ಬ್ರೇಕಿಂಗ್ ನ್ಯೂಸ್
25-03-21 10:58 am Source: MYKHEL ಕ್ರೀಡೆ
ಬೆಂಗಳೂರು: 2020ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ. ಈ ಬಾರಿ ಸಿಎಸ್‌ಕೆಗೆ ಆರಿಸಲ್ಪಟ್ಟಾಗ ತಂಡದ ನಾಯಕ ಎಂಎಸ್ ಧೋನಿ ಹೇಳಿದ ಮಾತನ್ನು ಉತ್ತಪ್ಪ ಸ್ಮರಿಸಿಕೊಂಡಿದ್ದಾರೆ.
2017ರ ಟಿ20 ವಿಶ್ವಕಪ್ ವಿಜೇತ ತಂಡಕ್ಕೆ ಎಂಎಸ್ ಧೋನಿ ನಾಯಕರಾಗಿದ್ದಾಗ ರಾಬಿನ್ ಉತ್ತಪ್ಪ ಕೂಡ ತಂಡದಲ್ಲಿದ್ದರು. ಹೀಗಾಗಿ ಮತ್ತೆ ಸಿಎಸ್‌ಕೆ ನಾಯಕತ್ವದ ತಂಡ ಸೇರಿಕೊಂಡ ಬಗ್ಗೆ ಉತ್ತಪ್ಪ ಮಾತನಾಡಿದ್ದಾರೆ. ತಂಡ ಸೇರಿದ ಕೂಡಲೇ ಧೋನಿ ಹೇಳಿದ್ದೇನೆಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆ ಉತ್ತಪ್ಪ ಹೇಳಿಕೊಂಡಿದ್ದಾರೆ. 'ನನಗೆ ಕರೆ ಮಾಡಿದ ಧೋನಿ, ನಿನ್ನನ್ನು ಈ ತಂಡಕ್ಕೆ ಕರೆತರುವಲ್ಲಿ ನನ್ನ ನಿರ್ಧಾರವೇನಿಲ್ಲ. ಇದನ್ನು ನಿನಗೆ ನಾನು ತಿಳಿಸಬಯಸುತ್ತೇನೆ. ಅದು ನಮ್ಮ ಲೀಡರ್‌ಶಿಪ್ ಗುಂಪಿನ ನಿರ್ಧಾರ. ನಿನ್ನ ಸ್ವಂತ ಸಾಮರ್ಥ್ಯ, ಕೌಶಲಗಳೊಂದಿಗೆ ನಿನ್ನನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಯಸಿದ್ದೆ. ಹೀಗಾಗಿ ನಿರ್ಧಾರ ತೆಗೆದುಕೊಳ್ಳಿ ಎಂದು ಎಲ್ಲರಲ್ಲೂ ಹೇಳಿದ್ದೆ. ಯಾಕೆಂದರೆ ಧೋನಿ ಇದ್ದಿದ್ದಕ್ಕೆ ನಿನ್ನನ್ನು ಸಿಎಸ್‌ಕೆಗೆ ಆರಿಸಲಾಯ್ತು ಅನ್ನೋ ಮಾತು ನಾಳೆ ಬರಬಾರದು ಅಲ್ವಾ?' ಎಂದು ಧೋನಿ ಹೇಳಿರುವುದಾಗಿ ಉತ್ತಪ್ಪ ತಿಳಿಸಿದ್ದಾರೆ.
ಮಾತು ಮುಂದುವರೆಸಿದ ಉತ್ತಪ್ಪ, 'ಪ್ರಾಮಾಣಿಕತೆ ಇದ್ದವರಲ್ಲಿ ಈ ನಡೆ ಅದ್ಭುತವಾದುದು ಅಲ್ಲವೆ? ನಾನು ಖಂಡಿತವಾಗಿಯೂ ಇದನ್ನು ಮೆಚ್ಚಿಕೊಳ್ಳುತ್ತೇನೆ. ನನ್ನ ಸ್ವಂತ ಕೌಶಲ್ಯದಿಂದ, ನನ್ನ ಸ್ವಂತ ವಿಶ್ವಾಸಾರ್ಹತೆಯಿಂದ ನಾನು ಸಿಎಸ್‌ಕೆಗೆ ಬಂದಿದ್ದೇನೆ ಅನ್ನೋದು ನನಗೆ ಗೊತ್ತು. ಇದೇ ಕಾರಣಕ್ಕೆ ನಾನು ಧೋನಿಯನ್ನು ಪ್ರೀತಿಸುತ್ತೇನೆ,' ಎಂದಿದ್ದಾರೆ.
This News Article Is A Copy Of MYKHEL
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
20-09-26 08:59 pm
HK News Staffer
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm