ಬ್ರೇಕಿಂಗ್ ನ್ಯೂಸ್
24-08-21 10:14 pm Headline Karnataka News Network ಕ್ರೀಡೆ
ಬೆಂಗಳೂರು, ಆಗಸ್ಟ್ 24: ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ವಿಶ್ವದ ಗಮನ ಸೆಳೆದಿದ್ದ ನೀರಜ್ ಚೋಪ್ರಾ ಕೊನೆಗೂ ತಮ್ಮ ಮಾಜಿ ಕೋಚ್ ಕಾಶೀನಾಥ್ ನಾಯ್ಕ್ ಅವರನ್ನು ಭೇಟಿಯಾಗಿದ್ದಾರೆ.
ಅತ್ತ ನೀರಜ್ ಚೋಪ್ರಾ ಜಪಾನ್ನಲ್ಲಿ ಜಾವೆಲಿನ್ ಎಸೆದು ಚಿನ್ನ ಗೆಲ್ಲುತ್ತಿದ್ದಂತೆ ಇತ್ತ ಕನ್ನಡಿಗ ಕಾಶೀನಾಥ್ ಹೆಸರು ಚಾಲ್ತಿಗೆ ಬಂದಿತ್ತು. ಭಾರತದ ಯುವ ಅಥ್ಲೀಟ್ನನ್ನು ಸಜ್ಜುಗೊಳಿಸುವಲ್ಲಿ ಕನ್ನಡಿಗನ ಪಾತ್ರದ ಬಗ್ಗೆ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ನೀರಜ್ ಸಾಧನೆ ಹಿಂದಿರುವ ಕನ್ನಡಿಗ ಕಾಶೀನಾಥ್ ನಾಯ್ಕ್ ಅವರಿಗೆ ಕರ್ನಾಟಕ ಸರ್ಕಾರ 10 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಆದರೆ, ಕರ್ನಾಟಕ ಸರಕಾರ ಬಹುಮಾನ ಘೋಷಿಸಿದ ಬೆನ್ನಲ್ಲೇ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ, ಕಾಶಿನಾಥ್ ನಾಯ್ಕ್ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದರು.
ನೀರಜ್ ಚೋಪ್ರಾಗೆ ತರಬೇತಿ ನೀಡಿರುವ ಕಾಶೀನಾಥ್ ನಾಯ್ಕ್ ಯಾರೆಂದೇ ಗೊತ್ತಿಲ್ಲ. ಅಂತಹ ಯಾವುದೇ ವ್ಯಕ್ತಿ ತರಬೇತಿ ನೀಡಿಲ್ಲ ಎಂದು ಅಥ್ಲೆಟಿಕ್ಸ್ ಫೆಡರೇಷನ್ ಅಧ್ಯಕ್ಷ ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಶೀನಾಥ್ ಅವರು ತಮ್ಮ ಕೋಚ್ ಎಂದು ನೀರಜ್ ಚೋಪ್ರಾ ಹೇಳಿಲ್ಲ. ಅಥ್ಲೆಟಿಕ್ಸ್ ಫೆಡರೇಷನ್ ಕೂಡ ಈ ಬಗ್ಗೆ ಖಚಿತಪಡಿಸಿಲ್ಲ. ಹೀಗಿರುವಾಗ ಕರ್ನಾಟಕ ಸರ್ಕಾರ ಕಾಶೀನಾಥ್ ನಾಯ್ಕ್ಗೆ ಹೇಗೆ ಬಹುಮಾನ ಘೋಷಿಸಿದೆ ಎಂದು ಅದಿಲ್ಲೆ ಸುಮರಿವಾಲ್ಲಾ ಪ್ರಶ್ನೆ ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು.
ಅಥ್ಲೆಟಿಕ್ಸ್ ಫೆಡರೇಷನ್ ನೀಡಿದ್ದ ಈ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಕಾಶೀನಾಥ್ ನಾಯ್ಕ್ ಬಗ್ಗೆ ಅಪಸ್ವರದ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಆದಾಗ್ಯೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಕಾಶಿನಾಥ್ ನಾಯ್ಕ್ ತಾನು 2015-17ರ ವರೆಗೆ ಪಾಟಿಯಾಲದ ಸೇನಾ ಕ್ರೀಡಾ ಸಂಕೀರ್ಣದಲ್ಲಿ ನೀರಜ್ ಚೋಪ್ರಾಗೆ ತರಬೇತಿ ನೀಡಿರುವುದಾಗಿ ಹೇಳಿದ್ದರು. ಅಲ್ಲದೆ, 2010ರ ಕಾಮ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದೇನೆ. ನೀರಜ್ಗೆ 6 ವರ್ಷಗಳ ಕಾಲ ಕೋಚಿಂಗ್ ಮಾಡಿರುವ ಬಗ್ಗೆ ಸಾಕ್ಷಿ ಒದಗಿಸಲು ಸಿದ್ದನಿದ್ದೇನೆ ಎಂದು ಕಾಶೀನಾಥ್ ತಿಳಿಸಿದ್ದರು. ಅಲ್ಲದೆ, ನಾನು ಕೋಚ್ ಆಗಿದ್ದೆನೋ ಇಲ್ಲವೋ ಎಂದು ನೀರಜ್ ಚೋಪ್ರಾ ಅವರೇ ಮುಂದೆ ಉತ್ತರ ಕೊಡಲಿದ್ದಾರೆ ಎಂದು ತಿಳಿಸಿದ್ದರು.
ಇದೀಗ ಗುರುವಿನ ನಿರೀಕ್ಷೆ ನಿಜವಾಗಿದೆ. ನೀರಜ್ ಚೋಪ್ರಾ ಇತ್ತೀಚೆಗೆ, ಕಾಶಿನಾಥ್ ನಾಯ್ಕ್ ಮಹಾರಾಷ್ಟ್ರದ ಪೂನಾದ ಮನೆಯಲ್ಲಿದ್ದ ಸಂದರ್ಭ ಅವರ ಮನೆಗೆ ಭೇಟಿ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಮುಂಬೈಗೆ ಆಗಮಿಸಿದ್ದ ನೀರಜ್, ಕಾಶಿನಾಥ್ ನಾಯ್ಕ್ ಪೂನಾದಲ್ಲಿರುವ ಬಗ್ಗೆ ಮಾಹಿತಿ ಪಡೆದು ಮನೆಗೇ ಬಂದಿದ್ದರು. ಅಷ್ಟೇ ಅಲ್ಲ, ತುಂಬ ಸಾಮಾನ್ಯ ವ್ಯಕ್ತಿಯ ರೀತಿ ಮನೆಯಲ್ಲಿ ತನ್ನ ಮಾಜಿ ಗುರು ಮತ್ತು ಮನೆಯವರ ಜೊತೆ ಕಳೆದಿದ್ದಾರೆ. ಈ ವೇಳೆ ತೆಗೆದುಕೊಂಡಿರುವ ಫೋಟೋಗಳು ಇದೀಗ ವೈರಲ್ ಆಗಿದ್ದು ಕೋಚ್ ಬಗೆಗಿನ ಸಂದೇಹಕ್ಕೆ ಉತ್ತರ ನೀಡಿವೆ. ವಿಶ್ವ ವಿಖ್ಯಾತಿ ಪಡೆದರೂ ಯಾವುದೇ ಅಹಂಕಾರವಿಲ್ಲದೆ, ಸಾಮಾನ್ಯನಂತೆ ಬಂದು ಹೋಗಿರುವ ನೀರಜ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Neeraj Chopra, the heartthrob of the nation, the winner of the only gold medal at the Tokyo Olympics in Javelin throw, on Tuesday visited the home of his former coach and Indian army subedar, Kashinath Naik in Koregaon Park area of Pune. Athletics Federation of India President Adille Sumariwalla had earlier issued a statement that Kashinath Naik had never trained Neeraj. As Neeraj came to the house of Kashinath Naik and spent almost an hour with his family members, Naik had the last laugh.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
10-09-25 11:02 am
Mangalore Correspondent
"ಅಮೃತ ಸೋಮೇಶ್ವರ ರಸ್ತೆ" ನಾಮಕರಣಕ್ಕೆ ಸೋಮೇಶ್ವರ ಪುರ...
09-09-25 10:47 pm
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm