೀರುತ್ತಿದ್ದಾರೆ. ಆದರೆ ಅಲ್ಪಸಂಖ್ಯಾತರ ರಕ್ಷಣೆಗೆ ಬರಬೇಕಿದ್ದ ಮುಹಮ್ಮದ್‌ ಯೂನಸ್‌ ನೇತೃತ್ವದ ಬಾಂಗ್ಲಾದೇಶ ಮಧ್ಯಂತರ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಬಾಂಗ್ಲಾದೇಶದ ಬಹಿಷ್ಕೃತ, ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್‌ ತೀವ್ರ ಖಂಡಿಸಿದ್ದಾರೆ.

ನವದೆಹಲಿ, ಡಿ.30 : ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮಿತಿಮೀರಿದ್ದು ನಿತ್ಯವೂ ಹಿಂದೂಗಳ ಕಗ್ಗೊಲೆ ಸಾಮಾನ್ಯವಾಗಿದ್ದು, ಮತಾಂಧರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿ ವಿಕೃತ ನಗೆ ಬೀರುತ್ತಿದ್ದಾರೆ. ಆದರೆ ಅಲ್ಪಸಂಖ್ಯಾತರ ರಕ್ಷಣೆಗೆ ಬರಬೇಕಿದ್ದ ಮುಹಮ್ಮದ್‌ ಯೂನಸ್‌ ನೇತೃತ್ವದ ಬಾಂಗ್ಲಾದೇಶ ಮಧ್ಯಂತರ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಬಾಂಗ್ಲಾದೇಶದ ಬಹಿಷ್ಕೃತ, ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್‌ ತೀವ್ರ ಖಂಡಿಸಿದ್ದಾರೆ.

ಹಿಂಸಾಪೀಡಿತ ಹಿಂದೂಗಳ ಪರವಾಗಿ ತಸ್ಲೀಮಾ ನಸ್ರೀನ್‌ ಧ್ವನಿ ಎತ್ತಿದ್ದು ಮುಹಮ್ಮದ್‌ ಯೂನಸ್‌ ಸರ್ಕಾರವನ್ನು ತೀವ್ರ ತರಾಟೆಗೆ ಎತ್ತಿಕೊಂಡಿದ್ದಾರೆ. 

ಪಿರೋಜ್‌ಪುರ ಜಿಲ್ಲೆಯ ಡುಮ್ರಿಟೋಲಾ ಎಂಬ ಗ್ರಾಮದಲ್ಲಿ, ಅಲ್ಪಸಂಖ್ಯಾತ ಹಿಂದು ಕುಟುಂಬದ ಮನೆಯ ಐದು ಕೊಠಡಿಗಳನ್ನು ಹಿಂದೂ ದ್ವೇಷಿ ಜಿಹಾದಿಗಳು ಸುಟ್ಟುಹಾಕಿದ್ದಾರೆ. ಬೆಳಗಿನ ಜಾವ ಎಲ್ಲರೂ ಮಲಗಿದ್ದಾಗ ಅವರು ಮನೆಗೆ ಬೆಂಕಿ ಹಚ್ಚಿದರು. ಚಟ್ಟೋಗ್ರಾಮ್‌ನ ರೌಜಾನ್‌ನಲ್ಲಿ, ಜಿಹಾದಿಗಳು ಬೆಳಗಿನ ಜಾವದಲ್ಲಿ ಹಿಂದೂ ಮನೆಗಳಿಗೆ ಅದೇ ರೀತಿಯಲ್ಲಿ ಬೆಂಕಿ ಹಚ್ಚಿದ್ದಾರೆ ಎಂದು ತಸ್ಲೀಮಾ ನಸ್ರೀನ್‌ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಕಿಡಿಕಾರಿದ್ದಾರೆ. 

ದೇಶದಲ್ಲಿ ಉಳಿದಿರುವ ಎಲ್ಲಾ ಹಿಂದೂ ಮನೆಗಳನ್ನು ಹೀಗೆ ಸುಡಲಾಗುತ್ತದೆಯೇ? ಅವರು ಹಿಂದೂಗಳನ್ನು ಜೀವಂತವಾಗಿ ಸುಡಲು ಬಯಸುತ್ತಾರೆ. ಅದಕ್ಕಾಗಿಯೇ ಜನರು ಮಲಗಿರುವಾಗ ಅವರು ಮನೆಗಳಿಗೆ ಬೆಂಕಿ ಹಚ್ಚುತ್ತಾರೆ. ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿದ್ದರೂ, ಯೂನಸ್ ಕೇವಲ ಕೊಳಲು ನುಡಿಸುತ್ತಿದ್ದಾರೆ ಎಂದು ತಸ್ಲೀಮಾ ನಸ್ರೀನ್‌ ಹರಿಹಾಯ್ದಿದ್ದಾರೆ.

ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿರುವ ನಸ್ರೀನ್, ಮುಹಮ್ಮದ್‌ ಯೂನಸ್‌ ಅವರನ್ನು "ಆಧುನಿಕ ನೀರೋ" ಎಂದು ಕರೆದಿದ್ದಾರೆ.

Author Taslima Nasreen — exiled from Bangladesh — has strongly condemned the interim government led by Muhammad Yunus, alleging that atrocities against minority Hindus in Bangladesh have crossed all limits. She said that killings of Hindus have become routine, fanatic groups are setting Hindu homes on fire and laughing wickedly, while the government that is supposed to protect minorities is sitting with its eyes closed.