ಬ್ರೇಕಿಂಗ್ ನ್ಯೂಸ್
25-01-21 04:35 pm Source: MYKHEL ಕ್ರೀಡೆ
ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲೇ ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ಹಾಗೂ ಒಡಿಶಾ ಎಫ್ ಸಿ ನಡುವಿನ ಪಂದ್ಯ 1-1 ಗೋಲಿನಿಂದ ಸಮಬಲಗೊಂಡಿದ್ದು ಇತ್ತಂಡಗಳು ಅಂಕ ಹಂಚಿಕೊಂಡಿವೆ. ಒಡಿಶಾ ಪರ ಡಿಗೋ ಮೌರಿಸಿಯೊ (8ನೇ ನಿಮಿಷ) ಹಾಗೂ ಬೆಂಗಳೂರು ಪರ ಎರಿಕ್ ಪಾರ್ಥಲು (82ನೇ ನಿಮಿಷ) ಗಳಿಸಿದ ಗೋಲಿನಿಂದ ಪಂದ್ಯ ಸಮಬಲಗೊಂಡಿತು.
ಎರಡೂ ತಂಡಗಳ ಪಾಲಿಗೆ ಗೆಲ್ಲುವ ಅದೃಷ್ಟ ಇಲ್ಲವೆಂದರೆ ತಪ್ಪಾಗಲಾರು. ಒಡಿಶಾ ಪರ ಆರ್ಶದೀಪ್ ಸಿಂಗ್ ಅದ್ಭುತ ಗೋಲ್ ಕೀಪಿಂಗ್ ಮಾಡಿದ್ದು ಬೆಂಗಳೂರಿನ ಜಯಕ್ಕೆ ತಡೆಯೊಡ್ಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಫಲಿತಾಂಶದಿಂದ ಬೆಂಗಳೂರು ಮತ್ತೆ 7ನೇ ಸ್ಥಾನ ತಲುಪಿತು ಆದರೆ ಒಡಿಶಾ ಇದ್ದ ಸ್ಥಾನದಲ್ಲೇ ಅಂದರೆ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿತು. ಒಡಿಶಾ ಪ್ರಭುತ್ವ: ಒಡಿಶಾ ಎಫ್ ಸಿ ಮುಂದಿನ 45 ನಿಮಿಷಗಳ ಆಟದಲ್ಲಿ ಯಾವ ರೀತಿ ಪ್ರದರ್ಶನ ತೋರುತ್ತದೋ ಗೊತ್ತಿಲ್ಲ ಆದರೆ ಬೆಂಗಳೂರು ಎಫ್ ಸಿ ವಿರುದ್ಧದ ಮೊದಲ 45 ನಿಮಿಷಗಳ ಆಟದಲ್ಲಿ ಚಾಂಪಿಯನ್ ತಂಡದಂತೆ ಪ್ರದರ್ಶನ ನೀಡಿತು.
ಮೇಲುಗೈ ಸಾಧಿಸಿಸಬಹುದು
ಗೆಲ್ಲಬೇಕೆಂಬ ಛಲ ಮತ್ತು ಅದಕ್ಕೆ ಪೂರಕವಾದ ಹೋರಾಟ ನೀಡಿದರೆ ಯಾವುದೇ ತಂಡದ ವಿರುದ್ಧ ಮೇಲುಗೈ ಸಾಧಿಸಿಸಬಹುದು ಎಂಬುದಕ್ಕೆ ಒಡಿಶಾ ನಿದರ್ಶನವಾಯಿತು. ಮಾಜಿ ಚಾಂಪಿಯನ್ ಬೆಂಗಳೂರು ವಿರುದ್ಧ ಪ್ರಥಮಾರ್ಧದಲ್ಲಿ 1-0 ಅಂತರದಲ್ಲಿ ಮೇಲುಗೈ ಸಾಧಿಸಿತು. 8ನೇ ನಿಮಿಷದಲ್ಲಿ ಡಿಗೋ ಮೌರಿಸಿಯೋ ಗಳಿಸಿದ ಗೋಲಿನಿಂದ ಒಡಿಶಾ ತಂಡ ಅಚ್ಚರಿಯ ರೀತಿಯಲ್ಲಿ ಮೇಲುಗೈ ಸಾಧಿಸಿತು. ಬೆಂಗಳೂರು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ತಿರುಗೇಟು ನೀಡಿತು. ಎರಡು ಬಾರಿ ಅತಿ ಸುಲಭವಾಗಿ ಗೋಲು ಗಳಿಸುವ ಅವಕಾಶ ಬೆಂಗಳೂರಿಗೆ ಇದ್ದಿತ್ತು. ಗುರಿಯೂ ನಿಖರವಾಗಿತ್ತು, ಆದರೆ ಗೋಲ್ ಕೀಪರ್ ಆರ್ಶದೀಪ್ ಸಿಂಗ್ ಅವರ ಅದ್ಭುತ ಕೀಪಿಂಗ್ ಮೂಲಕ ಬೆಂಗಳೂರಿಗೆ ಸಮಬಲಗೊಳಿಸಲಾಗಿಲಿಲ್ಲ. ಮುಂದಿನ 45 ನಿಮಿಷಗಳ ಆಟದಲ್ಲಿ ಒಡಿಶಾ ಈ ಮುನ್ನಡೆಯನ್ನು ಯಾವ ರೀತಿಯಲ್ಲಿ ಕಾಯ್ದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕು.
ಆತಂಕದಲ್ಲಿ ಬೆಂಗಳೂರು
ಆರು ಪಂದ್ಯಗಳು, ಐದು ಸೋಲು, ಒಂದು ಡ್ರಾ, ಮನೆ ಸೇರಿದ ಕೋಚ್, ಆತ್ಮವಿಶ್ವಾಸದ ಕೊರತೆ, ಕೊನೆತನಕ ಹೋರಾಟ ನೀಡುವಲ್ಲಿ ವಿಫಲ ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಮಾಜಿ ಚಾಂಪಿಯನ್ ಬೆಂಗಳೂರು ಎಫ್ ಸಿ ಜಯದ ಹುಡುಕಾಟದಲ್ಲಿರುವ ಮತ್ತು ಕಳೆದುಕೊಳ್ಳುವುದು ಏನೂ ಇಲ್ಲವೆಂಬ ಆತ್ಮವಿಶ್ವಾದಲ್ಲಿರುವ ಒಡಿಶಾ ವಿರುದ್ಧ ಆತಂಕ ಹೊಂದುವುದು ಸಹುಜ.
ಹೈದರಾಬಾದ್ ಎಫ್ ಸಿ ವಿರುದ್ಧ ಡ್ರಾ
ನೌಶಾದ್ ಮೂಸಾ ಅವರ ಪಡೆ ಚೇತರಿಸಕೊಳ್ಳಲು ತಮಗೆ ಇದು ಸೂಕ್ತ ಕಾಲ ಎಂದು ಯೋಚಿಸಿರವುದು ನಿಜ, ಆದರೆ ಹೈದರಾಬಾದ್ ಎಫ್ ಸಿ ವಿರುದ್ಧ ಡ್ರಾ ಸಾಧಿಸಿದ ಆತ್ಮವಿಶ್ವಾಸದಲ್ಲಿರುವ ಸ್ಟುವರ್ಟ್ ಬಾಕ್ಸ್ಟರ್ ಪಡೆಗೆ ಪ್ಲೇ ಆಫ್ ಸ್ಪರ್ಧೆಯಲ್ಲಿ ಉಳಿಯಬೇಕಾದರೆ ಇಂದು ಜಯ ಕಾಣಬೇಕಾದ ಅನಿವಾರ್ಯತೆ ಇದೆ. ಆಟಗಾರರು, ಗಳಿಸಿದ ಗೋಲು, ನೀಡಿದ ಗೋಲು ಇವುಗಳನ್ನು ಗಮನಿಸಿದಾಗ ಬೆಂಗಳೂರು ಫೇವರಿಟ್ ಎನಿಸಿದೆ, ಆದರೆ ಗೆಲ್ಲಲೇಬೇಕೆಂಬ ಛಲ ಹೊಂದಿರುವ ಒಡಿಶಾ ತಂಡಕ್ಕೆ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಸಿಕೊಳ್ಳಲು ಇದು ಕೊನೆಯ ಅವಕಾಶ. ಇಲ್ಲಿ ಒಡಿಶಾ ಗೆದ್ದರೆ ಅಚ್ಚರಿಪಡಬೇಕಾಗಿಲ್ಲ.
This News Article is a Copy of MYKHEL
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm