ಬ್ರೇಕಿಂಗ್ ನ್ಯೂಸ್
23-08-20 04:55 pm Headline Karnataka News Network ಕ್ರೀಡೆ
ಮುಂಬೈ: ಭಾರತ ತಂಡದ ಮಾಜಿ ನಾಯಕ ಧೋನಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರ ಅಭಿಮಾನಿಗಳ ನಡುವೆ ಗಲಾಟೆಯಾಗಿದ್ದು, ಓರ್ವನಿಗೆ ಗಂಭೀರವಾಗಿ ಗಾಯವಾಗಿದೆ.
ಈ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕುರುಂದವಾಡ್ ಎಂಬಲ್ಲಿ ನಡೆದಿದ್ದು, ವರದಿಯ ಪ್ರಕಾರ ಧೋನಿ ಅಭಿಮಾನಿಗಳು ರೋಹಿತ್ ಅಭಿಮಾನಿಯೋರ್ವನಿಗೆ ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಕೇವಲ ಬ್ಯಾನರ್ ಹಾಕುವ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.
ಅಗಸ್ಟ್ 15ರಂದು ನಿವೃತ್ತಿ ಘೋಷಣೆ ಮಾಡಿದ ಧೋನಿಯವ ಬ್ಯಾನರ್ ಅನ್ನು ಕುರುಂದವಾಡ್‍ನಲ್ಲಿ ಎಂಎಸ್‍ಡಿ ಅಭಿಮಾನಿಗಳು ಹಾಕಿದ್ದರು. ಕಳೆದ ಶನಿವಾರ ರೋಹಿತ್ ಶರ್ಮಾ ಅವರು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಬಂದಿದ್ದು, ಇದರ ಸಲುವಾಗಿ ರೋಹಿತ್ ಅಭಿಮಾನಿಗಳು ಕೂಡ ಇದೇ ಜಾಗದಲ್ಲಿ ಬ್ಯಾನರ್ ಹಾಕಿದ್ದಾರೆ. ಈ ವೇಳೆ ಧೋನಿಯವರ ಬ್ಯಾನರ್ ಅನ್ನು ಯಾರೋ ಕಿತ್ತು ಹಾಕಿದ್ದಾರೆ.
ನೆಚ್ಚಿನ ಆಟಗಾರನ ಬ್ಯಾನರ್ ಅನ್ನು ಕಿತ್ತು ಹಾಕಿದ್ದಾರೆ ಎಂದು ರೊಚ್ಚಿಗೆಂದ ಧೋನಿ ಅಭಿಮಾನಿಗಳು, ರೋಹಿತ್ ಅಭಿಮಾನಿಯೋರ್ವನ ಜೊತೆ ಜಗಳವಾಡಿದ್ದಾರೆ. ಈ ವೇಳೆ ರೋಹಿತ್ ಅಭಿಮಾನಿ ಕೂಡ ಗಲಾಟೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಧೋನಿ ಅಭಿಮಾನಿಗಳು ರೋಹಿತ್ ಅಭಿಮಾನಿಯನ್ನು ಕಬ್ಬಿನ ಗದ್ದೆಗೆ ಎಳೆದುಕೊಂಡು ಹೋಗಿ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಇದರಿಂದ ಆ ಯುವಕ ಆಸ್ಪತ್ರೆ ಸೇರಿದ್ದಾನೆ.
ಈ ವಿಚಾರ ವೈರಲ್ ಆಗಿ ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡುತ್ತಿದಂತೆ ಬೇಸರಗೊಂಡ ಭಾರತದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು, ಆಟಗಾರರು ಹೆಚ್ಚು ಮಾತನಾಡುವುದಿಲ್ಲ ನಿಜ. ಆದರೆ ಅವರು ಪರಸ್ಪರ ಜೊತೆಯಾಗಿ ಇರುತ್ತಾರೆ. ಅವರು ಅಗತ್ಯವಿರುವಷ್ಟು ಮಾತ್ರ ಮಾತನಾಡುತ್ತಾರೆ ಆದರೆ ಕೆಲವು ಅಭಿಮಾನಿಗಳು ಹುಚ್ಚರಾಗಿದ್ದಾರೆ. ದಯವಿಟ್ಟು ಪರಸ್ಪರರ ಕಿತ್ತಾಡಿಕೊಳ್ಳಬೇಡಿ ಮತ್ತು ಟೀಮ್ ಇಂಡಿಯಾವನ್ನು ಒಂದಾಗಿ ಪರಿಗಣಿಸಿ ಎಂದು ಟ್ವೀಟ್ ಮಾಡಿದ್ದಾರೆ.
Kya karte rehte ho paagalon.
— Virender Sehwag (@virendersehwag) August 23, 2020
Aapas mein players are either fond of each other or just don't talk much, kaam se kaam rakhte hain.
But kuchh fans alag hi level ke pagle hain. Jhagda Jhagdi mat karo, Team India ko- as one yaad karo. pic.twitter.com/i2ZpcDVogE
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
20-09-26 08:59 pm
HK News Staffer
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm