ಬ್ರೇಕಿಂಗ್ ನ್ಯೂಸ್
22-02-21 04:16 pm Source: MYKHEL ಕ್ರೀಡೆ
ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅದ್ಭುತ ಪ್ರದರ್ಶನ ತೋರಿ ಅಗ್ರ ಸ್ಥಾನ ಕಾಯ್ದುಕೊಂಡ ತಂಡ ಹೈದರಾಬಾದ್ ಎಫ್ ಸಿ. ಸದ್ಯ ಮೂರನೇ ಸ್ಥಾನದಲ್ಲಿರುವ ಹೈದರಾಬಾದ್ ಆಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಎಟಿಕೆಎಂಬಿ ವಿರುದ್ಧ ಜಯ ಗಳಿಸಿ ಪ್ಲೇ ಆಫ್ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವ ಗುರಿಹೊಂದಿದೆ.
ಹೊಸವರ್ಷದ ಆರಂಭದದಿಂದ ಹೈದರಾಬಾದ್ ಸೋಲನ್ನು ಅನುಭವಿಸಿರಲಿಲ್ಲ, ಮತ್ತು ಕಳೆದ 10 ಪಂದ್ಯಗಳಲ್ಲಿ ಅಜೇಯವಾಗಿ ಸಾಗಿ ಬಂದಿದೆ. ನಾಳೆಯ ಪಂದ್ಯದಲ್ಲಿ ಜಯ ಗಳಿಸಿದರೆ ನಿಜಾಮರ ಪಡೆ ಪ್ಲೇ ಆಫ್ ಗೆ ಮತ್ತಷ್ಟು ಹತ್ತಿರವಾಗುವುದು ಮಾತ್ರವಲ್ಲದೆ, ಐಎಸ್ ಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಅಜೇಯವಾಗಿ ಸಾಗಿ ಬಂದ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಹೈದರಾಬಾದ್ ತಂಡ ಇತ್ತೀಚಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದರೆ, ಎಟಿಕೆಎಂಬಿ ತಂಡ ಮುಂಬೈ ಸಿಟಿಯ ಅಗ್ರ ಸ್ಥಾನವನ್ನು ಕಬಳಿಸಿ ಲೀಗ್ ಚಾಂಪಿಯನ್ ಪಟ್ಟ ಗೆಲ್ಲುವ ಹಂತದಲ್ಲಿದೆ. ಕೋಲ್ಕೊತಾ ತಂಡ ಕಳೆ ಐದು ಪಂದ್ಯಗಳಲ್ಲಿ 13 ಗೋಲುಗಳನ್ನು ಗಳಿಸಿರುವುದು ಮಾತ್ರವಲ್ಲ ಕೇವಲ 5 ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿದೆ.
ಗೆಲ್ಲಲು ಉತ್ಸುಕವಾಗಿದೆ
ಪ್ಲೇ ಆಫ್ ಹಂತವನ್ನು ತಪುಪಿದ್ದರೂ ಬಾಗನ್ ಕೂಡ ಹೈದರಾಬಾದ್ ನಂತೆ ಪಂದ್ಯ ಗೆಲ್ಲಲು ಉತ್ಸುಕವಾಗಿದೆ. ಜಯ ಗಳಿಸಿದರೆ ಲೀಗ್ ವಿನ್ನರ್ಸ್ ಶೀಲ್ಡ್ ಮತ್ತು ಎಎಫ್ ಸಿ ಚಾಂಪಿಯನ್ಸ್ ಲೀಗ್ ನಲ್ಲಿ ಸ್ಪರ್ಧಿಸುವ ಅವಕಾಶವನ್ನು ಪಡೆಯಲಿದೆ. ಈ ಹಂತದಲ್ಲಿ ಎಟಿಕೆ ಮೋಹನ್ ಬಾಗನ್ ತಂಡವನ್ನು ಎದುರಿಸುವುದು ಕುತೂಹಲದ ಸವಾಲು ಎಂದು ಹೈದರಾಬಾದ್ ತಂಡದ ಕೋಚ್ ಮಾನ್ವೆಲ್ ಮಾರ್ಕ್ವೇಜ್ ಹೇಳಿದ್ದಾರೆ. "ನಾವು ಲೀಗ್ ನಲ್ಲೇ ಬಲಿಷ್ಠ ತಂಡದ ವಿರುದ್ಧ ಸೆಣಸಲಿದ್ದೇವೆ,' ಎಂದು ಅವರು ಹೇಳಿದ್ದಾರೆ. "ಎಟಿಕೆಎಂಬಿ ತಂಡ ಲೀಗ್ ನಲ್ಲಿ ಉತ್ತಮ ಫಾರ್ಮ್ ನಲ್ಲಿ ಇವೆ. ಅವರದ್ದು ಒಂದು ಉತ್ತಮ ಸಂಘಟಿತ ತಂಡ ಮತ್ತು ಉತ್ತಮ ಆಟಗಾರರಿಂದ ಕೂಡಿರುವ ತಂಡ. ಕೋಚ್ ಆಂಟೋನಿಯೋ ಹಬ್ಬಾಸ್ ಜಯದ ಹಾದಿಯಲ್ಲೇ ತಂಡವನ್ನು ಮುನ್ನಡೆಸುವ ಕೋಚ್. ಲೆನ್ನಿ ರೋಡ್ರಿಗಸ್ ಮತ್ತು ಮಾರ್ಸೆಲಿನೋ ಬಲಿಷ್ಠ ಆಟಗಾರರು," ಎಂದರು.
ಬಲಿಷ್ಠವಾದ ಡಿಫೆನ್ಸ್ ವಿಭಾಗ
ಹೈದರಾಬಾದ್ ತಂಡ ಲೀಗ್ ನಲ್ಲೇ ಅತ್ಯಂತ ಬಲಿಷ್ಠವಾದ ಡಿಫೆನ್ಸ್ ವಿಭಾಗವನ್ನು ಹೊಂದಿರುವ ತಂಡವನ್ನು ಎದುರಿಸಲಿದೆ ಮಾತ್ರವಲ್ಲ, ಬಾಗನ್ ತಂಡದ ಬಲಿಷ್ಠ ಆಟಗಾರ ಮತ್ತು ಲೀಗ್ ನಲ್ಲೇ ಅತಿ ಹೆಚ್ಚು ಗೋಲು ಗಳಿಸಿರುವ ರಾಯ್ ಕೃಷ್ಣ ಅವರನ್ನು ಎದುರಿಸುವುದು ಸವಾಲಾಗಿದೆ," ಎಂದರು. ಕಳೆದ ಆರು ಪಂದ್ಯಗಳಲ್ಲಿ ಸತತ ಗೋಲು ಗಳಿಸುತ್ತಿರುವ ರಾಯ್ ಕೃಷ್ಣ ಅವರನ್ನ ತಡೆಯುಬೇಕಾಗಿದೆ. ಕೃಷ್ಣ ಅವರು 14 ಗೋಲುಗಳನ್ನು ಗಳಿಸಿದ್ದಾರೆ. "ನನ್ನ ಪ್ರಕಾರ ಅ ಕೃಷ್ಣ ಅವರು ಲೀಗ್ ನಲ್ಲೇ ಉತ್ತಮ ಫಾರ್ವರ್ಡ್ ಆಟಗಾರ. ಅವರ ವಿಭಿನ್ನ ರೀತಿಯಲ್ಲಿ ಗೋಲುಗಳನ್ನು ಗಳಿಸಬಲ್ಲರು. ಅವರೊಬ್ಬ ಪರಿಪೂರ್ಣ ಸೆಂಟರ್ ಫಾರ್ವರ್ಡ್ ಆಟಗಾರ," ಎಂದು ಮಾರ್ಕ್ವೇಸ್ ಹೇಳಿದರು.
ನಿರ್ಣಾಯಕ ಹಂತವೆನಿಸಲಿದೆ
ದ್ವಿತಿಯಾರ್ಧವು ಪಂದ್ಯದ ನಿರ್ಣಾಯಕ ಹಂತವೆನಿಸಲಿದೆ. ಏಕೆಂದರೆ ಎರಡೂ ತಂಡಗಳು ದ್ವಿತಿಯಾರ್ಧದಲ್ಲಿ ಹೆಚ್ಚು ಗೋಲು ಗಳಿಸಿವೆ. ಗಳಿಸಿರುವ 26 ಗೋಲುಗಳಲ್ಲಿ ಮರಿನರ್ಸ್ ಪಡೆ 21 ಗೋಲುಗಳನ್ನು ದ್ವಿತಿಯಾರ್ಧದಲ್ಲಿ ಗಳಿಸಿದೆ. ಹೈದರಾಬಾದ್ 25 ಗೋಲುಗಳಲ್ಲಿ 20 ಗೋಲುಗಳನ್ನು ದ್ವಿತಿಯಾರ್ಧದಲ್ಲಿ ಗಳಿಸಿದೆ. "ಹೈದರಾಬಾದ್ ತಂಡವು ಈ ಬಾರಿ ಉತ್ತಮವಾದ ಪ್ರದರ್ಶನ ನೀಡಿದೆ. ಅವರಲ್ಲಿ ಅಪಾರವಾದ ಆತ್ಮವಿಶ್ವಾಸವಿದೆ. ನಾವು ಕೂಡ ಅತ್ಯಂತ ಎಚ್ಚರಿಕೆಯಿಂದ ಆಡಬೇಕಾಗಿದೆ. ಈ ಋತುವಿನಲ್ಲಿ ಹೈದರಾಬಾದ್ ಪ್ರತಿಯೊಂದು ತಂಡದ ವಿರುದ್ಧ ಉತ್ತಮ ಪ್ರದರ್ಶನ ತೋರಿ ಎಲ್ಲರನ್ನೂ ಅಚ್ಚರಿಗೊಳಿಸಿದೆ," ಎಂದು ಹಬ್ಬಾಸ್ ಹೇಳಿದ್ದಾರೆ.
This News Article is a Copy of MYKHEL
02-05-25 01:40 pm
Bangalore Correspondent
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 06:44 pm
Mangaluru HK Staff
Brijesh Chowta, NIA, Suhas Shetty Murder: ಸುಹ...
02-05-25 06:31 pm
Mangalore Suhas Shetty Murder, ADGP Hitendra:...
02-05-25 03:10 pm
Udupi crime, Attempt, Suhas Shetty Murder: ಉಡ...
02-05-25 12:44 pm
Suhas Shetty Murder, Liquor Ban: ಸುಹಾಸ್ ಶೆಟ್ಟ...
02-05-25 12:23 pm
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm