ಬ್ರೇಕಿಂಗ್ ನ್ಯೂಸ್
28-04-24 09:46 pm HK News Desk ಕ್ರೈಂ
ಗುಜರಾತ್, ಏ.28: ಅರಬ್ಬಿ ಸಮುದ್ರದಲ್ಲಿ ಸಂಶಯಾಸ್ಪದವಾಗಿ ಸಂಚಾರ ಮಾಡುತ್ತಿದ್ದ ದೋಣಿಯೊಂದನ್ನು ತಡೆದ ಭಾರತೀಯ ಕರಾವಳಿ ರಕ್ಷಣಾ ಪಡೆ ಅಧಿಕಾರಿಗಳು, ಬರೋಬ್ಬರಿ 600 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು 86 ಕೆಜಿ ತೂಕದ ಈ ಮಾದಕ ವಸ್ತುಗಳ ಮೌಲ್ಯ 600 ಕೋಟಿ ರೂ. ಗೂ ಹೆಚ್ಚು ಎಂದು ತಿಳಿದು ಬಂದಿದೆ.
ಖಚಿತ ಬೇಹುಗಾರಿಕಾ ಮಾಹಿತಿ ಆಧಾರದ ಮೇಲೆ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಕರಾವಳಿ ರಕ್ಷಣಾ ಪಡೆ ವಶಕ್ಕೆ ಪಡೆದಿರುವ ಈ ದೋಣಿ ಪಾಕಿಸ್ತಾನಕ್ಕೆ ಸೇರಿದ್ದು ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ದೋಣಿಯಲ್ಲಿ 14 ಮಂದಿ ಪಾಕಿಸ್ತಾನ ಪ್ರಜೆಗಳಿದ್ದರು. ಇದೀಗ ಎಲ್ಲರನ್ನೂ ಭಾರತೀಯ ರಕಾವಳಿ ರಕ್ಷಣಾ ಪಡೆ ತನ್ನ ವಶಕ್ಕೆ ಪಡೆದಿದೆ
ಈ ಕಾರ್ಯಾಚರಣೆಗೆ ಭಯೋತ್ಪಾದನಾ ನಿಗ್ರಹ ದಳ ಹಾಗೂ ಮಾದಕ ವಸ್ತು ನಿಯಂತ್ರಣ ಪಡೆ ಕೂಡಾ ನೆರವಾಗಿದ್ದು, ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ಅರಬ್ಬಿ ಸಮುದ್ರದ ಈ ಪ್ರಾಂತ್ಯದಲ್ಲಿ ಪ್ರಬಲವಾಗಿರುವ ಮಾದಕ ವಸ್ತು ಕಳ್ಳಸಾಗಣೆದಾರರ ವಿರುದ್ಧ ನಡೆಯುತ್ತಿರುವ ಅತಿ ದೊಡ್ಡ ಕಾರ್ಯಾಚರಣೆ ಇದಾಗಿದೆ.
ಶನಿವಾರ ರಾತ್ರಿಯಿಡೀ ನಡೆದ ಈ ಅಹೋರಾತ್ರಿ ಕಾರ್ಯಾಚರಣೆಯನ್ನು ಕರಾವಳಿ ರಕ್ಷಣಾ ಪಡೆಗೆ ಮಾದಕ ವಸ್ತು ಜಾಲದ ವಿರುದ್ಧ ದೊರೆತ ದೊಡ್ಡ ಗೆಲುವು ಎಂದೇ ಬಣ್ಣಿಸಲಾಗಿದೆ. ಸಮುದ್ರ ಮಾರ್ಗದಲ್ಲಿ ಮಾದಕ ವಸ್ತುಗಳ ಆಗಮನ ಕುರಿತಾಗಿ ಕರಾವಳಿ ರಕ್ಷಣಾ ಪಡೆಗೆ ಬೇಹುಗಾರಿಕಾ ಮಾಹಿತಿ ಸಿಕ್ಕಿತು. ಈ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದಾಗ ಪಾಕಿಸ್ತಾದ ದೋಣಿ ಸಿಕ್ಕಿತು. ಇದರಲ್ಲಿ 86 ಕೆಜಿ ತೂಕದ ಮಾದಕ ವಸ್ತುಗಳು ಸಿಕ್ಕಿದ್ದು, ಇದರ ಮೌಲ್ಯ 600 ಕೋಟಿ ಎಂದು ತಿಳಿದು ಬಂದಿದೆ. ಈ ಪ್ರಕರಣ ಸಂಬಂಧ ದೋಣಿಯಲ್ಲಿದ್ದ 14 ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಕರಾವಳಿ ರಕ್ಷಣಾ ಪಡೆ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದ ಭದ್ರತಾ ಪಡೆಗಳ ಕಣ್ತಪ್ಪಿಸಿ ರಾತ್ರಿ ವೇಳೆ ಭಾರತದೊಳಗೆ ನುಸುಳಲು ಈ ದೋಣಿ ಸಾಕಷ್ಟು ಪ್ರಯತ್ನ ನಡೆಸಿತ್ತು. ಆದರೆ, ಭಾರತದ ಜಲ ಗಡಿ ಪ್ರವೇಶಿಸುವ ಸಂದರ್ಭದಲ್ಲೇ ಭದ್ರತಾ ಪಡೆಗಳು ಈ ದೋಣಿಯನ್ನು ಗುರ್ತಿಸಿದವು. ದೋಣಿಯನ್ನು ಅಡ್ಡಗಟ್ಟಿದ ಕರಾವಳಿ ರಕ್ಷಣಾ ಪಡೆ ಹಡಗು ದೋಣಿಯೊಳಗೆ ಶೋಧ ಕಾರ್ಯ ನಡೆಸಿತು. ಈ ವೇಳೆ ದೋಣಿಯಲ್ಲಿ ಮಾದಕ ವಸ್ತುಗಳು ಇರೋದು ದೃಢಪಟ್ಟಿತ್ತು.
ಈ ಕುರಿತಾಗಿ ಮಾಧ್ಯಮ ಪ್ರಕಟಣೆಯಲ್ಲಿ ವಿವರಿಸಿರುವ ಕರಾವಳಿ ರಕ್ಷಣಾ ಪಡೆ, ಪಾಕಿಸ್ತಾನದ ಈ ದೋಣಿಯು ತನ್ನ ಎಲ್ಲ ತಂತ್ರಗಾರಿಕೆಗಳನ್ನೂ ಬಳಸಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿತಾದರೂ ಅವರ ಪ್ರಯತ್ನ ಫಲ ಕೊಡಲಿಲ್ಲ ಎಂದು ಹೇಳಿದೆ. ಭಾರತೀಯ ಕರಾವಳಿ ತಟ ರಕ್ಷಣಾ ಪಡೆಯ ಐಸಿಜಿ ರಾಜರತನ್ ನೌಕೆಯಲ್ಲಿ ಇರುವ ವಿಶೇಷ ತಂತ್ರಜ್ಞರ ತಂಡವು ಸಂಶಯಾಸ್ಪದ ದೋಣಿ ಯಾವುದೇ ಕಾರಣಕ್ಕೂ ತಪ್ಪಿಸಿಕೊಂಡು ಹೋಗದಂತೆ ತಡೆದು ಆರೋಪಿಗಳನ್ನ ಬಂಧಿಸುವಲ್ಲಿ ಹಾಗೂ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದೆ.
The Indian security forces on Sunday arrested 14 Pakistani nationals off the Gujarat coast and seized 86 kilograms of contraband drugs worth around ₹600 crore from their possession, officials said.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 10:45 pm
HK News Desk
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
07-05-25 10:30 pm
Mangalore Correspondent
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm