ಬ್ರೇಕಿಂಗ್ ನ್ಯೂಸ್
18-03-21 04:09 pm Source: MYKHEL ಕ್ರೀಡೆ
ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಐಪಿಎಲ್‌ನಿಂದ ಲೀಗ್ ಹಂತದಲ್ಲಿಯೇ ಹೊರಬಿದ್ದಿತ್ತು. ಪ್ರತಿ ಬಾರಿಯೂ ಪ್ಲೇ ಆಫ್‌ಗೆ ಲಗ್ಗೆ ಇಡುತ್ತಿದ್ದ ಚೆನ್ನೈ ತಂಡ ಕಳೆದ ಬಾರಿ ನಿರಾಸೆ ಮೂಡಿಸಿತ್ತು. ಹೀಗಾಗಿ ಈ ಬಾರಿ ದೊಡ್ಡ ಮಟ್ಟದಲ್ಲಿ ಗೆಲುವಿನ ಹಾದಿಗೆ ಮರಳಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಲ್ಲರಿಗಿಂತ ಮೊದಲು ಅಭ್ಯಾಸವನ್ನು ಆರಂಭಿಸಿದೆ.
ಮಹೇಂದ್ರ ಸಿಂಗ್ ಧೋನಿ ಅವರು ಈ ಬಾರಿಯ ಐಪಿಎಲ್ ಅನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದು ಬಹಳ ಕಠಿಣವಾದ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಧೋನಿ ಅವರ ಜೊತೆ ಚೆನ್ನೈ ತಂಡದ ಇತರ ಆಟಗಾರರು ಸಹ ಮೈದಾನದಲ್ಲಿ ಬೆವರು ಹರಿಸಿ ಅಭ್ಯಾಸ ಮಾಡುತ್ತಿದ್ದಾರೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿರುವ ಆಂಧ್ರಪ್ರದೇಶದ ಹರಿಶಂಕರ್ ರೆಡ್ಡಿ ಅಭ್ಯಾಸದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಲಗೈ ಮಧ್ಯಮವೇಗಿ ಹರಿಶಂಕರ್ ರೆಡ್ಡಿ ಎಸೆದ ಎಸೆತಕ್ಕೆ ಎಂಎಸ್ ಧೋನಿ ಅವರು ಕ್ಲೀನ್ ಬೌಲ್ಡ್ ಆಗಿದ್ದಾರೆ. ಹರಿ ಶಂಕರ್ ರೆಡ್ಡಿ ಅವರ ಈ ಎಸೆತಕ್ಕೆ ಇತರ ಬೌಲರ್‌ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು ಧೋನಿ ಅವರೂ ಸಹ ಹರಿ ಶಂಕರ್ ರೆಡ್ಡಿ ಅವರು ಎಸೆದ ಎಸೆತಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವರ್ಷದ ಹರಿ ಶಂಕರ್ ರೆಡ್ಡಿ ಆಂಧ್ರಪ್ರದೇಶ ತಂಡದ ಆಟಗಾರ. ಆಂಧ್ರಪ್ರದೇಶ ಅಂಡರ್-19 ತಂಡದಲ್ಲಿಯೂ ಸಹ ಹರಿಶಂಕರ್ ರೆಡ್ಡಿ ಆಡಿರುವ ಅನುಭವ ಹೊಂದಿದ್ದಾರೆ. ಈಗ ಐಪಿಎಲ್‌ನಲ್ಲಿ ಚೆನ್ನೈ ಪಾಲಾಗಿರುವ ಹರಿ ಶಂಕರ್ ರೆಡ್ಡಿ ಅಭ್ಯಾಸದ ವೇಳೆಯೇ ವೈರಲ್ ಆಗಿದ್ದು ಟೂರ್ನಿಯಲ್ಲಿ ಮಿಂಚುತ್ತಾರಾ ಎಂದು ಕಾದು ನೋಡಬೇಕು.
This News Article Is A Copy Of MYKHEL
06-05-25 11:23 pm
Bangalore Correspondent
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
07-05-25 09:54 am
HK News Desk
ವಿಶ್ವಸಂಸ್ಥೆಯಲ್ಲಿ ಬೆತ್ತಲಾದ ಪಾಕ್ ; ಚೀನಾ ಬಿಟ್ಟು...
06-05-25 02:45 pm
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm