ಬ್ರೇಕಿಂಗ್ ನ್ಯೂಸ್
08-04-21 08:32 pm Source: MYKHEL ಕ್ರೀಡೆ
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಮೂರು ಬಾರಿಯ ರನ್ನರ್‌ಅಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಕಾದಾಟದೊಂದಿಗೆ 14ನೇ ಆವೃತ್ತಿಯ ಐಪಿಎಲ್‌ಗೆ ಚಾಲನೆ ದೊರೆಯಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಎರಡು ತಂಡಗಳು ಕೂಡ ಸಾಮಾನ್ಯವಾಗಿ ಮುಂಬೈ ಅಥವಾ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಎದುರಾಗುತ್ತಿದ್ದು ಎರಡು ಮೈದಾನಗಳು ಕೂಡ ಬ್ಯಾಟ್ಸ್‌ಮನ್ ಸ್ನೇಹಿಯಾಗಿರುವ ಕಾರಣ ಹೈಸ್ಕೋರಿಂಗ್ ಮ್ಯಾಚ್‌ಗೆ ಸಾಕ್ಷಿಯಾಗುತ್ತಿತ್ತು.
ಆದರೆ 2021ರ ಐಪಿಎಲ್ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಎರಡು ತಂಡಗಳು ಭಿನ್ನ ತಾಣದಲ್ಲಿ ಮುಖಾಮುಖಿಯಾಗಿದೆ. ಚೆನ್ನೈನ ಪಿಚ್ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಿದ್ದು ಬ್ಯಾಟ್ಸ್‌ಮನ್‌ಗಳಿಗೆ ಸ್ವಲ್ಪಮಟ್ಟಿಗೆ ಸವಾಲೊಡ್ಡುವ ನಿರೀಕ್ಷೆಯಿದೆ. ಈ ಮುನ್ನ ಎರಡು ಬಾರಿ ಮಾತ್ರವೇ ಚೆನ್ನೈನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದು ಎರಡು ತಂಡಗಳು ಕೂಡ 1-1 ಗೆಲುವಿನ ಅನುಪಾತವನ್ನು ಹೊಂದಿದೆ.
ಮುಂಬೈ ಮೇಲುಗೈ
ಆರ್‌ಸಿಬಿ ಹಾಗೂ ಮುಂಬೈ ನಡುವಿನ ಒಟ್ಟಾರೆ ಕಾದಾಟದಲ್ಲಿ ಮುಂಬೈ ಇಂಡಿಯನ್ಸ್ ಸ್ಪಷ್ಟವಾಗಿ ಮೇಲುಗೈ ಸಾಧಿಸಿದೆ. 19 ಪಂದ್ಯಗಳಲ್ಲಿ ಮುಂಬೈ ಗೆಲುವು ಸಾಧಿಸಿದ್ದರೆ ಬೆಂಗಳೂರು 10 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಕಳೆದ ಐಪಿಎಲ್ 2020 ಆವೃತ್ತಿಯಲ್ಲಿ ಈ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು ತಲಾ ಒಂದೊಂದು ಗೆಲುವು ಸಾಧಿಸಿತ್ತು.

ಕೊಹ್ಲಿ ಯಶಸ್ವಿ ಬ್ಯಾಟ್ಸ್‌ಮನ್
ಈ ಎರಡು ತಂಡಗಳ ಮುಖಾಮುಖಿಯಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ 26 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದು 637 ರನ್‌ಗಳಿಸಿದ್ದಾರೆ.

ಬೌಲಿಂಗ್‌ನಲ್ಲಿ ಚಾಹಲ್ ಉತ್ತಮ
ಈ ಎರಡು ತಂಡಗಳ ನಡುವಿನ ಕಾದಾಟದಲ್ಲಿ ಬೌಲಿಂಗ್‌ನಲ್ಲಿ ಯಶಸ್ಸು ಕಂಡಿದ್ದು ಆರ್‌ಸಿಬಿ ಸ್ಪಿನ್ನರ್ ಯುಜುವೇಂದ್ರ ಚಾಹಲ್. ಮುಂಬೈ ಇಂಡಿಯನ್ಸ್ ವಿರುದ್ಧ ಯುಜಿ 13 ಪಂದ್ಯಗಳಲ್ಲಿ ಆಡಿದ್ದು 19 ವಿಕೆಟ್ ಕಬಳಿಸಿದ್ದಾರೆ. ಮುಂಬೈ ವಿರುದ್ಧ 4/38 ರನ್‌ಗಳಿಸಿರುವುದು ಚಾಹಲ್ ಅವರ ಅತ್ಯುತ್ತಮ ಬೌಲಿಂಗ್ ದಾಖಲೆಯಾಗಿದೆ.

ಆರ್‌ಸಿಬಿ ಪರ ಪೊಲಾರ್ಡ್, ಬೂಮ್ರಾಗೆ ಯಶಸ್ಸು
ಇನ್ನು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಕಿರಾನ್ ಪೊಲಾರ್ಡ್ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿದ್ದಾರೆ. ಪೊಲಾರ್ಡ್ ಬೆಂಗಳೂರು ವಿರುದ್ಧ ಆಡಿದ 23 ಪಂದ್ಯಗಳಲ್ಲಿ 537 ರನ್‌ಗಳಿಸಿದ್ದಾರೆ. ಇದರಲ್ಲಿ ಅವರು 167.28ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಮುಂಬೈ ಬೌಲರ್‌ಗಳಲ್ಲಿ ಬೂಮ್ರಾ ಯಶಸ್ವಿ ಎನಿಸಿದ್ದು 15 ಪಂದ್ಯಗಳಲ್ಲಿ 19 ವಿಕೆಟ್ ಕಬಳಿಸಿದ್ದಾರೆ.
This News Article IS A Copy Of MYKHEL
01-03-26 09:20 pm
HK News Staffer
ಅಯತೊಲ್ಲಾ ಖಮೇನಿ ಹತ್ಯೆ ; ಚಿಕ್ಕಬಳ್ಳಾಪುರದ ಅಲೀಪುರದ...
01-03-26 05:16 pm
ಮಡಿಕೇರಿ ; ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಬ...
01-03-26 04:59 pm
ರಾಜ್ಯ ಮುಸ್ಲಿಮರಿಗೆ ಸ್ವರ್ಗ, ಹಿಂದುಗಳಿಗೆ ನರಕವಾಗಿದ...
01-03-26 04:56 pm
ಖಮೇನಿ ಹತ್ಯೆ ಖಂಡನೀಯ, ಇರಾನ್ ಮೇಲಿನ ಅಮೆರಿಕ ಯುದ್ಧ...
01-03-26 04:51 pm
01-03-26 09:52 am
HK News Staffer
ದುಬೈ, ಅಬುಧಾಬಿ ಮೇಲೆ ಇರಾನ್ ಮಿಸೈಲ್ ದಾಳಿ ; ಜಗತ್ತಿ...
28-02-26 10:54 pm
ಗಲ್ಫ್ ರಾಷ್ಟ್ರಗಳಿಗೆ ವಿಮಾನ ಸಂಚಾರ ವ್ಯತ್ಯಯ ; ಏರ್...
28-02-26 07:17 pm
ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್ ಪಡೆಗಳು ;...
28-02-26 05:28 pm
ತ್ರಿಷಾ ಬಿರುಗಾಳಿ ; ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್...
28-02-26 01:08 pm
01-03-26 08:37 pm
HK News Staffer
PSI Nasir Hussain: ಉಡುಪಿ ; ಮ್ಯಾರಥಾನಲ್ಲಿ ಪಾಲ್ಗ...
01-03-26 04:07 pm
ಹುಲಿಕಲ್ ಘಾಟಿಯಲ್ಲಿ ದುರ್ಗಾಂಬಾ ಬಸ್ ಗೆ ಬೆಂಕಿ ; ಕು...
28-02-26 08:53 pm
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm