ಬ್ರೇಕಿಂಗ್ ನ್ಯೂಸ್
25-09-20 06:19 pm Mangalore Correspondent ಕರಾವಳಿ
ಮಂಗಳೂರು, ಸೆಪ್ಟಂಬರ್ 25: ಡ್ರಗ್ ನಂಟಿನ ಹಿನ್ನೆಲೆಯಲ್ಲಿ ವಿಚಾರಣೆಗೆ ಬರುವಂತೆ ನೋಟೀಸ್ ಪಡೆದಿದ್ದ ನಿರೂಪಕಿ ಅನುಶ್ರೀ ಇಂದೇ ವಿಚಾರಣೆಗೆ ಹಾಜರಾಗ್ತೀನಿ ಎಂದು ಹೇಳಿ ಮಂಗಳೂರಿನಲ್ಲಿ ಕಣ್ಣು ಮುಚ್ಚಾಲೆ ಆಡಿಸಿದ್ದಾಳೆ. ಪೊಲೀಸರು ಮತ್ತು ಮಾಧ್ಯಮ ಮಂದಿಯನ್ನು ಇಡೀ ದಿನ ತುದಿಗಾಲಲ್ಲಿ ನಿಲ್ಲುವಂತೆ ಮಾಡಿ ಯಾಮಾರಿಸಿದ್ದಾಳೆ.
ಅನುಶ್ರೀಗೆ ಮಂಗಳೂರು ಪೊಲೀಸರು ನಿನ್ನೆಯಷ್ಟೇ ವಿಚಾರಣೆಗೆ ಬರುವಂತೆ ನೋಟೀಸ್ ನೀಡಿದ್ದರು. ಈ ಬಗ್ಗೆ ರಾತ್ರಿ ವೇಳೆಗೆ ನೋಟೀಸ್ ಸಿಕ್ಕಿರುವುದನ್ನು ದೃಢಪಡಿಸಿದ ಅನುಶ್ರೀ, ಮಾಧ್ಯಮಗಳಲ್ಲಿ ನಾಳೆಯೇ(ಶುಕ್ರವಾರ) ಮಂಗಳೂರಿಗೆ ಹೋಗ್ತೀನಿ. ಬೆಳಗ್ಗೆ 11 ಗಂಟೆಗೆ ಪೊಲೀಸರ ವಿಚಾರಣೆಗೆ ಹಾಜರಾಗ್ತೀನಿ ಎಂದಿದ್ದಳು. ಅದಲ್ಲದೆ, ಆ ಬಗ್ಗೆ ಒಂದು ಸುದೀರ್ಘ ಪತ್ರಿಕಾ ಹೇಳಿಕೆಯನ್ನೂ ನೀಡಿದ್ದಳು.
ಹೀಗಾಗಿ ಅನುಶ್ರೀ ಇಂದು ಬೆಳಗ್ಗೆ ಮಂಗಳೂರು ಕಮಿಷನರ್ ಕಚೇರಿಗೆ ಅಥವಾ ಎನ್ ಸಿಐಬಿ ಕಚೇರಿಗೆ ಬರಬಹುದು ಅಂದ್ಕೊಂಡಿದ್ದ ಪೊಲೀಸರು ಮತ್ತು ಮೀಡಿಯಾ ಮಂದಿ ಬೆಳಗ್ಗಿನಿಂದ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾದಿದ್ದೇ ಬಂತು. ಸಂಜೆವರೆಗೂ ಅನುಶ್ರೀ ಅತ್ತ ಸುಳಿಯಲೇ ಇಲ್ಲ. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಬಳಿ ಪ್ರಶ್ನಿಸಿದರೆ ಉತ್ತರಾನೇ ಇಲ್ಲ. ಹೀಗಾಗಿ ಅನುಶ್ರೀ ಶನಿವಾರ ಮಂಗಳೂರಿನ ಪೊಲೀಸರ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.

ಪೊಲೀಸರು ನೀಡಿದ್ದ ನೋಟೀಸ್ ನಲ್ಲಿ ಶನಿವಾರದ ಒಳಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಆದರೆ, ಅನುಶ್ರೀ ನಿನ್ನೆ ರಾತ್ರಿ ಪತ್ರಿಕಾ ಹೇಳಿಕೆ ನೀಡಿ ಶುಕ್ರವಾರವೇ ವಿಚಾರಣೆಗೆ ಬರ್ತೀನಿ.. ನಾನು ಯಾವುದೇ ತಪ್ಪು ಮಾಡಿಲ್ಲ. ನನಗೂ ಅವರಿಗೂ ಸಂಬಂಧಾನೇ ಇಲ್ಲ ಎಂದು ಬಡಾಯಿ ಬಿಟ್ಟಿದ್ದರು. ಹೀಗಾಗಿ ಇಂದು ಬೆಳಗ್ಗೆ ಅನುಶ್ರೀ ಬರುವಿಕೆ ಖಚಿತ ಎನ್ನಲಾಗಿತ್ತು. ಆದರೆ, ಸಂಜೆವರೆಗೂ ಕಾದ ಪೊಲೀಸರು ಮತ್ತು ಮಾಧ್ಯಮದ ಮಂದಿಗೆ ಅನುಶ್ರೀ ಕಾಣಸಿಗಲೇ ಇಲ್ಲ. ಎಲ್ಲಿದ್ದಾಳೆ, ಇಂದು ರಾತ್ರಿ ಬರಬಹುದಾ ಅಥವಾ ನಾಳೆ ಬರಬಹುದಾ ಅನ್ನೋದ್ರ ಬಗ್ಗೆನೂ ಖಚಿತತೆ ಇಲ್ಲ. ಬಂಧಿತ ಡ್ಯಾನ್ಸರ್ ಕಿಶೋರ್ ಆಪ್ತ ತರುಣ್ ಹೇಳಿಕೆ ಆಧರಿಸಿ, ಅನುಶ್ರೀಗೆ ನೋಟಿಸ್ ನೀಡಲಾಗಿತ್ತು.
ಮಂಗಳೂರಿನಲ್ಲಿ ಪಾರ್ಟಿ ಮಾಡಿಲ್ಲವಂತೆ !
ಇನ್ನು ಎನ್ ಸಿಬಿ ಅಧಿಕಾರಿಗಳ ಮಾಹಿತಿ ಪ್ರಕಾರ, ಕಿಶೋರ್ ಆಪ್ತ ತರುಣ್ ಗೆ ಅನುಶ್ರೀ ಜೊತೆ ಹತ್ತಿರದ ಸಂಬಂಧ ಇತ್ತಂತೆ. ಬೆಂಗಳೂರಿನಲ್ಲಿ ಜೊತೆಗೆ ಪಾರ್ಟಿ ಮಾಡಿದ್ದೂ ಇದೆಯಂತೆ. ಇನ್ನು ಮಂಗಳೂರಿನಲ್ಲಿ ಪಾರ್ಟಿ ಮಾಡಿದ್ದಾರೆ ಎನ್ನುವುದನ್ನು ಯಾರು ಕೂಡ ಹೇಳಿಲ್ಲ. ತರುಣ್, ಈ ಹಿಂದೆ ಕೊರಿಯೋಗ್ರಾಫರ್ ಆಗಿದ್ದರಿಂದ ಆಕೆ ಕರೆದಿದ್ದ ಪಾರ್ಟಿಗೆ ಹೋಗಿದ್ದ ಎಂದು ತಿಳಿಸಿದ್ದಾರೆ. ಕೆಲವು ಮಾಹಿತಿಗಳ ಸಂಗ್ರಹಕ್ಕಾಗಿ ಅನುಶ್ರೀಗೆ ನೋಟೀಸ್ ನೀಡಿದ್ದೇವೆ ಅಷ್ಟೇ ಎಂದಿದ್ದಾರೆ.
30-01-26 12:38 pm
HK News Desk
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
ಕಾರವಾರ ರಿಶೇಲ್ ಡಿಸೋಜಾ ಆತ್ಮಹತ್ಯೆ ; ಕೊನೆಗೂ JDS ನ...
30-01-26 11:55 am
ಚೀಟಿ ವ್ಯವಹಾರ ಇತ್ಯರ್ಥಕ್ಕೆ 4 ಲಕ್ಷ ರೂ. ಲಂಚಕ್ಕೆ ಬ...
29-01-26 11:03 pm
ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ...
29-01-26 10:48 pm
30-01-26 02:04 pm
HK News Desk
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
29-01-26 10:38 pm
Mangalore Correspondent
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm