ಬ್ರೇಕಿಂಗ್ ನ್ಯೂಸ್
17-07-23 02:35 pm Source: News18 Kannada ಕ್ರೀಡೆ
ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಆರಂಭಕ್ಕೆ ಇನ್ನೇಣು ಕೇಲವ 3 ತಿಂಗಳ ಬಾಕಿ ಉಳಿದಿದೆ. ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಈಗಾಗಲೇ ಅಭಿಮಾನಿಗಳು ಕಾತುರರಾಗಿದ್ದಾರೆ.
ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಮಾತನಾಡುತ್ತಾ, ಪಾಕಿಸ್ತಾನದ ಮಾಜಿ ವೇಗಿ ರಾಣಾ ನವೇದ್-ಉಲ್-ಹಸನ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆ ಬಳಿಕ ಅವರ ಮಾತು ಸಾಕಷ್ಟು ವಿವಾದಕ್ಕೆ ಒಳಗಾಗಿದ್ದು, ದೊಡ್ಡ ಪ್ರಮಾಣದಲ್ಲಿ ಚರ್ಚಗೆ ಕಾರಣವಾಗಿದೆ.
ಹೌದು, ಪಾಕ್ ಮಾಜಿ ವೇಗಿ ರಾಣಾ ನವೇದ್-ಉಲ್-ಹಸನ್, ಭಾರತದಲ್ಲಿ ಪಾಕ್ ತಂಡ ಆಡುವಾಗ ಹೆಚ್ಚಿನ ಬೆಂಬಲ ಖಂಡಿತವಾಗಿಯೂ ಭಾರತಕ್ಕೆ ಸಿಗಲಿದೆ. ಆದರೆ ಭಾರತದ ಮುಸ್ಲಿಮರು ಮಾತ್ರ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಾರೆ ಎಂದು ಹೇಳಿದ್ದಾರೆ.
ಅಲ್ಲದೇ ನಾನು ಭಾರತದಲ್ಲಿ ಅಹಮದಾಬಾದ್ ಮತ್ತು ಹೈದರಾಬಾದ್ಗಳಲ್ಲಿ 2 ಸರಣಿಗಳನ್ನು ಆಡಿರುವ ಸ್ವತಃ ನನ್ನ ಅನುಭವದ ಮೇಲೆ ಈ ಮಾತುಗಳನ್ನು ಹೇಳುತ್ತಿರುವೆ ಎಂದು ಹೇಳಿಕೊಂಡಿದ್ದಾರೆ.
ರಾಣಾ ನವೇದ್-ಉಲ್-ಹಸನ್ ಅವರ ಈ ಹೇಳಿಕೆ ಇದೀಗ ಕ್ರಿಕೆಟ್ ಲೋಕದಲ್ಲಿ ಹಾಗೂ ಭಾರತ ಮತ್ತು ಪಾಕ್ ವಿಶ್ವಕಪ್ ಪಂದ್ಯಕ್ಕೂ ಮುನ್ನ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಭಾರತೀಯರು ಇವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು, ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಈವರೆಗೂ ಯಾವುದೇ ಪಂದ್ಯವನ್ನು ಸೋತಿಲ್ಲ. ಇಲ್ಲಿಯವರೆಗೆ 7 ಬಾರಿ ಉಭಯ ತಂಡಗಳು ಮುಖಾಮುಖಿ ಆಗಿದ್ದು, ಅಷ್ಟರಲ್ಲಿಯೂ ಭಾರತ ಗೆದ್ದಿದೆ.
ಏಕದಿನ ವಿಶ್ವಕಪ್ ಪಂದ್ಯಗಳನ್ನು ರೌಂಡ್-ರಾಬಿನ್ ಸ್ವರೂಪದಲ್ಲಿ ಆಡಲಾಗುತ್ತದೆ. ಪ್ರತಿ ತಂಡಕ್ಕೆ 9 ಪಂದ್ಯಗಳ ನಂತರ ಹೆಚ್ಚಿನ ಅಂಕ ಗಳಿಸಿದ 4 ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಲಿದೆ.
Indian Muslims support Pakistan in 2023 world cup former Pakistan bowler rana naved ul hasan makes shocking statement.
16-10-25 04:44 pm
HK News Desk
ಆರೆಸ್ಸೆಸ್ ಚಟುವಟಿಕೆ ನಿಷೇಧ ; ಸಚಿವ ಪ್ರಿಯಾಂಕ ಖರ್ಗ...
16-10-25 04:40 pm
ರಾಜ್ಯದಲ್ಲಿ 800 ಸರಕಾರಿ ಶಾಲೆ ಕರ್ನಾಟಕ ಪಬ್ಲಿಕ್ ಶಾ...
15-10-25 10:59 pm
ದೀಪಾವಳಿಗೆ ಹೆಚ್ಚುವರಿ ರೈಲು ; ಮಂಗಳೂರು- ಬೆಂಗಳೂರು,...
15-10-25 03:35 pm
ರಘು ದೀಕ್ಷಿತ್ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ; 50ರ...
15-10-25 03:32 pm
15-10-25 11:02 pm
HK News Desk
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
16-10-25 01:11 pm
Mangalore Correspondent
Pumpwell Kankandy Road close: ಪಂಪ್ವೆಲ್ - ಕಂಕ...
15-10-25 05:36 pm
ಬೈಂದೂರಿನಲ್ಲಿ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು ;...
15-10-25 12:12 pm
ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈಕೋರ್ಟ್...
14-10-25 10:36 pm
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
15-10-25 04:51 pm
Bangalore Correspondent
ನಿಡ್ಡೋಡಿ ಮನೆಯಲ್ಲಿ ಗ್ಯಾಂಗ್ ರೇಪ್ ಸಂಚು ; ನಾಲ್ವರು...
15-10-25 12:00 pm
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm