ಬ್ರೇಕಿಂಗ್ ನ್ಯೂಸ್
12-08-20 04:53 pm Headline Karnataka News Network ಕ್ರೀಡೆ
ಆಗಸ್ಟ್ 12: ಕಳೆದ ಕೆಲ ದಿನಗಳ ಹಿಂದೆ ಉಸಿರಾಟದ ತೊಂದರೆ ಹಾಗೂ ಅನಾರೋಗ್ಯರಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ನ ಖ್ಯಾತ ನಟ ಸಂಜಯ್ ದತ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಕಂಡುಬಂದಿದೆ. ಸದ್ಯ 61 ವರ್ಷದ ಸಂಜಯ್ ದತ್ ಅವರಿಗೆ ಕ್ಯಾನ್ಸರ್ 3ನೇ ಹಂತದಲ್ಲಿದ್ದು ಹೆಚ್ಚಿನ ಚಿಕಿತ್ಸೆಗೆ ಯುಎಸ್ಗೆ ತೆರಳಿದ್ದಾರೆ. ಕಳೆದ ಶನಿವಾರದಂದು ಸಂಜಯ್ ದತ್ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ವೇಳೆ ಅವರಿಗೆ ಲಂಗ್ ಕ್ಯಾನ್ಸರ್ ಇರುವುದು ಖಚಿತಗೊಂಡಿದೆ.
ಈ ಬಗ್ಗೆ ಟ್ವೀಟ್ ಮಾಡಿದ್ದ ಸಂಜಯ್ ದತ್, ವೃತ್ತಿಯಿಂದ ಸ್ವಲ್ಪ ಸಮಯ ವಿರಾಮ ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಅಲ್ಲದೆ ಟ್ವೀಟ್ ಮಾಡಿರುವ ಫಿಲ್ಮ್ ಇನ್ಫಾರ್ಮೇಶನ್ ಮುಖ್ಯ ಸಂಪಾದಕ ಕೋಮಲ್ ನಹ್ತಾ 'ಸಂಜಯ್ ದತ್ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ' ಎಂದಿದ್ದಾರೆ.
ಸಂಜಯ್ ದತ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಾರೈಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಕೂಡ ಟ್ವೀಟ್ ಮಾಡಿದ್ದು, "ನೀವು ಫೈಟರ್, ಅಷ್ಟು ಬೇಗ ಸೋಲನ್ನು ಒಪ್ಪಿಕೊಳ್ಳುವವರಲ್ಲ. ಈ ನೋವು ನನಗೆ ಚೆನ್ನಾಗಿಯೆ ತಿಳಿದಿದೆ. ಗಟ್ಟಿಜೀವ ಸಂಜಯ್ ದತ್ ಕ್ಯಾನ್ಸರ್ ಜೊತೆ ಗುದ್ದಾಡಿ ಗೆದ್ದು ಬರಲಿ" ಎಂದು ಯುವಿ ಸ್ಫೂರ್ತಿದಾಯಕ ಸಂದೇಶ ಹೇಳಿದ್ದಾರೆ.
You are, have and always will be a fighter @duttsanjay. I know the pain it causes but I also know you are strong and will see this tough phase through. My prayers and best wishes for your speedy recovery.
— Yuvraj Singh (@YUVSTRONG12) August 11, 2020
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
20-09-26 08:59 pm
HK News Staffer
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm