ಬ್ರೇಕಿಂಗ್ ನ್ಯೂಸ್
08-03-26 11:32 pm HK News Desk ಕ್ರೀಡೆ
ಅಹ್ಮದಾಬಾದ್, ಮಾರ್ಚ್ 8: ಟಿ ಟ್ವೆಂಟಿ ವಿಶ್ವಕಪ್ ಇತಿಹಾಸದಲ್ಲಿ ಭಾರತೀಯ ಕ್ರಿಕೆಟ್ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಮೂರನೇ ಬಾರಿಗೆ ಟ್ವಿ 20 ವಿಶ್ವಕಪ್ ಗೆದ್ದು ನಾವೇ ಟ್ವಿ-ಟ್ವೆಂಟಿ ಮಾಂತ್ರಿಕರು ಎನ್ನುವುದನ್ನು ಭಾರತೀಯ ಕ್ರಿಕೆಟಿಗರು ಸಾಬೀತುಪಡಿಸಿದ್ದಾರೆ. ಭಾನುವಾರ ಅಹ್ಮದಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದ 1.3 ಲಕ್ಷ ಕ್ರಿಕೆಟ್ ಅಭಿಮಾನಿಗಳ ನಡುವೆ ಸೂರ್ಯಕುಮಾರ್ ಯಾದವ್ ನೇತೃತ್ವದ ಯುವ ಬಳಗ ಟಿ-20 ವರ್ಲ್ಡ್ ಕಪ್ ಗೆದ್ದು ಬೀಗಿದೆ.
ಜಸ್ ಪ್ರೀತ್ ಬುಮ್ರಾ ಅವರು ಯಾರ್ಕರ್ ಮಾಂತ್ರಿಕ ವಾಸಿಂ ಅಕ್ರಮ್ ರೀತಿಯಲ್ಲಿ ಬೌಲಿಂಗ್ ಪ್ರದರ್ಶನ ನೀಡಿದ್ದು, ಬೆನ್ನು ಬೆನ್ನಿಗೆ ಬ್ಯಾಟ್ಸ್ ಮನ್ ಗಳನ್ನು ಕಿತ್ತು ನ್ಯೂಜಿಲಂಡ್ ಬೆನ್ನು ಮುರಿದಿದ್ದು ಗಮನಸೆಳೆದ ಅಂಶ. ಆಮೂಲಕ 256 ರನ್ನುಗಳ ಬೆನ್ನತ್ತಿದ್ದ ನ್ಯೂಜಿಲಂಡಿಗರು 19 ಓವರ್ ಗಳಲ್ಲಿ 159 ರನ್ನಿಗೆ ಆಲೌಟ್ ಆಗಿದ್ದು, 96 ರನ್ನುಗಳ ದೊಡ್ಡ ಅಂತರದಿಂದ ಭಾರತೀಯರು ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ.



2007ರಲ್ಲಿ ಭಾರತ ತಂಡವು ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಮೊದಲ ಟಿ-20 ವಿಶ್ವಕಪ್ ಗೆದ್ದುಕೊಂಡಿತ್ತು. 2024ರಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಎರಡನೇ ಬಾರಿಗೆ ಟಿ ಟ್ವೆಂಟಿ ಕಿರೀಟ ಗೆದ್ದಿತ್ತು. ಇದೀಗ ಮೂರನೇ ಬಾರಿಗೆ ಮತ್ತು ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಮೂಲಕ ಭಾರತ ತಂಡವು ಹೊಸ ದಾಖಲೆ ಬರೆದಿದೆ.
ನ್ಯೂಜಿಲಂಡ್ ಟಾಸ್ ಗೆದ್ದು ಫೀಲ್ಡಿಂಗ್ ಇಳಿದಿದ್ದೇ ತಪ್ಪಾಗಿ ಪರಿಣಮಿಸಿತ್ತು. ಭಾರತೀಯ ಬ್ಯಾಟ್ಸ್ ಮನ್ ಗಳು ನ್ಯೂಜಿಲಂಡ್ ಬೌಲರ್ ಗಳನ್ನು ಆರಂಭದಲ್ಲೇ ದಂಡಿಸುತ್ತ ಬಂದಿದ್ದಾರೆ. ಅದರಲ್ಲು ಕೇರಳ ಮೂಲದ ಸಂಜು ಸ್ಯಾಮ್ಸನ್ 89 ರನ್ ಸಿಡಿಸಿ ಟಿ 20 ಫೈನಲಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಅಭಿಷೇಕ್ ಶರ್ಮಾ, ಸೆಹವಾಗ್ ರೀತಿಯಲ್ಲಿ ಸ್ಫೋಟಕ ಬ್ಯಾಟಿಂಗ್ ತೋರಿದ್ದು 18 ಎಸೆತದಲ್ಲಿ ಹಾಫ್ ಸೆಂಚುರಿ ಮಾಡಿದ್ದರು. ಇಶಾನ್ ಕಿಶನ್ ಕೂಡ 25 ಎಸೆತದಲ್ಲಿ 54 ರನ್ ಗಳಿಸಿದರೆ, ಕೊನೆಗೆ ಶಿವಂ ದುಬೆ ಎಂಟು ಎಸೆತದಲ್ಲಿ 26 ರನ್ ಸಿಡಿಸಿ ಭಾರತ ಪರ ದೊಡ್ಡ ಮೊತ್ತ ಪೇರಿಸಲು(255ಕ್ಕೆ 5) ಕಾರಣವಾಗಿದ್ದರು.
ಇದನ್ನು ಬೆನ್ನತ್ತಿದ ನ್ಯೂಜಿಲಂಡಿಗೆ ಭಾರತದ ಬೌಲರುಗಳು ಆರಂಭದಿಂದಲೇ ಕಾಡತೊಡಗಿದ್ದರು. ಇದರಿಂದಾಗಿ ಯಾವುದೇ ಬ್ಯಾಟ್ಸ್ ಮನ್ ಕೂಡ ಕ್ರೀಸಿನಲ್ಲಿ ಕಾಲೂರಲು ಸಾಧ್ಯವಾಗಲಿಲ್ಲ. ಆರಂಭಿಕರನ್ನು ಅಕ್ಸರ್ ಪಟೇಲ್ ಕೆಡವಿದರೆ, ಮಿಡ್ಲ್ ಆರ್ಡರ್ ನಲ್ಲಿದ್ದವರನ್ನು ಬುಮ್ರಾ ತನ್ನ ಯಾರ್ಕರ್ ಎಸೆತದಲ್ಲಿ ಪೆವಿಲಿಯನ್ ಅಟ್ಟಿದರು. 16ನೇ ಓವರಿನಲ್ಲಿ ಬುಮ್ರಾ ಬೆನ್ನು ಬೆನ್ನಿಗೆ ವಿಕೆಟ್ ಕಿತ್ತಾಗ ಹ್ಯಾಟ್ರಿಕ್ ಚಾನ್ಸ್ ಸಿಕ್ಕಿತ್ತು. ಐದನೇ ಎಸೆತವನ್ನು ಲೋಕೀ ಫರ್ಗ್ಯುಸನ್ ಮೆಲ್ಲಗೆ ಎದುರಿಸಿ ಹ್ಯಾಟ್ರಿಕ್ ವಿಕೆಟ್ ಉದುರುವುದನ್ನು ತಡೆದರು. 18ನೇ ಓವರಿನಲ್ಲಿ ಒಂದು ಕಡೆಯಲ್ಲಿ ಕಾಲೂರಲು ಹವಣಿಸುತ್ತಿದ್ದ ನಾಯಕ ಮಿಚೆಲ್ ಸ್ಯಾಚ್ನರ್(43) ಬುಮ್ರಾಗೆ ವಿಕೆಟ್ ಒಪ್ಪಿಸುವುದರೊಂದಿಗೆ ತಂಡದ ಆಲೌಟ್ ಖಾತ್ರಿಯಾಗಿತ್ತು.
ಬುಮ್ರಾ ನಾಲ್ಕು ವಿಕೆಟ್ ಕಿತ್ತರೆ, ಅಕ್ಸರ್ ಪಟೇಲ್ ಮೂರು ವಿಕೆಟ್ ಕಿತ್ತು ಭಾರತದ ಗೆಲುವಿಗೆ ಬ್ಯಾಟ್ಸ್ ಮನ್ ಗಳ ರೀತಿಯಲ್ಲೇ ತಮ್ಮ ಕೊಡುಗೆ ನೀಡಿದ್ದು ವಿಶೇಷ. ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಮೂರೂ ಕಡೆಯಿಂದಲೂ ಚಾಕಚಕ್ಯತೆಯ ಆಟವು ತಂಡಕ್ಕೆ ಗೆಲುವನ್ನು ದಕ್ಕಿಸಿಕೊಟ್ಟಿತ್ತು.
23-07-26 08:05 pm
HK News Desk
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
23-07-26 06:26 pm
HK News Desk
ಮೋದಿ ಮೌನ ಹೊಸದೇನಲ್ಲ, 'ನಾವು ತಪ್ಪು ಮಾಡಿದ್ದೇವೆ' ಎ...
23-07-26 05:57 pm
ರಾಜಧಾನಿ ದೆಹಲಿಯಲ್ಲಿ ಹೆಚ್ಚಿದ ಪ್ರತಿಭಟನೆ ಕಿಚ್ಚು ;...
23-07-26 05:48 pm
ಅಯೋಧ್ಯೆ ದೇಣಿಗೆ ಕಳವು ದೇಶದ ಆತ್ಮಸಾಕ್ಷಿಗೆ ಬಿದ್ದ ಪ...
23-07-26 01:51 pm
CJP ಪ್ರತಿಭಟನೆಯಲ್ಲಿ ಪೊಲೀಸ್ ದೌರ್ಜನ್ಯ; ತುರ್ತು ವ...
22-07-26 02:32 pm
23-07-26 10:27 pm
Mangaluru Staffer
ವಿದ್ಯಾರ್ಥಿಗಳಿಗೆ ಲಾಠಿಚಾರ್ಜ್ ದೇಶದ ಭವಿಷ್ಯದ ಮೇಲಿನ...
22-07-26 09:18 pm
2,000 ರೂ. ಆಸೆಗೆ ಬಿದ್ದು ಬ್ಯಾಂಕ್ ಅಕೌಂಟ್ ಹಸ್ತಾಂತ...
21-07-26 11:02 pm
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
22-07-26 10:24 pm
HK News Desk
ಎಸ್ಐಆರ್ ಪರಿಷ್ಕರಣೆ ನೆಪದಲ್ಲಿ ಎಪಿಕೆ ಫೈಲ್ ಕಳುಹಿಸಿ...
22-07-26 09:03 pm
ಬಂಟ್ವಾಳ ; ಮಳೆ-ಗಾಳಿಗೆ ಶಾಲಾ ಬಸ್ಸಿಗೆ ಉರುಳಿ ಬಿದ್ದ...
22-07-26 07:37 pm
Mysuru Murder, Suicide: ನಾನಿಲ್ಲದೆ ನನ್ನ ಹೆಂಡತಿ...
22-07-26 04:21 pm
ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ವ್ಯಕ್ತಿಯಿಂದ ಕಳ್ಳತ...
22-07-26 10:55 am