ಬ್ರೇಕಿಂಗ್ ನ್ಯೂಸ್
22-05-21 10:33 pm Mangaluru Correspondent ನ್ಯೂಸ್ View
ಮಂಗಳೂರು, ಮೇ 22: ಸೋಶಿಯಲ್ ಮೀಡಿಯಾ ಜನಶಕ್ತಿಯನ್ನು ನಿರ್ಧರಿಸಬಲ್ಲದು ಎನ್ನುವುದನ್ನು ಕರಾವಳಿಯ ಜನ ತೋರಿಸಿದ್ದಾರೆ. ಎಂಆರ್ ಪಿಎಲ್ ಉದ್ಯೋಗ ಆಯ್ಕೆ ಪ್ರಕ್ರಿಯೆಯಲ್ಲಿ ಕನ್ನಡಿಗರಿಗೆ ಆಗಿರುವ ವಂಚನೆಯನ್ನು ಎತ್ತಿಹಿಡಿದು ಈ ಭಾಗದ ಸಂಸದರು ಮತ್ತು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದು ಆರಂಭಿಕ ಫಲ ನೀಡಿದೆ. ಎಂಆರ್ ಪಿಎಲ್ ಅಧಿಕಾರಿಗಳ ಜೊತೆ ತುರ್ತು ಸಭೆ ಕರೆದ ಶಾಸಕರು ಮತ್ತು ಸಂಸದರು ಆಯ್ಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ.
ಫೇಸ್ಬುಕ್ ನಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಸೇರಿ ಶಾಸಕರು, ಸಂಸದರಾದಿ ಜನಪ್ರತಿನಿಧಿಗಳ ಕರ್ತವ್ಯ ನಿಷ್ಠೆಯನ್ನೇ ಜನರು ಪ್ರಶ್ನೆ ಮಾಡಿದ್ದರು. ಕರಾವಳಿಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಈ ಭಾಗದ ಜನರಿಗೆ ಎಂಆರ್ ಪಿಎಲ್ ಉದ್ಯೋಗದಲ್ಲಿ ವಂಚನೆಯಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಕಳೆದ ಎರಡು – ಮೂರು ದಿನಗಳಲ್ಲಿ ಜಾಲತಾಣದಲ್ಲಿ ಪಕ್ಷ ಮತ ಭೇದ ಮರೆತು ಆಕ್ರೋಶ ತೋರಿದ್ದು ಜನಪ್ರತಿನಿಧಿಗಳನ್ನು ಚಿಂತೆಗೀಡು ಮಾಡಿತ್ತು.
ಇದರಿಂದ ಗೇಲಿಗೊಳಗಾದ ಸಂಸದ ನಳಿನ್ ಕುಮಾರ್ ದಿಢೀರ್ ಎಚ್ಚೆತ್ತವರ ರೀತಿ ಎಂಆರ್ ಪಿಎಲ್ ಅಧಿಕಾರಿಗಳನ್ನು ಮಂಗಳೂರಿನ ಸಂಸದರ ಕಚೇರಿಗೆ ಕರೆಸಿಕೊಂಡು ಇಂದು ಸಂಜೆ ಸಭೆ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್ ಕರಾವಳಿ ಜನರ ಆಕ್ರೋಶವನ್ನು ಅಧಿಕಾರಿಗಳ ಕಿವಿಗೆ ಮುಟ್ಟಿಸಿದ್ದಾರೆ. ಕೂಡಲೇ ಈ ಭಾಗದ ಜನರಿಗಾದ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕಾಗಿ ಆಯ್ಕೆ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸುವಂತೆ ಕೇಳಿಕೊಂಡಿದ್ದಾರೆ.
ಶಾಸಕರು ಮತ್ತು ಸಂಸದರ ಒತ್ತಾಯಪೂರ್ವಕ ಕೋರಿಕೆಯನ್ನು ಅಧಿಕಾರಿಗಳು ಒಪ್ಪಿದ್ದಾರೆಂದು ಬಿಜೆಪಿಯವರು ಜಾಲತಾಣದಲ್ಲಿ ಫಾರ್ವರ್ಡ್ ಮಾಡುತ್ತಿದ್ದಾರೆ. ಎಂಆರ್ ಪಿಎಲ್ ಆಯ್ಕೆ ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ ಎನ್ನುವ ರೀತಿ ಮುಖ ಮುಚ್ಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಆದರೆ, ಕೇಂದ್ರ ಸರಕಾರದ ಅಧೀನ ಸಂಸ್ಥೆಯಾಗಿರುವ ಎಂಆರ್ ಪಿಎಲ್ ನಲ್ಲಿ ಉದ್ಯೋಗ ಪ್ರಕ್ರಿಯೆಯನ್ನು ಕೊನೆಕ್ಷಣದಲ್ಲಿ ಸ್ಥಗಿತಗೊಳಿಸುವುದಂದ್ರೆ ಸುಲಭದ ಮಾತಲ್ಲ. ಆಯ್ಕೆ ಪ್ರಕ್ರಿಯೆ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದು, ಕಾನೂನು ಪ್ರಕಾರವೇ ನಡೆದಿದ್ದರೆ ಅದನ್ನು ಸಕಾರಣವಿಲ್ಲದೆ ರದ್ದುಗೊಳಿಸಲು ಸಾಧ್ಯವಿಲ್ಲ. ಸಂಸದರು ಮತ್ತು ಶಾಸಕರು ಕೊನೆಯ ಕ್ಷಣದಲ್ಲಿ ಗೋಗರೆದರೂ, ಅಧಿಕಾರಸ್ಥರ ಲಾಬಿ ಇವರು ಎಣಿಸಿದಂತೆಯೂ ಇಲ್ಲ. ಯಾಕಂದ್ರೆ, ಯಾವುದೇ ಹುದ್ದೆಯನ್ನು ಅಲ್ಲಿನ ಉನ್ನತ ಮಟ್ಟದ ಅಧಿಕಾರಿಯೇ ಆಗಿದ್ದರೂ ನೇರವಾಗಿ ಆಯ್ಕೆ ಮಾಡುವಂತಿಲ್ಲ,
ಮಾಹಿತಿ ಪ್ರಕಾರ, 80 ಶೇಕಡಾ ಉದ್ಯೋಗ ಉತ್ತರ ಪ್ರದೇಶ ಮತ್ತು ಬಿಹಾರಿಗಳ ಪಾಲಾಗಿದೆ. 183 ಉದ್ಯೋಗಕ್ಕೆ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಕರ್ನಾಟಕದ 13 ಮಂದಿಗೆ ಮಾತ್ರ ಉದ್ಯೋಗ ದಕ್ಕಿದೆ. ಇದರ ಹಿಂದೆ ಹಿಡನ್ ಅಜೆಂಡಾ ಇದ್ದಿರಬಹುದಾದರೂ ಅದನ್ನು ಸಕಾರಣವಿಲ್ಲದೆ ರದ್ದುಗೊಳಿಸಲಾಗದು. ಆಯ್ಕೆ ಪ್ರಕ್ರಿಯೆ ಸ್ಥಗಿತಗೊಳಿಸಬೇಕಿದ್ದರೆ, ನೇಮಕಾತಿಯ ವಿರುದ್ಧವೇ ದೂರು ದಾಖಲಾಗಬೇಕು. ಸ್ಪಷ್ಟ ಕಾರಣವನ್ನೂ ನೀಡಬೇಕಾಗುತ್ತದೆ. ಉನ್ನತ ಮಟ್ಟದ ಅಧಿಕಾರಿಗಳನ್ನು ಕರೆದು ಅವರಲ್ಲಿ ಗೋಗರೆದ ಮಾತ್ರಕ್ಕೆ ಆಯ್ಕೆ ಪ್ರಕ್ರಿಯೆ ಸ್ಥಗಿತಗೊಳ್ಳುವ ಸಾಧ್ಯತೆ ತೀರಾ ಕಡಿಮೆ. ಶಾಸಕರು ಮತ್ತು ಸಂಸದರು ಕಣ್ಣೊರೆಸುವ ತಂತ್ರವಾಗಿ ಬೀಸೋ ದೊಣ್ಣೆಯನ್ನು ತಪ್ಪಿಸಲು ಆಯ್ಕೆ ಪ್ರಕ್ರಿಯೆ ಸ್ಥಗಿತ ಎಂದು ಹೇಳಿಕೊಳ್ಳಬೇಕಷ್ಟೆ.. ಹಾಗೊಂದ್ವೇಳೆ, ಆಯ್ಕೆ ಪ್ರಕ್ರಿಯೆ ಸ್ಥಗಿತಗೊಳಿಸಿ ಮತ್ತೆ ಹೊಸದಾಗಿ ಆಯ್ಕೆ ಪ್ರಕ್ರಿಯೆ ನಡೆಸಿದರೆ ಅದು ನಮ್ಮ ಕರಾವಳಿಯ ಜನಪ್ರತಿನಿಧಿಗಳ ತಾಕತ್ತು ಅನ್ನಬಹುದೇನೋ..
MRPL Outsiders Job on Hold after Social Media posts by Youths go viral in Mangalore. A sudden meeting was held by BJP leaders and MLA's with MRPL Officals to hold the job placements ordered.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm