ಬ್ರೇಕಿಂಗ್ ನ್ಯೂಸ್
27-06-22 09:01 pm HK News Desk ಕ್ರೈಂ
ರಾಜಸ್ತಾನ, ಜೂ 27: ಒಂದು ಕಾಲದಲ್ಲಿ ರಾಜಸ್ತಾನದ ಪಾಲಿ ಜಿಲ್ಲೆಯ ಸಂದೇರಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೇಡಿ ಸಿಂಗಮ್ ಆಗಿ ಮೆರೆದಿದ್ದ ಸೀಮಾ ಜಾಖರ್ ಅವರ ಅಸಲಿ ಮುಖವಾಡ ಈಗ ಕಳಚಿ ಬಿದ್ದಿದೆ.
ಹೌದು, ರಕ್ಷಣೆ ಮಾಡಬೇಕಾದ ಪೊಲೀಸ್ ಅಧಿಕಾರಿಯೇ ಭಕ್ಷಕರಾಗಲು ಹೋಗಿ ಇದೀಗ ಜೈಲು ಸೇರಿದ್ದಾರೆ.
ಸೀಮಾ ಜಾಖರ್ ಅವರನ್ನು ರಾಜಸ್ಥಾನ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಅದು ಕೂಡ ಬಿಗ್ ಡೀಲ್ಗೆ ಸಂಬಂಧಿಸಿದ ಪ್ರಕರಣದ ಸಲುವಾಗಿ ಎಂಬುದು ವಿಶೇಷ. ಸಿರೋಹಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೇಡಿ ಸಿಂಗಮ್ ಎಂದೇ ಖ್ಯಾತರಾಗಿದ್ದ ಸೀಮಾ ಜಾಖರ್ ಹೆಸರು ಡ್ರಗ್ಸ್ ಮಾಫಿಯಾ ಜೊತೆ ತಳುಕು ಹಾಕಿಕೊಂಡಿತ್ತು. ಅಷ್ಟೇ ಅಲ್ಲದೆ ಡ್ರಗ್ಸ್ ಕಳ್ಳಸಾಗಣೆದಾರರನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪ ಎದುರಿಸಿದ್ದರು. ಇದೀಗ ಈ ಆರೋಪಗಳು ನಿಜವಾಗಿದೆ.

ಬರ್ಲುಟ್ ಪೊಲೀಸರು ಕಳೆದ ವರ್ಷ ಡ್ರಗ್ಸ್ ಜಾಲವೊಂದನ್ನು ಬೇಧಿಸಿದ್ದರು. ಅಲ್ಲದೆ ಮಾದಕ ದ್ರವ್ಯ ಸಾಗಣೆದಾರರ ತಂಡವನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಅವರ ವಾಹನದಲ್ಲಿ 141 ಕೆಜಿ ವ್ಯಸನಕಾರಿ ಮಾದಕವಸ್ತು ಪತ್ತೆಯಾಗಿತ್ತು. ಆದರೆ ಬಂಧಿತರಾದ ಆರೋಪಿಗಳು ಕೆಲವೇ ಗಂಟೆಗಳ ಅಂತರದಲ್ಲಿ ಪರಾರಿಯಾಗಿದ್ದರು. ಹೀಗೆ ಪರಾರಿಯಾಗಲು ಸಹಾಯ ಮಾಡಿದ್ದು ಸಬ್ ಇನ್ಸ್ಪೆಕ್ಟರ್ ಸೀಮಾ ಜಾಖರ್.

ಅಂದು ಕರ್ತವ್ಯದಲ್ಲಿ ಸೀಮಾ ಜಾಖರ್ ಡ್ರಗ್ಸ್ ಡೀಲರ್ಗಳೊಂದಿಗೆ ಡೀಲ್ ಕುದುರಿಸಿದ್ದರು. 10 ಲಕ್ಷ ರೂಪಾಯಿ ಪಡೆಯುವ ಮೂಲಕ ಮಾದಕವಸ್ತು ಸಾಗಣೆದಾರರು ತಪ್ಪಿಸಿಕೊಳ್ಳಲು ನೇರ ಸಹಾಯ ಮಾಡಿದ್ದರು. ಈ ಆರೋಪದ ನಂತರ ಆಕೆ ಮತ್ತು ಮೂವರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿತ್ತು. ಆ ಬಳಿಕ ನಡೆದ ತನಿಖೆಯಲ್ಲಿ ಸೀಮಾ ಜಾಖರ್ ಆರೋಪಿಗಳೊಂದಿಗೆ ಡೀಲ್ ಮಾಡಿಕೊಂಡಿರುವ ದೃಶ್ಯಾವಳಿಗಳು ಹೊಟೇಲ್ವೊಂದ ಸಿಸಿಟಿವಿಯಲ್ಲಿ ಸೆರೆಯಾಗಿರುವುದು ಬೆಳಕಿಗೆ ಬಂದಿವೆ. ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದ ನಂತರ ಸೀಮಾ ಜಾಖರ್ ಅವರನ್ನು ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿತ್ತು.
ಹಲವು ಬಾರಿ ತಪ್ಪಿಸಿಕೊಂಡಿದ್ದ ಸ್ವಯಂ ಘೋಷಿತ ಲೇಡಿ ಸಿಂಗಮ್ರನ್ನು ಕೊನೆಗೂ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿಯ ಮೇರೆ ಜೋಧ್‌ಪುರದಲ್ಲಿರುವ ಮನೆಯ ಮೇಲೆ ದಾಳಿ ಮಾಡಿದ ಸ್ವರೂಪಗಂಜ್ ಪೊಲೀಸರು ಸೀಮಾ ಜಾಖರ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಸೋಮವಾರ ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ ಎಂದು ಸಿರೋಹಿ ಎಸ್ಪಿ ಧರ್ಮೇಂದ್ರ ಸಿಂಗ್ ಯಾದವ್ ಹೇಳಿದ್ದಾರೆ.
Police caught Seema from Jodhpur on Sunday itself and brought her to Sarupganj police station in Sirohi. According to Superintendent of Police Dharmendra Singh Yadav, the dismissed sub-inspector Seema Jakhar, resident of Jodhpur, was arrested on Sunday in the case. Sirohi Police team was sent to Jodhpur on the information of border being in Jodhpur itself. But, she could not be found at his house in Jodhpur.
03-02-26 11:53 am
Bangalore Correspondent
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
Manjeshwar Murder: ಆಸ್ತಿ ವಿಚಾರದಲ್ಲಿ ಗಲಾಟೆ ; ಬ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
03-02-26 11:55 am
HK News Desk
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm