ಬ್ರೇಕಿಂಗ್ ನ್ಯೂಸ್
30-06-24 08:12 pm Bangalore Correspondent ಕ್ರೈಂ
ಬೆಂಗಳೂರು, ಜೂ 30: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಅಪಹರಣ ಪ್ರಕರಣ ಬೆಳಕಿಗೆ ಬಂದಿದೆ. ಅಪಹರಣ ಪ್ರಕರಣದಲ್ಲಿ ಲೇಡಿ ಗ್ಯಾಂಗ್ ಜೊತೆ ಕನ್ನಡ ಪರ ಸಂಘಟನೆ ಅಧ್ಯಕ್ಷ ಪ್ರಕಾಶ್ ತಗಲಾಕುಂಡಿದ್ದಾನೆ. ಘಟನೆ ಸಂಬಂಧ ಶಂಕರಪುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕಾಶ್ ಅಲಿಯಾಸ್ ಕನ್ನಡ ಪ್ರಕಾಶ್ & ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬ್ಯಾಂಕ್ ಉದ್ಯೋಗಿ ಮಂಜುನಾಥ್ ನನ್ನ ಪ್ರಕಾಶ್ & ಗ್ಯಾಂಗ್ ಕಿಡ್ನಾಪ್ ಮಾಡಿದೆ. ಕಿಡ್ನಾಪ್ ಮಾಡಿದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಕನ್ನಡ ಪ್ರಕಾಶ್ಗೆ ಸೇರಿದ ಕಚೇರಿಯಲ್ಲಿ ಮಂಜುನಾಥ್ ಅವರನ್ನ ಕರೆದುಕೊಂಡು ಬಂದು ಸಿಕ್ಕಾಪಟ್ಟೆ ಥಳಿಸಲಾಗಿತ್ತು. ಅಪಹರಿಸಿ ಹಣ, ಮನೆ ದಾಖಲೆಗಳನ್ನು ಕಸಿದುಕೊಂಡ ಟಾರ್ಚರ್ ಮಾಡಿದ್ದಾರೆ.

ಬ್ಯಾಂಕ್ ಉದ್ಯೋಗಿಯಾಗಿರುವ ಮಂಜುನಾಥ್, ಆರೋಪಿ ಮಂಜುಳಾ ಬಳಿ 8 ಲಕ್ಷ ರೂ ಸಾಲ ಪಡೆದಿದ್ದರು. ಸಾಲ ವಾಪಸ್ ನೀಡಲಾಗದಿದ್ದಾಗ ಮಂಜುನಾಥ್ ವಿರುದ್ಧ ಮಂಜುಳಾ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಏಪ್ರಿಲ್ 4ರಂದು ಕೊರಿಯರ್ ಬಂದಿರುವುದಾಗಿ ಮಂಜುನಾಥ್‌ಗೆ ಕರೆ ಮಾಡಿದ್ದ ಆರೋಪಿಗಳು, ಶಂಕರಮಠ ರಸ್ತೆಯ ಬಳಿ ಕರೆಸಿಕೊಂಡಿದ್ದಾರೆ. ಈ ವೇಳೆ ಮಂಜುಳಾ ಸೇರಿದಂತೆ ಕೆಲ ಮಹಿಳೆಯರು ಕಾರಿನಲ್ಲಿ ಬಂದು ಮಂಜುನಾಥ್ ಅವರನ್ನ ಕಿಡ್ನಾಪ್ ಮಾಡಿದ್ದಾರೆ. ಕಾರಿನಲ್ಲಿದ್ದ ಪ್ರಕಾಶ್ ಮತ್ತು ಆತನ ಚಾಲಕ ವೆಂಕಟಾಚಲಪತಿ, ಮಹಿಳೆಯರೊಂದಿಗೆ ಸೇರಿ ತನ್ನ ಕಚೇರಿಗೆ ಕರೆದೊಯ್ದು ಥಳಿಸಿದ್ದಾರೆ. ಬಳಿಕ ಹಣ, ಮನೆ ದಾಖಲೆಗಳನ್ನು ಕಸಿದುಕೊಂಡಿದ್ದಾರೆ. ನಂತರವೂ ಸಹ ಆರೋಪಿಗಳು ಕರೆ ಮಾಡಿ ಬೆದರಿಕೆ ಹಾಕುತ್ತಿರುವುದರಿಂದ ತನಗೆ ಜೀವಭಯವಿದೆ ಎಂದು ಮಂಜುನಾಥ್ ದೂರಿದ್ದಾರೆ. ಮಂಜುನಾಥ್ ನೀಡಿದ್ದ ದೂರಿನನ್ವಯ ಸದ್ಯ ಮಂಜುಳಾ, ಪ್ರಕಾಶ್, ವೆಂಕಟಾಚಲಪತಿ, ಮೂವರು ಅಪರಿಚಿತ ಮಹಿಳೆಯರ ವಿರುದ್ಧ ಶಂಕರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Pro kannada organisation president kannada Prakash arrested in kidnap case in Bangalore of bank employee. Bank employees was kidnapped by Prakash in his car and later taken to his office and have brutally assaulted him by nabbing cash and house documents.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
17-09-26 11:45 am
HK News Staffer
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm