ಬ್ರೇಕಿಂಗ್ ನ್ಯೂಸ್
04-03-21 04:12 pm Source: MYKHEL ಕ್ರೀಡೆ
ಅಹ್ಮದಾಬಾದ್: ರಿಷಭ್ ಪಂತ್ ಮೈದಾನಕ್ಕಿಳಿದ್ದಾರೆಂದರೆ ಅಲ್ಲಿ ಮನರಂಜನೆಗೇನೂ ಕಮ್ಮಿಯಿಲ್ಲ. ಸದ್ಯ ನಡೆಯುತ್ತಿರುವ ಭಾರತ-ಇಂಗ್ಲೆಂಡ್ 4ನೇ ಟೆಸ್ಟ್‌ನಲ್ಲೂ ಪಂತ್ ಪ್ಲೇಯಿಂಗ್ XIನಲ್ಲಿದ್ದಾರೆ. ವಿಕೆಟ್ ಕೀಪಿಂಗ್ ಮಾಡುವ ಪಂತ್ ಸ್ಟಂಪ್ ಹಿಂದೆ ಒಟಗುಟ್ಟುತ್ತಾ ಬಿಟ್ಟೀ ಮನರಂಜನೆಯೂ ನೀಡುತ್ತಿರುತ್ತಾರೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್‌ನಲ್ಲಿ ರಿಷಭ್ ಪಂತ್, ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಝ್ಯಾಕ್ ಕ್ರಾಲೆ ಅವರ ಔಟ್‌ಗೆ ಕಾರಣರಾಗಿದ್ದರೆ. ಬ್ಯಾಟಿಂಗ್ ಮಾಡುತ್ತಿದ್ದ ಕ್ರಾಲೆಯನ್ನು ಉರಿಸಿರುವ ಪಂತ್ ಅವರ ವಿಕೆಟ್ ಉರುಳುವಂತೆ ನೋಡಿಕೊಂಡಿದ್ದಾರೆ.
ಘಟನೆ ನಡೆದಿರೋದು 7ನೇ ಓವರ್‌ನಲ್ಲಿ. ಓವರ್ ಎಸೆಯಲು ಅಕ್ಸರ್ ಪಟೇಲ್ ಬಂದಿದ್ದರು. ಆಗ ಕೀಪಿಂಗ್ ಮಾಡುತ್ತಿದ್ದ ಪಂತ್ ಅಕ್ಸರ್ ಅವರನ್ನುದ್ದೇಶಿಸಿ, 'ಯಾರೋ ಒಬ್ಬರು ಸಿಟ್ಟುಗೊಳ್ಳುತ್ತಿದ್ದಾರೆ. ಯಾರೋ ಒಬ್ಬರು ಸಿಟ್ಟುಗೊಳ್ಳುತ್ತಿದ್ದಾರೆ,' ಎಂದು ಕ್ರಾಲೆಗೆ ಕೇಳಿಸುವಂತೆ ಹೇಳಿದರು.
ಪಂತ್ ಮಾತು ಕೇಳಿದ ಕ್ರಾಲೆ ಇನ್ನಷ್ಟು ಸಿಟ್ಟುಗೊಂಡು ಮುಂದಿನ ಎಸೆತಕ್ಕೆ ಸಿಕ್ಸ್ ಬಾರಿಸಲು ಮುಂದಾದರು. ಆದರೆ ಆಗಸಕ್ಕೆ ಚಿಮ್ಮಿದ ಚೆಂಡು ಸೀದಾ ಬಂದು ಮೊಹಮ್ಮದ್ ಸಿರಾಜ್ ಅವರ ಕೈ ಸೇರಿತು. ಕ್ರಾಲೆ 9 ರನ್ನಿಗೆ ಪೆವಿಲಿಯನ್‌ಗೆ ನಿರ್ಗಮಿಸಬೇಕಾಯ್ತು. ಇದೇ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಮಧ್ಯೆಯೂ ಮಾತಿನ ಚಕಮಕಿ ನಡೆದಿತ್ತು.
This News Article Is A Copy Of MYKHEL
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm