ಬ್ರೇಕಿಂಗ್ ನ್ಯೂಸ್
16-05-23 12:00 pm Source: news18 ಕ್ರೀಡೆ
ಸದ್ಯ ಐಪಿಎಲ್ ತನ್ನ ಕೊನೆಯ ಹಂತಕ್ಕೆ ಬಂದು ತಲುಪುತ್ತಿದೆ. ಬರೋಬ್ಬರಿ 2 ತಿಂಗಳ ಕ್ರಿಕೆಟ್ ಹಬ್ಬಕ್ಕೆ ಇನ್ನೇನು ಕೆಲ ದಿನಗಳಲ್ಲಿಯೇ ತೆರೆ ಬೀಳಲಿದೆ. ಆದರೆ ಈ ಬಾರಿ ಐಪಿಎಲ್ನ ಪ್ಲೇಆಪ್ ಬಗ್ಗೆ ಈವರೆಗೂ ಸ್ಪಷ್ಟತೆ ಇಲ್ಲವಾಗಿದೆ. ಹೌದು, ಪ್ಲೇಆಫ್ನಲ್ಲಿ ಸರಿಯಾದ ಸ್ಪಷ್ಟತೆ ಇಲ್ಲವಾದ ಕಾರಣ ಪ್ರತಿ ತಂಡಗಳಿಗೂ ಪ್ಲೇಆಫ್ ಹಂತಕ್ಕೇರುವ ಸಾಧ್ಯತೆಗಳಿವೆ. ಇದರ ನಡುವೆ ಇದೀಗ ಹೊಸ ಸುದ್ದಿ ಚರ್ಚೆಯಾಗುತ್ತಿದ್ದು, ಆರ್ಸಿಬಿ ಮತ್ತು ಲಕ್ನೋ ಮುಖಾಮುಖಿ ಕುರಿತು.
ಈ ಬಾರಿ ಐಪಿಎಲ್ನಲ್ಲಿ ಯಾವುದು ಬೆಸ್ಟ್ ಮ್ಯಾಚ್ ಎಂದು ಕೇಳಿದರೆ ಪ್ರತಿಯೊಬ್ಬರೂ ಹೇಳುವ ಏಕೈಕ ಉತ್ತರವೆಂದರೆ ಅದು ಆರ್ಸಿಬಿ ಮತ್ತು ಲಕ್ನೋ ನಡುವಿನ ಹಣಾಹಣಿ ಎಂದು. ಹೌದು, ಈ ಪಂದ್ಯದಲ್ಲಿ ಆಟಕ್ಕಿಂತ ಹೆಚ್ಚು ಹೈಲೇಟ್ ಆಗಿದ್ದು, ಕೊಹ್ಲಿ ಮತ್ತು ಗಂಭೀರ್ ನಡುವಿನ ಜಗಳ. ಈವರೆಗೂ ಆರ್ಸಿಬಿ ಆಗಲಿ ಅಥವಾ ಲಕ್ನೋ ತಂಡವಾಗಲಿ ಪ್ಲೇಆಫ್ ಹಂತಕ್ಕೆ ಅಧಿಕೃತವಾಗಿ ಲಗ್ಗೆ ಇಟ್ಟಿಲ್ಲ. ಆದರೆ ಉಭಯ ತಂಡಗಳ ಅಭಿಮಾನಿಗಳು ಮತ್ತೆ ಯಾವಾಗ ಆರ್ಸಿಬಿ ಮತ್ತು ಲಕ್ನೋ ತಂಡಗಳು ಮುಖಾಮುಖಿ ಆಗಲಿದೆ ಎಂದು ಕಾತುರರಾಗಿದ್ದಾರೆ.
ಒಮ್ಮೆ ಏನಾದರೂ ಈ ರೀತಿ ಆದ್ದಲ್ಲಿ ಮತ್ತೊಮ್ಮೆ ಆರ್ಸಿಬಿ ಮತ್ತು ಲಕ್ನೋ ತಂಡಗಳು ಈ ವರ್ಷವೇ ಮುಖಾಮುಖಿ ಆಗಲಿದೆ. ಆದರೆ ಈ ಬಿಗ್ ಫೈಟ್ ನಡೆಯಬೇಕಾದರೆ ಈ ರೀತಿ ಮ್ಯಾಜಿಕ್ ನಡೆಯಬೇಕಿದೆ. ಐಪಿಎಲ್ 2023 ಅಂಕಪಟ್ಟಿಯಲ್ಲಿ 13 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಲಕ್ನೋ ತಂಡಕ್ಕೆ ಇನ್ನು ಲೀಗ್ ಹಂತದಲ್ಲಿ 2 ಪಂದ್ಯಗಳು ಬಾಕಿ ಉಳಿದಿದೆ. ಈ ಎರಡೂ ಪಂದ್ಯ ಗೆದ್ದರೆ ಲಕ್ನೋ 17 ಅಂಕದ ಮೂಲಕ ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆ.
ಆದರೆ ಮುಂಬೈ ಮುಂದಿನ 2 ಪಂದ್ಯದಲ್ಲಿ ಒಂದರಲ್ಲಿ ಸೋತು ಒಂದರಲ್ಲಿ ಗೆದ್ದರೆ 16 ಅಂಕ ಪಡೆಯಲಿದೆ. ಇತ್ತ ಆರ್ಸಿಬಿ ಸಹ ಮುಂದಿನ 2 ಪಂದ್ಯವನ್ನು ಭರ್ಜರಿಯಾಗಿ ಗೆದ್ದರೆ ಉತ್ತಮ ರನ್ರೇಟ್ ಮೂಲಕ ಪ್ಲೇಆಫ್ ಪ್ರವೇಶಿಸಲಿದೆ. ಆಗ ಲಕ್ನೋ ಸಹ 3ನೇ ಸ್ಥಾನ ಹಾಗೂ ಆರ್ಸಿಬಿ 4ನೇ ಸ್ಥಾನದಲ್ಲಿರಲಿದೆ. ಆಗ ಅಗ್ರ ಸ್ಥಾನದಲ್ಲಿರುವ 2 ತಂಡಗಳು ಕ್ವಾಲಿಫೈಯರ್ ಪಂದ್ಯವಾಡಲಿದೆ. ಹಾಗೆಯೇ 3 ಮತ್ತು 4ನೇ ಸ್ಥಾನದಲ್ಲಿರುವ ತಂಡಗಳು ಎಲಿಮಿನೇಟರ್ ಪಂದ್ಯವನ್ನಾಡಲಿದೆ.
ಆಗ ಲಕ್ನೋ ಮತ್ತು ಆರ್ಸಿಬಿ 3 ಮತ್ತು 4ನೇ ಸ್ಥಾನದಲ್ಲಿದ್ದರೆ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. ಒಮ್ಮೆ ಇದೇನಾದರೂ ಆಗದಿದ್ದರೆ, ಲಕ್ನೋ 2ನೇ ಸ್ಥಾನಕ್ಕೇರಿದರೆ ಆಗ ಅಲ್ಲಿನ ಪಂದ್ಯದಲ್ಲಿ ಲಕ್ನೋ ಸೋತು, ಎಲಿಮಿನೇಟರ್ನಲ್ಲಿ ಆರ್ಸಿಬಿ ಗೆದ್ದರೆ 2ನೇ ಕ್ವಾಲಿಫೈಯರ್ನಲ್ಲಿ ಮುಖಾಮುಖಿಯಾಗಲಿದೆ. ಇವೆಲ್ಲದರ ನಡುವೆ ದೊಡ್ಡ ಸುದ್ದಿಯೆಂದರೆ ಇಬ್ಬರೂ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ನಲ್ಲಿ ಗೆದ್ದರೆ ಲಕ್ನೋ ಮತ್ತು ಆರ್ಸಿಬಿ ಫೈನಲ್ನಲ್ಲಿ ಸೆಣಸಾಡಲಿದೆ. ಆದರೆ ಈ ಎಲ್ಲವೂ ನಡೆಯಬೇಕಾದರೆ ಉಭಯ ತಂಡಗಳು ಮೊದಲು ಪ್ಲೇಆಫ್ ಪ್ರವೇಶಿಸಬೇಕಿದೆ.
rcb vs lsg will meet again in ipl 2023 playoffs.
02-09-25 11:04 pm
Bangalore Correspondent
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದ...
02-09-25 08:00 pm
Ranya Rao: ಚಿನ್ನ ಸ್ಮಗ್ಲರ್ ರನ್ಯಾ ರಾವ್ ಗೆ ಮತ್ತೆ...
02-09-25 06:22 pm
Dharmasthala ED: ಧರ್ಮಸ್ಥಳ ಪ್ರಕರಣದಲ್ಲಿ ಇಡಿ ಎಂಟ...
02-09-25 02:37 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
03-09-25 11:53 am
HK News Desk
ಧರ್ಮಸ್ಥಳ ಪ್ರಕರಣ ಮತ್ತೆ ತಿರುವು ; ಹತ್ಯೆಗೀಡಾದವರ ಸ...
02-09-25 10:26 pm
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm