ಬ್ರೇಕಿಂಗ್ ನ್ಯೂಸ್
24-04-24 12:53 pm Bangalore Correspondent ಕ್ರೈಂ
ಬೆಂಗಳೂರು, ಏ 24: ಸೆಕ್ಸ್ ವಿಡಿಯೋ ತೋರಿಸಿ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪೀಡಿಸುತ್ತಿದ್ದ ಮಹಿಳೆಯನ್ನ ಸಾಫ್ಟ್ವೇರ್ ಎಂಜಿನಿಯರ್ ಕೊಂದು ಫಿನಿಷ್ ಮಾಡಿರುವ ಘಟನೆ ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ
ಹೇರೋಹಳ್ಳಿ ನಿವಾಸಿ ನವೀನ್(28) ಬಂಧಿತ ಆರೋಪಿ. ಈತ ಏ.19ರಂದು ಶೋಭಾ(48) ಎಂಬಾಕೆಯನ್ನು ಕೊಲೆಗೈದು, ಆಕೆಯ ಕಾರು ಸಮೇತ ಪರಾರಿಯಾಗಿದ್ದ. ಈ ಸಂಬಂಧ ಶೋಭಾ ಅವರ ಪುತ್ರಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಲಾಗಿದೆ.
ಶೋಭಾ ಪತಿ ಚಿಕ್ಕಪೇಟೆಯಲ್ಲಿ ವಾಸವಾಗಿದ್ದು, ಈಕೆ ಕೊಡಿಗೇಹಳ್ಳಿಯಲ್ಲಿ ಡ್ರೈವಿಂಗ್ ಕ್ಲಾಸ್ ತೆರೆದು, 2ನೇ ಪುತ್ರಿಯ ಜತೆ ಗಣಪತಿನಗರದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಮೊದಲ ಪುತ್ರಿಗೆ ಮದುವೆಯಾಗಿದ್ದು, ಆಕೆ ಪತಿ ಜತೆ ವಾಸವಾಗಿದ್ದಾರೆ. ಏ.4ರಂದು ತಮ್ಮ 2ನೇ ಪುತ್ರಿಗೂ ಮದುವೆ ಮಾಡಿದ್ದರು. ಈ ನಡುವೆ ಶೋಭಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಈ ವೇಳೆ ಮೈಸೂರು ಮೂಲದ ಟೆಕಿ ನವೀನ್ ಪರಿಚಯವಾಗಿದೆ. ಜತೆಗೆ ಈತ ಮಾಡುತ್ತಿದ್ದ ರೀಲ್ಸ್‌ಗಳನ್ನು ಲೈಕ್ ಮಾಡುತ್ತಿದ್ದರು. ಹೀಗಾಗಿ ಇಬ್ಬರು ಆನ್‌ಲೈನ್‌ನಲ್ಲಿ ಚಾಟಿಂಗ್ ಆರಂಭಿಸಿದ್ದಾರೆ. ನಂತರ ಪರಸ್ಪರ ಮೊಬೈಲ್ ನಂಬರ್ ಬದಲಾಯಿಸಿಕೊಂಡು, ಕಾಲ್ ಹಾಗೂ ವಾಟ್ಸ್ ಆ್ಯಪ್ ಚಾಟಿಂಗ್ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದೆ. ಕೆಲ ತಿಂಗಳ ಹಿಂದೆ ಇಬ್ಬರು ಆರ್.ಟಿ.ನಗರದ ಹೋಟೆಲ್‌ವೊಂದರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು.
ಅತಿಯಾದ ಸೆಕ್ಸ್ ಆಸೆಗೆ ಬಲಿಯಾದ ಶೋಭಾ? ;
ಏ.18ರಂದು ಪ್ರಿಯಕರ ನವೀನ್‌ಗೆ ಕರೆ ಮಾಡಿದ ಶೋಭಾ, ರಾತ್ರಿ ಮನೆಗೆ ಬರುವಂತೆ ಆಹ್ವಾನಿ ನೀಡಿದ್ದಾಳೆ. ಅದರಂತೆ ರಾತ್ರಿ 10 ಗಂಟೆ ಸುಮಾರಿಗೆ ಹೆಬ್ಬಾಳ ಬಳಿ ಬಂದ ನವೀನ್‌ನನ್ನ ಈಕೆಯೇ ತನ್ನ ಕಾರಿನಲ್ಲಿ ಮನೆಗೆ ಕರೆ ತಂದಿದ್ದಾಳೆ. ಬಳಿಕ ಇಬ್ಬರು ಊಟ ಮುಗಿಸಿ ಮದ್ಯ ಸೇವಿಸಿದ್ದಾರೆ. ಬಳಿಕ ಶೋಭಾ, ನವೀನ್‌ಗೆ ತನ್ನೊಂದಿಗೆ ಸೆಕ್ಸ್ ಮಾಡುವಂತೆ ಪ್ರಚೋದಿಸಿದ್ದಾಳೆ. ಆದರೆ, ನವೀನ್ ನಿರಾಕರಿಸಿದ್ದಾನೆ. ಕೆಲ ಹೊತ್ತಿನ ಬಳಿಕ ಮತ್ತೂಮ್ಮೆ ಪ್ರಚೋದಿಸಿದ ಶೋಭಾ ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ.
ಬಳಿಕ ಮತ್ತೂಮ್ಮೆ ನವೀನ್ ಬಳಿ ಬಂದು ಸೆಕ್ಸ್ ವಿಡಿಯೋ ಒಂದನ್ನ ತೋರಿಸಿ, ಈ ಮಾದರಿಯಲ್ಲಿ ಸೆಕ್ಸ್ ಮಾಡೋಣ ಬಾ ಎಂದು ಪೀಡಿಸಿದ್ದಾಳೆ. ಅದಕ್ಕೆ ನಿರಾಕರಿಸಿದ ನವೀನ್, ಈ ರೀತಿ ನಡೆದುಕೊಳ್ಳಲು ಸಾಧ್ಯವಿಲ್ಲ ನನ್ನನ್ನು ಬಿಟ್ಟುಬಿಡಿ ಎಂದು ಅಂಗಲಾಚಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿ ಇಬ್ಬರು ಪರಸ್ಪರ ಹೊಡೆದಾಡುಕೊಂಡಿದ್ದಾರೆ. ಅದರಿಂದ ಇನ್ನಷ್ಟು ಕೋಪಗೊಂಡ ಆರೋಪಿ, ಶೋಭಾರ ಕತ್ತು ಹಿಸುಕಿ ಕೊಲೆಗೈದು, ಬಳಿಕ ಮನೆ ಮುಂದೆ ನಿಂತಿದ್ದ ಶೋಭಾರ ಕಾರಿನಲ್ಲೇ ಪರಾರಿಯಾಗಿದ್ದ. ಮರು ದಿನ ಶೋಭಾರ 2ನೇ ಪುತ್ರಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಅನುಮಾನಗೊಂಡು ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಶೋಭಾಳನ್ನ ಹತ್ಯೆಗೈದ ಬಳಿಕ ಆರೋಪಿ ನವೀನ್, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆಕೆಯ ಮೊಬೈಲ್, ಕಾರು ಕಳವು ಮಾಡಿ ಪರಾರಿಯಾಗಿದ್ದ. ಆಕೆಯ ಮೊಬೈಲ್ ಹಿಂಭಾಗದಲ್ಲಿದ್ದ ಎಟಿಎಂ ಕಾರ್ಡ್‌ನಿಂದ 2 ಎಟಿಎಂ ಕೇಂದ್ರದಲ್ಲಿ 1.80 ಲಕ್ಷ ರೂ. ಡ್ರಾ ಮಾಡಿದ್ದಾನೆ. ಅಲ್ಲದೆ, ಕಾರನ್ನು ನಗರದ ಗಡಿಭಾಗದಲ್ಲಿ ನಿಲ್ಲಿಸಿ ಪರಾರಿಯಾಗಿದ್ದ. ತನಿಖೆ ಆರಂಭಿಸಿದಾಗ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.
Bangalore Youth kills woman for forcing to have sex, arrested. The deceased has been identified as Shoba who was running a Driving class in Bangalore. Navee a software engineer has been arrested for killing her.
28-03-26 02:54 pm
HK News Staffer
ಭಾರತದಲ್ಲಿ ಮತ್ತೆ ಲಾಕ್ಡೌನ್ ; ಜಾಲತಾಣದಲ್ಲಿ ಟ್ರೆಂ...
27-03-26 04:49 pm
ಶಾರ್ಟ್ ಕಟ್ ದಾರಿಯೆಂದು ತುಂಗಭದ್ರಾ ನದಿಗೆ ನುಗ್ಗಿಸಿ...
27-03-26 04:04 pm
ನಡುರಸ್ತೆಯಲ್ಲೇ ಪತ್ನಿಯ ಕತ್ತು ಕತ್ತರಿಸಿ ಭೀಕರ ಕೊಲೆ...
27-03-26 03:52 pm
ಚಿಕ್ಕಮಗಳೂರಿನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬ...
26-03-26 10:27 pm
28-03-26 02:58 pm
HK News Staffer
ಟ್ರಂಪ್ ದಿಢೀರ್ ರಾಜಕೀಯ ಹೆಜ್ಜೆ ; ಯುದ್ಧ ಗಡುವು ಹತ್...
27-03-26 04:07 pm
ಗಲ್ಫ್ ಯುದ್ಧದ ಪರಿಣಾಮ ಊಹಿಸುವುದು ಕಷ್ಟ, ಕೋವಿಡ್ನಂ...
27-03-26 12:11 pm
ಅಮೆರಿಕ ಷರತ್ತಿಗೆ ಪಟ್ಟು ಬಿಡದ ಇರಾನ್ ; ಗಲ್ಫ್ ದೇಶಗ...
26-03-26 09:44 pm
ಹೊರ್ಮುಜ್ ಜಲಸಂಧಿ ನಿರ್ಬಂಧಿಸಿದ್ದ ಇರಾನ್ ನೌಕಾಪಡೆ ಮ...
26-03-26 09:00 pm
27-03-26 03:38 pm
HK News Staffer
ಇನಾಯತ್ ಆಲಿ ನೇತೃತ್ವದಲ್ಲಿ ಏ.4ರಂದು ಗುರುಪುರ ಜೋಡುಕ...
26-03-26 10:51 pm
ಮಂಗಳೂರು ಸಿಟಿ ಪೊಲೀಸರ ಹೆಸರಲ್ಲೇ ನಕಲಿ ವೆಬ್ಸೈಟ್ !...
26-03-26 10:29 pm
ನವ ಮಂಗಳೂರು ಬಂದರು ಸ್ಥಾಪನೆಗೊಂಡ ಬಳಿಕ 40 ಸಾವಿರ ಹಡ...
26-03-26 07:19 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; ಸಾಮಾಜಿಕ ಜಾಲತಾಣದಲ್...
25-03-26 08:44 pm
28-03-26 02:56 pm
HK News Staffer
Tablet Arif Murder, Mangalore: ಜಾನ್ ಅಬ್ರಹಾಂ ಮ...
27-03-26 10:02 pm
ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ; ಶೋಕಿ ಮಾಡಿ ತಗ...
27-03-26 09:34 pm
ಹೊಸ ಬಾವಿ ಕೊರೆಯುತ್ತಿದ್ದ ವೇಳೆ ದುರಂತ ; ಮೂವತ್ತು ಅ...
27-03-26 09:32 pm
Puttenahalli, Inspector Ravi, Case: ಪುಟ್ಟೇನಹಳ...
27-03-26 08:37 pm