ಬ್ರೇಕಿಂಗ್ ನ್ಯೂಸ್
24-08-25 07:00 pm HK News Desk ಕ್ರೀಡೆ
ಅಹ್ಮದಾಬಾದ್, ಆ.24 : ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಸ್ಪೆಷಲಿಸ್ಟ್ ಆಟಗಾರ, ರಾಹುಲ್ ದ್ರಾವಿಡ್ ಬಳಿಕ ಭಾರತ ಟೆಸ್ಟ್ ತಂಡದ ಬೆನ್ನೆಲುಬು ಎನಿಸಿದ್ದ ಚೇತೇಶ್ವರ ಪೂಜಾರ ಎಲ್ಲ ಪ್ರಕಾರದ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ.
37 ವರ್ಷದ ಪೂಜಾರ ಭಾರತದ ಪರ 2023ರ ವಿಶ್ವ ಟೆಸ್ಟ್ ಸರಣಿಯ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಬಾರಿ ಆಡಿದ್ದರು. ಆ ಬಳಿಕ ಅವರನ್ನು ತಂಡಕ್ಕೆ ಪರಿಗಣಿಸಿರಲಿಲ್ಲ. ಎರಡು ವರ್ಷಗಳಿಂದ ಟೆಸ್ಟ್ ತಂಡದಲ್ಲಿ ಆಡಿರದಿದ್ದರೂ ಇತ್ತೀಚೆಗೆ ಟೆಸ್ಟ್ ತಂಡಕ್ಕೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಅವರ ಸಾಲಿಗೆ ಪೂಜಾರ ಸೇರಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಜೆರ್ಸಿ ಧರಿಸಿ ಆಡಿದ್ದು, ಭಾರತೀಯ ಜೆರ್ಸಿಯಲ್ಲಿ ರಾಷ್ಟ್ರಗೀತೆ ಹಾಡಿದ್ದು ಸ್ಮರಣೀಯ ಕ್ಷಣಗಳು. ಅದನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ. ಆದರೆ ಎಲ್ಲ ಒಳ್ಳೆಯ ಸಂಗತಿಗಳಿಗೆ ಒಂದು ಅಂತ್ಯ ಇದ್ದೇ ಇರುತ್ತದೆ ಎಂದು ಪೂಜಾರ ತಮ್ಮ ನಿವೃತ್ತಿಯ ಸಂದೇಶದಲ್ಲಿ ತಿಳಿಸಿದ್ದಾರೆ.
2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿ, ಭಾರತದ ಪರ 103 ಟೆಸ್ಟ್ ಪಂದ್ಯ ಆಡಿರುವ ಪೂಜಾರ, 5 ಏಕದಿನ ಪಂದ್ಯಗಳಲ್ಲೂ ಭಾರತವನ್ನು ಪ್ರತಿನಿಧಿಸಿದ್ದಾರೆ. ರಾಹುಲ್ ದ್ರಾವಿಡ್ ಬಳಿಕ ಮೂರನೇ ಕ್ರಮಾಂಕದ ಸ್ಥಾನ ತುಂಬಿದ ಪೂಜಾರ, ಟೆಸ್ಟ್ ನಲ್ಲಿ 43.60ರ ಸರಾಸರಿಯಲ್ಲಿ 7195 ರನ್ ಬಾರಿಸಿದ್ದು, 19 ಶತಕ, 35 ಅರ್ಧ ಶತಕಗಳನ್ನು ಬಾರಿಸಿದ್ದರು. ಅಫಘಾನಿಸ್ತಾನ ಒಂದನ್ನು ಬಿಟ್ಟು ಟೆಸ್ಟ್ ಆಡುವ ಎಲ್ಲ ದೇಶಗಳ ವಿರುದ್ಧವೂ ಶತಕ ಬಾರಿಸಿದ ಹಿರಿಮೆ ಇವರದ್ದು. ಅದರಲ್ಲೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ತಲಾ 5, ಶ್ರೀಲಂಕಾ ವಿರುದ್ಧ ನಾಲ್ಕು ಶತಕ ಬಾರಿಸಿದ್ದರು. ಏಕದಿನ ಕ್ರಿಕೆಟ್ ನಲ್ಲಿ 51 ರನ್ ಅಷ್ಟೇ ಮಾಡಿದ್ದರು. ಐಪಿಎಲ್ ನಲ್ಲಿ ಕೆಕೆಆರ್, ಆರ್ ಸಿ ಬಿ ಮತ್ತು ಪಂಜಾಬ್ ತಂಡದ ಪರ ಪೂಜಾರ ಆಡಿದ್ದರು.
India’s Test cricket specialist Cheteshwar Pujara, widely regarded as the backbone of the Indian Test team after Rahul Dravid, has officially announced his retirement from all forms of cricket. With an emotional message, the 37-year-old bid farewell to the sport, stating, "All good things must come to an end."
13-04-26 09:49 pm
HK News Staffer
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
ದಾವಣಗೆರೆ ದಕ್ಷಿಣದಲ್ಲಿ ಪ್ರಚಾರದಿಂದ ದೂರ; ಸಿಎಂ ರಾಜ...
13-04-26 04:20 pm
ಪಿಗ್ಮಿ ಏಜೆಂಟರು ಮಧ್ಯವರ್ತಿಗಳಲ್ಲ, ಬ್ಯಾಂಕುಗಳ ನೌಕರ...
12-04-26 07:58 pm
ಪಿಯುಸಿ ಫಸ್ಟ್ ಕ್ಲಾಸ್ ಪಾಸಾದ ಜೀವಾವಧಿ ಶಿಕ್ಷೆಗೀಡಾದ...
10-04-26 06:53 pm
14-04-26 01:46 pm
HK News Staffer
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
ಅಮೆರಿಕ- ಇರಾನ್ ಸಂಧಾನ ಯಶಸ್ವಿಯಾಗ್ತಿತ್ತು, ನೆತನ್ಯ...
13-04-26 01:27 pm
ಹೊರ್ಮುಜ್ ಜಲಸಂಧಿಯನ್ನು ನಾವೇ ತಡೆಯುತ್ತೇವೆ, ಅಣ್ವಸ್...
12-04-26 10:59 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
14-04-26 11:52 am
HK News Staffer
ನಂತೂರು ಭೀಕರ ಅಪಘಾತ ; ಬೈಕ್ ಸವಾರನ ಧಾವಂತಕ್ಕೆ ರಸ್ತ...
14-04-26 11:14 am
ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ...
11-04-26 11:14 pm
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm
ಧಾರವಾಡ ಯೂತ್ ಕಾಂಗ್ರೆಸ್ ಮುಖಂಡನ ಹತ್ಯೆ ; ಮನೆಗೆ ನು...
11-04-26 12:04 pm