ಬ್ರೇಕಿಂಗ್ ನ್ಯೂಸ್
07-02-24 04:32 pm HK News Desk ಕ್ರೈಂ
ಮೈಸೂರು, ಫೆ 07: ಸಾಲ ತೀರಿಸಲು ಹಣ ನೀಡದ ಪತ್ನಿಯನ್ನು ಪತಿಯೇ ಕತ್ತು ಹಿಸುಕಿ ಕೊಲೆ ಮಾಡಿದ್ದ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿ ಪತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಅಕ್ಬರ್ ಆಲಿಯನ್ನು ನವೀದಾ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ಮೈಸೂರಿನ ರಾಜೀವ್ ನಗರದಲ್ಲಿ ಮೂರು ಮಕ್ಕಳೊಂದಿಗೆ ಸಂಸಾರ ನೆಲೆಸಿತ್ತು. ಮಂಡ್ಯದಲ್ಲಿ ಆಟೋ ಓಡಿಸುತ್ತಿದ್ದ ಅಕ್ಬರ್ ಆಲಿಗೆ ಹೃದಯಾಘಾತವಾದ ಹಿನ್ನಲೆ ಪತ್ನಿ ಮನೆಯವರು ಚಿಕಿತ್ಸೆ ಕೊಡಿಸಿ ಬದುಕಿಸಿಕೊಂಡಿದ್ದರು. ನಂತರ ಗೂಡ್ಸ್ ಆಟೋ, ಪ್ರಾವಿಷನ್ ಸ್ಟೋರ್ಸ್, ಆಟೋ ಮೊಬೈಲ್ಸ್ ಅಂಗಡಿ ಹೀಗೆ ಹಲವು ವ್ಯಾಪಾರ ಮಾಡಲು ಅಕ್ಬರ್ ಆಲಿಗೆ ಪತ್ನಿ ನವೀದಾ ಮನೆಯವರು ಆರ್ಥಿಕ ಸಹಾಯ ನೀಡಿದ್ದರು. ಎಲ್ಲಾ ಬಂಡವಾಳವನ್ನು ಬಳಸಿಕೊಂಡಿದ್ದರೂ ಸಹ ಅಕ್ಬರ್ ಆಲಿ ಮತ್ತಷ್ಟು ಸಾಲಗಾರನಾಗಿದ್ದ.
ನವೀದಾ ರವರು ನಡೆಸುತ್ತಿದ್ದ ಪುಟ್ಟ ಅಂಗಡಿಯಲ್ಲಿ ದುಡಿದು ಗಂಡನ ಸಾಲ ತೀರಿಸುತ್ತಿದ್ದರು. ಒಂದೆಡೆ ಸಾಲ ತೀರಿಸಿದರೆ ಮತ್ತೊಂದೆಡೆ ಸಾಲ ಮಾಡುತ್ತಿದ್ದ ಪತಿ ಜೊತೆ ಪತ್ನಿ ಆಗಾಗ ಗಲಾಟೆ ಮಾಡುತ್ತಿದ್ದರು. ರವಿವಾರ ಇದೇ ವಿಚಾರದಲ್ಲಿ ಗಲಾಟೆ ಆಗಿದೆ. ಇದ್ದಕ್ಕಿದ್ದಂತೆ ನವೀದಾ ರವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಅಕ್ಬರ್ ಆಲಿಯನ್ನು ಪ್ರಶ್ನಿಸಿದಾಗ ತಂದೆ ಮನೆಗೆ ಹೋಗಿದ್ದಾಳೆ, ಅಂಗಡಿಯಲ್ಲಿ ಇದ್ದಾಳೆ ಎಂದು ಉತ್ತರ ನೀಡುತ್ತಿದ್ದ. ಅಕ್ಕಪಕ್ಕದ ಮನೆಯವರನ್ನು ಕೇಳಿದಾಗ ಇಬ್ಬರ ನಡುವೆ ನಡೆದ ಗಲಾಟೆ ವಿಚಾರ ತಿಳಿಸಿದರು. ಅನುಮಾನಗೊಂಡು ಬೀಗ ಹಾಕಿದ್ದ ಮನೆ ಬಾಗಿಲನ್ನು ಒಡೆದು ನೋಡಿದಾಗ ನವೀದಾ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುತ್ತಿಗೆ ಮೇಲೆ ಗಾಯದ ಗುರುತುಗಳು ಕಂಡು ಬಂದಿದೆ.
ಈ ಸಂಭಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಕ್ಬರ್ ಆಲಿಯನ್ನು ಬಂಧಿಸಿದ್ದಾರೆ
In a shocking incident, a man allegedly killed his wife at Rajiv Nagar in Mysuru. Naveeda is dead. Akbar Ali is an accused in the murder. The accused's husband, Akbar Ali, has been taken into custody by the police. Akbar Ali, a native of Mandya (Mandya), was an auto driver. Naveeda and Akbar Ali have been married for 13 years. The couple had three children and lived in Rajiv Nagar, Mysuru.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm