ಬ್ರೇಕಿಂಗ್ ನ್ಯೂಸ್
22-06-21 04:26 pm srinath bhalle : One India Kannada ಅಂಕಣಗಳು
ದಿನನಿತ್ಯದ ನಮ್ಮ ಜೀವನದಲ್ಲಿ ಹಲವಾರು ಚಿಕ್ ಚಿಕ್ ವಿಷಯಗಳು ನಡೆಯುತ್ತಲೇ ಇರುತ್ತದೆ. ಕೆಲವನ್ನು ಮಾತ್ರ ಗಮನಿಸುತ್ತೇವೆ, ಇನ್ನು ಕೆಲವನ್ನು ಗಮನಿಸಿದರೂ ಅಷ್ಟಾಗಿ ತಲೆಗೆ ಹಾಕಿಕೊಳ್ಳೋದಿಲ್ಲ. ಆದರೆ ಹಲವಾರು ವಿಚಾರಗಳು ಗಮನಕ್ಕೆ ಬರದೇ ಸರಿದು ಹೋಗುತ್ತದೆ.
ಮೊದಲಿಗೆ ಈ ಚಿಕ್ ಚಿಕ್ ವಿಷಯ ಅಂದ್ರೇನು? ಪುಟ್ ಪುಟ್ ವಿಷಯ ಎನ್ನಬಹುದು. ಅರ್ಥಾತ್ ಅಳತೆಗೆ ಸಿಗದ ಅಂತಾನೂ ಆಗಬಹುದು ಅಥವಾ ಇಂಥವನ್ನೆಲ್ಲಾ ಅಳೆಯೋದಕ್ಕೆ ಯಾರಿಗೆ ಸ್ವಾಮಿ ಸಮಯವಿದೆ ಅಂತಾನೂ ಆಗಬಹುದು. ಒಟ್ಟಿನಲ್ಲಿ ಸಮಯ ವ್ಯರ್ಥ ಎನಿಸಬಹುದಾದದ್ದೇ ಈ ಚಿಕ್ ಚಿಕ್ ವಿಷಯಗಳು. ಆದರೆ ಹನಿ ಹನಿಗೂಡಿದರೆ ಹಳ್ಳ ಎಂಬುದನ್ನು ಮರೆಯದಿರಿ.
ಹೊರಗೆ ಮತ್ತೊಬ್ಬರ ಜೊತೆ affair ಇರುತ್ತದೆ
ಅಂದ ಹಾಗೆ ಇಂದಿನ ವಿಷಯಗಳನ್ನು ಹನಿ ಹನಿಗೂಡಿದರೆ ಹಳ್ಳ ಎಂಬುದರಿಂದಲೇ ಆರಂಭಿಸುವಾ. ಒಬ್ಬ ವ್ಯಕ್ತಿಗೆ ಹೆಂಡತಿಯೂ ಇದ್ದು, ಹೊರಗೆ ಮತ್ತೊಬ್ಬರ ಜೊತೆ affair ಇರುತ್ತದೆ ಅಂದುಕೊಳ್ಳೋಣ. ಇಂದಿನ ಟಿವಿ ಧಾರಾವಾಹಿಗಳಲ್ಲಿ ಹೆಚ್ಚು ಕಮ್ಮಿ ಎಲ್ಲದರ ಕಥೆಯೂ ಇದೇನೆ. ಹಾಗಾಗಿ ಈ ವಿಚಾರದ ಬಗ್ಗೆ ಆಳವಾಗಿ ಹೇಳುವ ಅವಶ್ಯಕತೆಯೇ ಇಲ್ಲ. ಈ ಗಾದೆಗೂ ಈ ಸನ್ನಿವೇಶಕ್ಕೂ ಏನು ಸಂಬಂಧ ಎಂದಿರಾ? ಇದೇ ಚಿಕ್ ವಿಷ್ಯ. ಹನಿ ಹನಿಗೂಡಿದರೆ ಹಳ್ಳ ಎಂಬುದನ್ನ honey honey ಕೂಡಿದರೆ (ಆಸಾಮಿಗೆ) ಹಳ್ಳವೇ ಗತಿ ಅಂತ ಅರ್ಥೈಸಿಕೊಂಡರೆ ಹೇಗೆ? ನೀರಿನ ಹನಿಯನ್ನು. ಜೇನನ್ನು, ಪ್ರೇಯಸಿಯನ್ನು honey ಎಂಬುದಾಗಿ ಕರೆಯುವಂತೆ ಚಿಕ್ಕದಾಗಿ ಯೋಚಿಸಿ. ಅದರ ಸುತ್ತಲೂ ಒಮ್ಮೆ ಕಿರುನಾಟಕ ಬರೆದಿದ್ದೆ. ಅಂದರೆ, ಚಿಕ್ ವಿಷಯವೇ ಆದರೂ ಇದೊಂದು ಕಿರುನಾಟಕದ ಮೆಟೀರಿಯಲ್ ಆಗಬಹುದು ಅಂತ.
ಕೊಂಚ ದೊಡ್ಡದಾಗ ಅರ್ಥಾತ್ ಇನ್ನೂ ಹರೆಯಕ್ಕೆ ಬಂದಿಲ್ಲ
ಈಗ ಮುಂದಿನ ಚಿಕ್ ವಿಷಯಕ್ಕೆ ಹೋಗೋಣ ಬನ್ನಿ. ಚಿಕ್ ಎಂದರೇನು? ಒಂದು ನಿಮಿಷ! ನಾನು ಹೇಳಿದ್ದು ಆಂಗ್ಲದ chick ಅಂತ. chick ಎಂದರೆ ಕೋಳಿಯ ಹಸುಗೂಸು. ಇದು ಕೊಂಚ ದೊಡ್ಡದಾಗ ಅರ್ಥಾತ್ ಇನ್ನೂ ಹರೆಯಕ್ಕೆ ಬಂದಿಲ್ಲ ಎಂದುಕೊಳ್ಳಿ, ಆಗ ಅದರ ಹೆಸರು ಚಿಕನ್ ಅಂತ. ಮೊಟ್ಟೆ ಇಡುವಂತೆ ಆದಾಗ ಅದನ್ನು ಕೋಳಿ ಎನ್ನುತ್ತಾರೆ ಅಲ್ಲವೇ? ಈಗ ವಿಷಯಗಳನ್ನು ಕ್ರೋಢೀಕರಿಸಿ ನೋಡೋಣ. ಮೊದಲಿಗೆ chick ಆಗಿದ್ದು, ಆಮೇಲೆ ಅದು ಚಿಕ್ಕ ಹೆನ್ ಅಥವಾ chick hen (chicken) ಆಗಿ ನಂತರ chick ತನ ಕಳೆದುಕೊಂಡು hen ಆಗಿದ್ದೇ ಚಿಕ್ ವಿಷಯ. ಹೆಣ್ಣನ್ನೂ ಚಿಕ್ ಎಂದು ಕರೆಯುವ ಮಹಾನುಭಾವರು ಇದ್ದಾರೆ.
ದೊಡ್ಡವರೆಲ್ಲಾ ಜಾಣರಲ್ಲ, ಚಿಕ್ಕವರಲ್ಲಾ ಕೋಣರಲ್ಲ
ಚಿಕ್ ಅಂದ್ರೆ ಬಾಲ್ಯ ಅಂತಾನೂ ಅರ್ಥವಾಗುತ್ತದೆ. ಹೇಗೆ ಅಂತೀರಾ? "ನಾನು ಚಿಕ್ಕವನಿದ್ದಾಗ' ಎಂಬ ಮಾತಿನಲ್ಲಿ ಚಿಕ್ಕ ಎಂದರೆ ಬಾಲ್ಯ. "ನಾನು ಚಿಕ್ಕವಳಿದ್ದಾಗಿನಿಂದ ಡಾನ್ಸ್ ಅಂದ್ರೆ ಭಾಳಾ ಇಷ್ಟ' ಅಂತ ಹೇಳುವಾಗ ಚಿಕ್ಕ ಎಂದರೆ ವಯಸ್ಸಿನಲ್ಲಿ ಚಿಕ್ಕವರಿದ್ದಾಗ ಅಂತ ಅರ್ಥ. ಚಿಕ್ಕವರು ಎಂದರೇನೇ ಕಿರಿಯ ವಯಸ್ಸಿನವರು ಅಂತ ಅರ್ಥ. "ದೊಡ್ಡವರೆಲ್ಲಾ ಜಾಣರಲ್ಲ, ಚಿಕ್ಕವರಲ್ಲಾ ಕೋಣರಲ್ಲ' ಎಂಬ ಹಾಡು ಕೇಳದವರಾರು? ಇಲ್ಲಿ ದೊಡ್ಡವರು ಎಂದರೆ ವಯಸ್ಸಿನಲ್ಲಿ ಹಿರಿಯರು ಅಥವಾ ಪದವಿಯಲ್ಲಿ ಹಿರಿಯರು ಅಂತ. ಚಿಕ್ಕವರು ಎಂದರೆ ವಯಸ್ಸಿನಲ್ಲಿ ಅಥವಾ ಅಂತಸ್ತಿನಲ್ಲಿ ಎಂದೂ ಆಗುತ್ತದೆ. ಇಂಥಾ ಚಿಕ್ ಚಿಕ್ ವಿಷಯ ನಿಮಗೆಲ್ಲಾ ಗೊತ್ತೇ ಇದೆ ಅಲ್ಲವೇ?
ಬುಧ ಗ್ರಹ ಕೇವಲ 88 ದಿನಗಳಲ್ಲಿ ರೌಂಡ್ ಹಾಕುತ್ತದೆ
ಬುಧ ಗ್ರಹ ಎಂದರೆ ಆಂಗ್ಲದಲ್ಲಿ Mercury ಅಂತ. ಗ್ರಹಗಳಲ್ಲಿ ಮೊದಲಿಗ ಈ Mercury. ಶಾಲೆಗಳಲ್ಲಿ ಕಲಿತಿರುವಂತೆ Mercury, Venus ನಂತರ ನಮ್ಮ ಪುಣ್ಯಭೂಮಿ. ಭೂಮಿಯು ಸೂರ್ಯ ಸುತ್ತ ಒಂದು ರೌಂಡ್ ಹೊಡೆಯಲು 365 ದಿನಗಳನ್ನು ತೆಗೆದುಕೊಂಡರೆ ಈ ಬುಧ ಗ್ರಹ ಕೇವಲ 88 ದಿನಗಳಲ್ಲಿ ರೌಂಡ್ ಹಾಕಿ ಬರುತ್ತಾನೆ. ಅಷ್ಟೇ ಏಕೆ, ಇತರೆ ಯಾವುದೇ ಗ್ರಹಕ್ಕೆ ಹೋಲಿಸಿದಾಗ ಅತ್ಯಂತ ವೇಗವಾಗಿ ರೌಂಡ್ ಹಾಕಿ ಬರುತ್ತದೆ. ಅಂದ ಹಾಗೆ ಈ Mercury ಎಂಬುದು ಗ್ರೀಕ್ ದೇವತೆಯಾದ ಹೆರ್ಮಿಸ್ ದೇವತೆಯ ಹೆಸರು. ಈ ದೇವತೆ ಅತ್ಯಂತ ಚುರುಕು ಹಾಗಾಗಿ ಈತ ದೇವಾನುದೇವತೆಗಳ ದೂತ ಕೂಡ. ಒಬ್ಬ ದೂತ ಎಂದ ಕೂಡಲೇ ವೇಗವಾಗಿ ಇರಲೇಬೇಕು ಅಲ್ಲವೇ? ಇಷ್ಟೆಲ್ಲಾ ವಿಷಯವನ್ನು ತಲೆಗೆ ತೆಗೆದುಕೊಂಡು Mercury ಎಂಬುದನ್ನು ಬೇರೆಲ್ಲಿ ಕೇಳಿದ್ದೀರಿ ಅಂತ ಆಲೋಚಿಸಿ. ಸರಿಯಾಗಿ ಹೇಳಿದಿರಿ, Thermometer ನಲ್ಲಿ. ಕನ್ನಡದಲ್ಲಿ ಇದನ್ನು ಪಾದರಸ ಎನ್ನುತ್ತಾರೆ. ಚುರುಕು ಎಂಬುದಕ್ಕೆ ಇನ್ನೊಂದು ಹೆಸರು ಪಾದರಸ. ಬುಧಗ್ರಹ ಪಾದರಸದಂತೆ ಚುರುಕು ಅಂತ Mercury ಹೆಸರು ಬಂತೇ? ಬುಧಗ್ರಹ, Mercury, ಪಾದರಸ ವಿಷಯಗಳನ್ನು ಹೊಲೆದ ಚಿಕ್ ಚಿಕ್ ವಿಷಯ ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ.
ಗಂಡನನ್ನು ಕೈವಶ ಮಾಡಿ ಇಟ್ಟುಕೊಂಡಿದ್ದಾಳೆ
ಒಂದು ಕೋಳಿಯಿಂದ ನಾವೇನು ಕಲಿಯಬಹುದು ಎಂದರೆ ಹೆಕ್ಕುವುದು. ಒಂದು ಕೋಳಿಯು ತನ್ನ ಕೊಕ್ಕಿನಿಂದ ಟುಕು ಟುಕು ಅಂತ ಕುಕ್ಕಿ ತಿನ್ನುತ್ತಾ ಸಾಗುತ್ತದೆ. ಅರ್ಥಾತ್ ಒಂದು ಕೋಳಿಯು ಒಮ್ಮೆ ಹೆಕ್ಕಿ ಕುಕ್ಕಿ ತಿಂದ ಮೇಲೆ ಆ ಆಹಾರ ಅದರ ವಶ. ಮತ್ತೊಬ್ಬರು ಅದನ್ನು ಕಿತ್ತುಕೊಳ್ಳಲಾಗದು ಎನ್ನಬಹುದು. ಈಗ ಮತ್ತೊಂದು ವಿಷಯ ಹೇಳುತ್ತೇನೆ. ಒಂದು ಹೆಣ್ಣು ತನ್ನ ಗಂಡನನ್ನು ಕೈವಶ ಮಾಡಿ ಇಟ್ಟುಕೊಂಡಿದ್ದಾಳೆ ಎಂದುಕೊಳ್ಳಿ. ಆ ಗಂಡು ಪ್ರಾಣಿಯನ್ನು ಏನೆಂದು ಕರೆಯುತ್ತೀರಿ? ಮತ್ತೊಂದು ಸರಿಯಾದ ಉತ್ತರ ಹೇಳಿದಿರಿ, ಹೌದು "ಅಮ್ಮಾವ್ರ ಗಂಡ'. ಈಗ ಎರಡು ವಿಷಯಗಳು ನಿಮ್ಮ ಮುಂದಿದೆ. ಒಂದು ಕೋಳಿಯು ತಾ ಹೆಕ್ಕಿ ಕುಕ್ಕಿ ತಿಂದ ಆಹಾರ. ಮತ್ತೊಂದು ಕಡೆ ಅಮ್ಮಾವ್ರ ಗಂಡ. ಈ ಎರಡು ವಿಷಯಗಳನ್ನು ಹೊಲೆಯುವುದು ಹೇಗೆ? hen pecked husband ಎಂಬ ಮಾತು ಕೇಳಿದ್ದೀರಾ ಅಲ್ಲವೇ? ಇದುವೇ ಅಮ್ಮಾವ್ರ ಗಂಡ ಅಂತ. ಕೋಳಿಯ ವಿಷಯಕ್ಕೆ ಜೋಡಿಸಿದರೆ "ಹೆಣ್ pecked husband' ಎನ್ನಬಹುದೇ ಎಂಬುದು ನಿಮ್ಮೊಂದಿಗೆ ಹಂಚಿಕೊಳ್ಳಬಯಸಿದ್ದ ಚಿಕ್ ಚಿಕ್ ವಿಷಯ.
ಹೆಣ್ಣು ನವಿಲು ಅಂದವಿಲ್ಲ
"ಹೆಣ್ಣು ನವಿಲು ಅಂದವಿಲ್ಲ, ಗರಿಯ ಸೊಬಗು ಹೊಂದಲಿಲ್ಲ, ಕುಣಿವಾ ನವಿಲು ಗಂಡು ಕೇಳೆಲೇ' ಎಂಬ "ನೀ ನನ್ನ ಗೆಲ್ಲಲಾರೆ' ಚಿತ್ರದ ಹಾಡು ಕೇಳಿದ್ದೀರಾ ಅಲ್ಲವೇ? ನವಿಲುಗಳಲ್ಲಿ ಗಂಡು ಮತ್ತು ಹೆಣ್ಣು ಎರಡೂ ಇದೆ ಅಂತ ನಿಮಗೂ ಗೊತ್ತು. ನವಿಲು ಎಂದರೆ Peacock. ಇದು ಗಂಡು ನವಿಲಿನ ಹೆಸರೋ? ಹೆಣ್ಣು ನವಿಲಿನ ಹೆಸರೋ? ಕನ್ನಡದಲ್ಲಿ ನವಿಲು ಅಂದರೆ ಆಯ್ತು. ಅದರ ಹಿಂದೆ ಹೆಣ್ಣೋ ಗಂಡೋ ಹೇಳಿದರೆ ಸರಿಯಾಗುತ್ತೆ. ಆದರೆ ಆಂಗ್ಲದಲ್ಲಿ ಹಾಗಲ್ಲ ನೋಡಿ. Peacock ಎಂದರೆ ಗಂಡು ನವಿಲೇ. ಹೆಣ್ಣು ನವಿಲಿಗೆ Peahen ಎನ್ನುತ್ತಾರೆ. ಆದರೆ ಹೆಚ್ಚು ಬಳಕೆಯಲ್ಲಿ ಇಲ್ಲ. ಎಲ್ಲಿಯ ಕೋಳಿ ಅಥವಾ ಹುಂಜ? ಎಲ್ಲಿಯ ನವಿಲು ಅಲ್ಲವೇ? Cock ಅಥವಾ Hen ಎಂದರೆ ಈಗ ಅರ್ಥವೇನೋ ಆಯ್ತು ನಿಜ ಆದರೆ ಈ ಹುಂಜ ಅಥವಾ ಕೋಳಿಯ ಅದೇನೋ Pea ಅಂತ ಇದೆಯಲ್ಲಾ ಅದಕ್ಕೇನು ಅರ್ಥ? ಸತ್ಯವನ್ನೇ ಹೇಳಬೇಕು ಎಂದರೆ ಈ Pea ಗೆ ಇಲ್ಲಿ ಬಟಾಣಿ ಎಂಬ ಅರ್ಥ ಇಲ್ಲವೇ ಇಲ್ಲ. ಈ ಚಿಕ್ ವಿಷಯವನ್ನೂ ಹೇಳೋಣಾ ಅಂತ ಅಂದುಕೊಂಡಿದ್ದಕ್ಕೆ ಈಗ ಸಮಯ ಕೂಡಿ ಬಂತು ನೋಡಿ.
ಹಾಲಿಗೂ ಆಲ್ಕೋಹಾಲಿಗೂ ಏನೂ ಸಂಬಂಧವಿಲ್ಲ
ಆದರೆ ಮೇಲಿನ ವಿಷಯ Peasಗೂ ಈವರೆಗೆ ಹೇಳಿದ ಚಿಕ್ ಚಿಕ್ ವಿಷಯಕ್ಕೆ ಹೇಗೆ ಹೊಂದಿಕೆಯಾಯ್ತು? Pea ಅಂದರೆ ಬಟಾಣಿ ಆದರೆ ChickPeas ಅಂದ್ರೆ ಕಡಲೆಕಾಳು. ಇಲ್ಲಿ ಬಂತು ನೋಡಿ ಚಿಕ್ ವಿಷಯ. Peasಗಿಂತ ಸೈಜಿನಲ್ಲಿ ಕಡಲೆಯಕಾಳು ದೊಡ್ಡದೇ ಆಗಿದ್ದರೂ ಹೆಸರು ಮಾತ್ರ ಚಿಕ್-Peas ಅಂತ. ಏನನ್ಯಾಯ ಅಲ್ಲವೇ?
ನಿಮ್ಮೆಲ್ಲರಿಗೂ ಆಲ್ಕೋಹಾಲು ಅಂದ್ರೆ ಗೊತ್ತಿದೆ ಅಲ್ಲವೇ? ಹೆಸರಿನಲ್ಲಿ ಹಾಲು ಅಂತ ಇದ್ದರೂ ಹಾಲಿಗೂ ಆಲ್ಕೋಹಾಲಿಗೂ ಏನೂ ಸಂಬಂಧವಿಲ್ಲ ಅನ್ನೋದು ಅತೀ ಚಿಕ್ಕ ವಿಷಯ. ಆದರೆ ಸಂಬಂಧವಿದೆ ಅಂತ ನಾನು ಹೇಳ್ತೀನಿ. ಸದ್ಯಕ್ಕೆ "ಆಲ್ಕೋಹಾಲು' ಎಂಬ ಪದವನ್ನು ತೆಗೆದುಕೊಳ್ಳಿ. ಇದನ್ನು ಚಿಕ್ಕದಾಗಿ ಹೇಗೆ ಹೇಳಬಹುದು? ಆಲ್ಕೋಹಾಲು ಎಂಬ ಪದದಲ್ಲಿ ಮೊದಲ ಮತ್ತು ಕೊನೆಯ ಅಕ್ಷರಗಳನ್ನು ಮಾತ್ರ ತೆಗೆದುಕೊಳ್ಳಿ. ಅದೇ "ಆಲು'. "ಹ'ಕಾರ ಪ್ರಿಯರು ಹಾಲು ಎನ್ನುವ ಬದಲು ಆಲು ಎನ್ನುತ್ತಾರೆ. ಇದೇ ಹಾಲಿಗೂ ಆಲ್ಕೋಹಾಲಿಗೂ ಇರುವ ಸಂಬಂಧ ಎಂಬ ಚಿಕ್ ವಿಷಯ.
ಹಾಲು- ಆಲ್ಕೋಹಾಲು- ಆಲೂ- ವೋಡ್ಕಾ
ಆಲ್ಕೋಹಾಲು ಎಂಬುದರ ಹ್ರಸ್ವರೂಪ "ಆಲು' ಅಂತ ಹೇಳಿದೆ. ಸದ್ಯಕ್ಕೆ ಇದನ್ನು "ಆಲೂ' ಅಂತ ಕರೆಯೋಣ. ಉತ್ತರ ಭಾರತೀಯರು ಆಲೂಗಡ್ಡೆಯನ್ನು ಚಿಕ್ಕದಾಗಿ "ಆಲೂ' ಎನ್ನುತ್ತಾರೆ. ನಾವೂ ಬೇಕಿದ್ರೆ ಹಾಗೆಯೇ ಕರೆಯಬಹುದು. "ಆಲೂಗಡ್ಡೆ' ಪದದ ಮೊದಲೆರಡು ಅಕ್ಷರವನ್ನು ಮಾತ್ರ ತೆಗೆದುಕೊಂಡು ಹ್ರಸ್ವರೂಪದಲ್ಲಿ ಹೇಳಿದರೆ ಆಲೂಗಡ್ಡೆಯನ್ನು ಆಲೂ ಎನ್ನಬಹುದು. Vodka ಎಂಬುದೂ ಒಂದು ಆಲ್ಕೋಹಾಲ್ ಪಾನೀಯ. ಇದನ್ನು ಹಲವಾರು ಪದಾರ್ಥಗಳಿಂದ ಮಾಡುತ್ತಾರೆ. ಅದರಲ್ಲಿ ಒಂದು ಬಗೆಯ Vodka ವನ್ನು ಆಲೂಗಡ್ಡೆಯಿಂದಲೂ ತಯಾರಿಸುತ್ತಾರೆ. ಹಾಲು- ಆಲ್ಕೋಹಾಲು- ಆಲೂ- ವೋಡ್ಕಾ ಎಂಬುದೆಲ್ಲಾ ಒಂದು ರೀತಿ ಸಂಬಂಧಿಗಳೇ ಅಂತ ಒಂದು ಚಿಕ್ ಹೇಳೋದಿತ್ತು, ಈಗ ಹೇಳಿದೆ.
ಜೀವನವೆಲ್ಲಾ ಚಿಕ್ ಚಿಕ್ ವಿಷಯದ ಸಂತೆಯೇ ಅಲ್ಲವೇ? ಸದ್ಯಕ್ಕೆ ಇಲ್ಲಿಗೆ ನಿಲ್ಲಿಸೋಣ. ಚಿಕ್ ವಿಷಯದ ನಶೆ ಏರಿದ್ದರೆ, ನಿಮಗೆ ಗೊತ್ತಿರುವ ಚಿಕ್ ವಿಷಯ ಹಂಚಿಕೊಳ್ಳಿ.
(Kannada Copy of One India Kannada)
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
30-04-25 02:13 pm
HK News Desk
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
30-04-25 11:26 am
Mangalore Correspondent
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm