ಬ್ರೇಕಿಂಗ್ ನ್ಯೂಸ್
29-06-24 09:52 pm HK NEWS ಕ್ರೈಂ
ಲಂಡನ್, ಜೂ 29: ಜೈಲಿನ ಮಹಿಳಾ ಸಿಬ್ಬಂದಿ ಕೈದಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿರುವ ಶಾಕಿಂಗ್ ಘಟನೆ ಇಂಗ್ಲೆಂಡ್‌ನ ವಾಂಡ್‌ವರ್ಥ್‌ನ ಎಚ್‌ಎಂಪಿ ಜೈಲಿನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ ಈ ಮಹಿಳಾ ಪೊಲೀಸ್ ಸಿಬ್ಬಂದಿ ಯಾರು ಎಂಬ ಬಗ್ಗೆ ಶಾಕಿಂಗ್ ವಿಚಾರವೊಂದು ಬಯಲಾಗಿದೆ. ಹಾಗಿದ್ದರೆ ಈ ಕೃತ್ಯ ಎಸಗಿರುವ ಈ ಮಹಿಳೆ ಯಾರು? ಇಲ್ಲಿದೆ ಸಂಪೂರ್ಣ ವರದಿ.
ಜೈಲಿನಲ್ಲಿ ಖೈದಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾಕೆಯ ಹೆಸರು ಲಿಂಡಾ ಡಿ ಸೋಜಾ. 31ವರ್ಷದ ಈಕೆ ದಕ್ಷಿಣ ಲಂಡನ್‌ನಲ್ಲಿರುವ ವಾಂಡ್‌ವರ್ಥ್‌ನ ಎಚ್‌ಎಂಪಿ ಜೈಲಿನಲ್ಲಿ ಜೈಲಿನಲ್ಲಿ ಅಧಿಕಾರಿಯಾಗಿದ್ದಳು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕೆ ತಕ್ಷಣ ಕೆಲಸಕ್ಕೆ ರಾಜೀನಾಮೆ ನೀಡಿದ್ದಾಳೆ. ಲಿಂಡಾಳ ಸಹೋದರಿ ಆಂಡ್ರೈನಾ ಪ್ರತಿಕ್ರಿಯಿಸಿದ್ದು, ಲಿಂಡಾ ಮತ್ತು ಪತಿ ನಾತನ್ 2023ರ ʼಓಪನ್ ಹೌಸ್: ದಿ ಗ್ರೇಟ್ ಸೆಕ್ಸ್ ಎಕ್ಸ್‌ಪರಿಮೆಂಟ್ʼ ಎಂಬ ಟಿವಿ ಶೋ ಸ್ಪರ್ಧಿಗಳಾಗಿದ್ದರು. ಅದೂ ಅಲ್ಲದೇ ಆಕೆ ನೀಲಿ ವಿಡಿಯೋ ಫ್ಲ್ಯಾಟ್‌ಫಾರ್ಮ್‌ನಲ್ಲಿ ಸೀಕ್ರೆಟ್ ಅಕೌಂಟನ್ನೂ ಹೊಂದಿದ್ದಾಳೆ ಎಂದು ಹೇಳಿದ್ದಾಳೆ.

ಎಕ್ಸ್‌ನಲ್ಲಿ ಭಾರೀ ವೈರಲ್ ಆಗಿರುವ ಈ ವಿಡಿಯೋದಲ್ಲಿ ಪೊಲೀಸ್ ಸಮವಸ್ತ್ರದಲ್ಲಿರುವ ಜೈಲಿನ ಸಿಬ್ಬಂದಿ ಅಲ್ಲಿನ ಕೈದಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡಬಹುದಾಗಿದೆ. ಇದನ್ನು ಅದೇ ಕೋಣೆಯಲ್ಲಿದ್ದ ಮತ್ತೊರ್ವ ಖೈದಿ ತನ್ನ ಮೊಬೈಲ್‌ನಲ್ಲಿ ಶೂಟ್ ಮಾಡಿಕೊಂಡಿದ್ದಾನೆ. ಕೈಯಲ್ಲಿ ಸಿಗರೇಟ್ ಹಿಡಿದು ವಿಡಿಯೋ ಮಾಡುತ್ತಿರುವ ಆ ವ್ಯಕ್ತಿ ” ಹಾಯ್.. ನಾವು ಇವತ್ತು ಇತಿಹಾಸ ಸೃಷ್ಟಿಸಿದ್ದೇವೆ. ನಾನು ಹೇಳುತ್ತಿರುವುದು ಇದೇ ವಿಚಾರವನ್ನು ಎಂದು ಹೇಳುತ್ತಾ ಕ್ಯಾಮೆರಾವನ್ನು ತಿರುಗಿಸುತ್ತಾನೆ. ಅಲ್ಲಿ ಜೈಲಿನ ಸಿಬ್ಬಂದಿ ಮತ್ತು ಕೈದಿ ಲೈಂಗಿಕ ಚಟುವಟಿಕೆಯಲ್ಲಿ ಭಾಗಿರುವುದನ್ನು ಕಾಣಬಹುದಾಗಿದೆ. ಅದೂ ಅಲ್ಲೇ ಇದ್ದ ಬೆಡ್ ಮೇಲೆ ಕೈದಿಗಳ ಬಟ್ಟೆ ಬಿದ್ದಿರುವುದನ್ನು ಕಾಣಬಹುದಾಗಿದೆ.
ಇನ್ನು ಇದೇ ಸಂದರ್ಭದಲ್ಲಿ ಮತ್ತೊರ್ವ ಖೈದಿ ಸೆಲ್ ಒಳಗೆ ಬರಲು ಯತ್ನಿಸುತ್ತಾರೆ. ಆಗ ವಿಡಿಯೋ ಮಾಡುತ್ತಿದ್ದವನು “ಸ್ವಲ್ಪ ಹೊತ್ತು ಇರು” ಅಂತಾನೆ. ಆಮೇಲೆ ಕ್ಯಾಮೆರಾವನ್ನು ಸುತ್ತ ತಿರುಗಿಸುತ್ತಾ “ಇದು ವಾಂಡ್‌ವರ್ಥ್ ಜೈಲು” ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಇನ್ನು ಈ ಘಟನೆ ಬಗ್ಗೆ ಲಂಡನ್ ಪೊಲೀಸರು ಪ್ರತಿಕ್ರಿಯಿಸಿದ್ದು, ಇದು ವಾಂಡ್‌ವರ್ಥ್‌ನ ಎಚ್‌ಎಂಪಿ ಜೈಲಿನಲ್ಲೆ ನಡೆದಿರುವ ಘಟನೆ ಎಂಬುದು ಸ್ಪಷ್ಟವಾಗಿದೆ. ಕೇಸ್ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೆ ಯಾವುದೇ ಬಂಧನವಾಗಿಲ್ಲ. ಕಾನೂನು ಸಚಿವಾಲಯದ ಜೊತೆಗೂ ಮಾತುಕತೆ ನಡೆದಿದೆ ಎಂದು ಹೇಳಿದ್ದಾರೆ.
HMP ಜೈಲು ಸೇವೆಯ ವಕ್ತಾರರು ಮಾತನಾಡಿ, ಘಟನೆಯು ಇತ್ತೀಚೆಗೆ ಸಂಭವಿಸಿದೆ ಎಂದು ಭಾವಿಸಲಾಗಿದೆ, ಮಹಿಳಾ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸಿಬ್ಬಂದಿ ಭ್ರಷ್ಟಾಚಾರವನ್ನು ಸಹಿಸಲಾಗುವುದಿಲ್ಲ ಮತ್ತು ಈ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಜೈಲು ಅಧಿಕಾರಿಯ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಲಾಗಿದೆ ಎಂದಿದ್ದಾರೆ.
A woman has been arrested over a social media video allegedly showing a member of prison staff having sex with an inmate in a jail cell. Scotland Yard said it launched an investigation on Friday "after officers were made aware of a video allegedly filmed inside HMP Wandsworth".
22-12-25 06:29 pm
HK News Desk
ಸ್ಥಳೀಯ ಮಟ್ಟದಲ್ಲೇ ಗೊಂದಲ ಬಗೆಹರಿಸಿಕೊಳ್ಳಿ, ಎಲ್ಲದಕ...
21-12-25 05:33 pm
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
22-12-25 06:32 pm
HK News Desk
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
22-12-25 06:36 pm
Mangalore Correspondent
ಕೋಳಿ ಅಂಕದಲ್ಲಿ ಪೆಟ್ಟು ಕೊಡಲು ಇವರ ಅಪ್ಪನ ಜಾಗವಾ?...
22-12-25 12:26 pm
ಕೇಪು ಜಾತ್ರೆ ಕೋಳಿ ಅಂಕಕ್ಕೆ ಎರಡನೇ ದಿನವೂ ಪೊಲೀಸ್ ದ...
21-12-25 11:04 pm
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
22-12-25 04:00 pm
Mangalore Correspondent
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm