ಬ್ರೇಕಿಂಗ್ ನ್ಯೂಸ್
03-07-21 10:34 am MYKHEL: Madhukara Shetty ಕ್ರೀಡೆ
ನವದೆಹಲಿ, ಜುಲೈ 3: ಭಾರತದ ಭರವಸೆಯ ಈಜುಪಟು ಮಾನಾ ಪಟೇಲ್ ಶುಕ್ರವಾರ ಐಡಿಹಾಸಿಕ ಸಾಧನೆಯನ್ನು ಮಾಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್ 2020ಗೆ ಆಯ್ಕೆಯಾದ ಭಾರತದ ಮೊದಲ ಸ್ವಿಮ್ಮರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರಾಗಿದ್ದಾರೆ. ಯೂನಿವರ್ಸಾಲಿಟಿ ಕೋಟಾದಲ್ಲಿ ಮಾನಾ ಪಟೇಲ್ ಈ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.
ಈ ಮೂಲಕ 21ರ ಹರೆಯದ ಮಾನಾ ಪಟೇಲ್ ಸ್ಮಿಮ್ಮರ್‌ಗಳಾದ ಸಜನ್ ಪ್ರಕಾಶ್ ಹಾಗೂ ಶ್ರೀಹರಿ ನಟರಾಜನ್ ಅವರನ್ನು ಒಳಗೊಂಡ ಭಾರತದ ಸ್ವಿಮ್ಮಿಂಗ್ ಸ್ಕ್ವಾಡ್‌ಗೆ ಸೇರ್ಪಡೆಗೊಂಡಿದ್ದಾರೆ. ಈ ತಿಂಗಳ ಜುಲೈ 23ರಿಂದ ಆಗಸ್ಟ್ 8ರ ವರೆಗೆ ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ಈ ಮಹತ್ವದ ಕ್ರೀಡಾಕೂಟ ನಡೆಯಲಿದೆ.

ಮಾನಾ ಮಟೇಲ್ 100 ಮೀಟರ್ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಪುರುಷ ಸ್ಪರ್ಧಿಗಳಾದ ಸುಜನ್ ಪ್ರಕಾಶ್ ಹಾಗೂ ಶ್ರೀಹರಿ ನಟರಾಜ್ ಕ್ರಮವಾಗಿ 200 ಮೀಟರ್ ಬಟರ್‌ಫ್ಲೈ ಹಾಗೂ 100 ಮೀಟರ್ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಇಬ್ಬರೂ ಕಳೆದ ತಿಂಗಳು ರೋಮ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಗೊಟ್ಟಿಸಿಕೊಂಡಿದ್ದಾರೆ. "ಇದೊಂದು ಅದ್ಭುತವಾದ ಅನುಭವ. ಒಲಿಂಪಿಕ್ಸ್ ಬಗ್ಗೆ ನಾನು ನನ್ನ ಸಹ ಈಜುಗಾರರಿಂದ ಸಾಕಷ್ಟು ಕೇಳಿದ್ದೇನೆ ಹಾಗೂ ಟೆಲಿವಿಶನ್‌ನಲ್ಲಿ ಸಾಕಷ್ಟು ಬಾರಿ ನೋಡಿದ್ದೇನೆ. ಅದರ ಚಿತ್ರಗಳನ್ನು ಕೂಡ ತುಂಬಾ ಬಾರಿ ನೋಡಿದ್ದೇನೆ. ಆದರೆ ಈ ಬಾರಿ ನಾನು ಅದರಲ್ಲಿ ಭಾಗಿಯಾಗಲಿದ್ದು ವಿಶ್ವಶ್ರೇಷ್ಠ ಸ್ಪರ್ಧಿಗಳೊಂದಿಗೆ ಪೈಪೋಟಿಗೆ ಇಳಿಯುವುವುದು ನನಗೆ ರೋಮಾಂಚನವನ್ನುಂಟು ಮಾಡುತ್ತಿದೆ" ಎಮದು ಗುಜರಾತ್ ಮೂಲದ ಮಾನಾ ಪಟೇಲ್ ಒಲಿಂಪಿಕ್ಸ್.ಕಾಮ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಇನ್ನು ಮಾನಾ ಪಟೇಲ್ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದುಕೊಂಡಿರುವುದಕ್ಕೆ ಭಾರತದ ಕ್ರೀಡಾ ಸಚಿವ ಕಿರಣ್ ರಿಜಿಜು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕ್ರೀಡಾ ಸಚಿವರು "ಬ್ಯಾಕ್‌ಸ್ಟ್ರೋಮ್ ಸ್ವಿಮ್ಮರ್ ಮಾನಾ ಪಟೇಲ್ ಭಾರತ ಪ್ರಥಮ ಮಹಿಳಾ ಹಾಗೂ ಮೂರನೇ ಸ್ವಿಮ್ಮರ್ ಆಗಿ ಟೋಕಿಯೋ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ. ಅಭಿನಂದನೆಗಳು ಮಾನಾ. ಉತ್ತಮ ಸಾಧನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
(Kannada Copy of Mykhel Kannada)
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
20-09-26 08:59 pm
HK News Staffer
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm