ಬ್ರೇಕಿಂಗ್ ನ್ಯೂಸ್
25-04-22 08:13 pm Mangalore Correspondent ಕರಾವಳಿ
ಮಂಗಳೂರು, ಎ.25: ಪಿಎಸ್ಐ ನೇಮಕಾತಿಯಲ್ಲಿ ಹಗರಣ ಆಗಿರುವುದು ರಾಜ್ಯ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ. ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಶಾಮೀಲಾತಿ ಇಲ್ಲದೆ ಇಷ್ಟು ದೊಡ್ಡ ಮಟ್ಟದಲ್ಲಿ ಹಗರಣ ಆಗಲು ಸಾಧ್ಯವಿಲ್ಲ. ಆದರೆ, ಇಲ್ಲಿ ಪೊಲೀಸರೇ ಪೊಲೀಸರನ್ನು ತನಿಖೆ ನಡೆಸುವುದಂದ್ರೆ ಹೇಗೆ ಸಾಧ್ಯ. ರಾಜ್ಯ ಸರಕಾರಕ್ಕೆ ಪಾರದರ್ಶಕ ತನಿಖೆ ನಡೆಸಬೇಕು, ನ್ಯಾಯ ದೊರಕಿಸಬೇಕು ಅಂದ್ರೆ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು, ಅಥವಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ವಿಪಕ್ಷ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪ ನಾಯಕ ಯುಟಿ ಖಾದರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಖಾದರ್, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟಿದೆಯಂದ್ರೆ 545 ಪಿಎಸ್ಐ ಹುದ್ದೆಗಳಿಗೆ ಒಂದೂವರೆ ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ನ್ಯಾಯಯುತವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯ ಆಗಿದೆ. ಇಲ್ಲಿ ಕಾಂಗ್ರೆಸ್, ಬಿಜೆಪಿ ಅನ್ನುವ ವಿಚಾರ ಅಗತ್ಯವಿಲ್ಲ. ಯಾರೇ ಶಾಮೀಲಾಗಿದ್ದರೂ, ತನಿಖೆ ನಡೆಸಬೇಕು. ಪೊಲೀಸ್ ನೇಮಕಾತಿ ಆಗುತ್ತಿರುವಾಗ ಇಲಾಖೆಯ ಮುಖ್ಯಸ್ಥರನ್ನು ವಿಚಾರಣೆ ನಡೆಸಬೇಡವೇ.. ಅವರನ್ನು ವಿಚಾರಣೆ ಮಾಡಲು ಪೊಲೀಸರಿಗೆ ಸಾಧ್ಯವಾಗುತ್ತದೆಯೇ.. ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆಗಳಿದ್ದು, ಎಲ್ಲರನ್ನೂ ತನಿಖೆಗೊಳಪಡಿಸಬೇಕು. ಪಾರದರ್ಶಕ ತನಿಖೆ ಆಗಬೇಕಿದ್ದರೆ, ಈ ರಾಜ್ಯದ ಪೊಲೀಸರಲ್ಲದೆ ಪ್ರತ್ಯೇಕ ತನಿಖಾ ತಂಡ ನೇಮಿಸುವ ಅಗತ್ಯವಿದೆ ಎಂದು ಹೇಳಿದರು.
ಇದನ್ನು ಬಿಟ್ಟು ರಾಜ್ಯ ಸರಕಾರ ಹಗರಣದ ಬಗ್ಗೆ ಸಾರ್ವಜನಿಕ ನೆಲೆಯಲ್ಲಿ ಸಿಕ್ಕಿರುವ ಮಾಹಿತಿಗಳನ್ನು ಹೇಳಿಕೊಂಡಿದ್ದಕ್ಕಾಗಿ ಕಾಂಗ್ರೆಸ್ ಮುಖಂಡ ಪ್ರಿಯಾಂಕ ಖರ್ಗೆ ಅವರಿಗೆ ವಿಚಾರಣೆಗೆ ಬರಲು ನೋಟೀಸ್ ನೀಡಿದೆ. ಹಗರಣದ ಬಗ್ಗೆ ಮಾಹಿತಿ ಕೊಟ್ಟವರನ್ನು ವಿಚಾರಣೆಗೆ ಕರೆಸುವ ಶೈಲಿ ಯಾವ ಥರದ್ದು. ಇಂಥ ಪ್ರಯತ್ನಗಳಿಗೆ ಕಾಂಗ್ರೆಸ್ ಬಗ್ಗುವುದಿಲ್ಲ. ಪೊಲೀಸರು, ಗುಪ್ತಚರ ಇಲಾಖೆಗೆ ಸಿಗದ ಮಾಹಿತಿಗಳು ವಿಪಕ್ಷದ ಶಾಸಕರಿಗೆ ಸಿಗುತ್ತದೆ ಅಂದ್ರೆ, ಸರಕಾರದ ವೈಫಲ್ಯವನ್ನು ತೋರಿಸುತ್ತದೆ ಎಂದು ಖಾದರ್ ಹೇಳಿದರು.
ನಳಿನ್ ಹೇಳಿದ್ದು ಯಾವುದಾದ್ರೂ ಆಗಿದ್ಯಾ..?
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಹತ್ತು ಮಂದಿ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ, ನಳಿನ್ ಕುಮಾರ್ ಹೇಳಿದ್ದು ಯಾವುದಾದ್ರೂ ಆಗಿದೆಯೇ.. ಹಿಂದೆ ಡಾಲರಿಗೆ 20 ರೂಪಾಯಿ ಆಗುತ್ತೆ ಎಂದಿದ್ರು. ಎರಡು ಸಾವಿರಕ್ಕೆ ಮರಳು ಸಿಗುತ್ತದೆ ಎಂದಿದ್ರು. ಪೆಟ್ರೋಲಿಗೆ 50 ರೂ. ಎಂದಿದ್ದೂ ಆಗಿತ್ತು. ಇದು ಯಾವುದಾದ್ರೂ ಕಾರ್ಯರೂಪಕ್ಕೆ ಬಂದಿದೆಯೇ. ಇಂಥವರ ಹೇಳಿಕೆಗಳನ್ನು ಸೀರಿಯಸ್ ಆಗಿ ತಗೊಳ್ಳಲ್ಲ ಎಂದು ಖಾದರ್ ವ್ಯಂಗ್ಯವಾಡಿದ್ದಾರೆ.
ಧರ್ಮದ ವಿಚಾರದಲ್ಲಿ ದಂಗಲ್ ನಡೆಸುವ ಹೇಳಿಕೆ ನೀಡುವುದು ದೊಡ್ಡ ವಿಷಯ ಅಲ್ಲ. ಮುತಾಲಿಕ್ ಒಂದು, ಇನ್ನೊಬ್ಬ ಮತ್ತೊಂದು ಹೇಳಿಕೆ ಕೊಡುತ್ತಾರೆ. ಆದರೆ ಇದನ್ನು ಕೇಳಿಕೊಂಡು ಸರಕಾರ ನಡೆಸುವ ಮಂದಿ ಮೌನ ವಹಿಸುವುದು ತಪ್ಪು. ವಿಶ್ವದ ಯಾವುದೇ ದೇಶದಲ್ಲಿ ಹಿಂದು-ಮುಸ್ಲಿಂ, ಧರ್ಮದ ಆಧಾರದಲ್ಲಿ ವ್ಯಾಪಾರದ ಬಗ್ಗೆ ಕಿಡಿ ಎಬ್ಬಿಸುವ ಉದಾಹರಣೆ ಇಲ್ಲ. ಮಲೇಶ್ಯಾ, ದುಬೈ, ಸೌದಿ ಹೀಗೆ ಎಲ್ಲ ಕಡೆ ನಮ್ಮ ಜನರಿದ್ದಾರೆ. ಇಲ್ಲಿ ಮಾತ್ರ ಯಾಕೆ ಈ ರೀತಿಯ ಕಿಡಿ ಎಬ್ಬಿಸುತ್ತಿದ್ದಾರೆ ಎನ್ನೋದನ್ನು ರಾಜ್ಯ ಸರಕಾರದ ಬಳಿ ಕೇಳಬೇಕು ಎಂದು ಹೇಳಿದ್ದಾರೆ.
MLA U T Khader urged the state government to hold a probe into the PSI recruitment scam. Addressing media here on Monday April 25, U T Khader said, “Corruption is at the peak in the state with PSI recruitment scam now. It is impossible without the involvement of officials connected to the concerned department.
20-07-25 08:35 pm
Bangalore Correspondent
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
20-07-25 10:35 pm
Mangalore Correspondent
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
RCB Stampede, DySP Anupama Shenoy: ಕಾಲ್ತುಳಿತ...
19-07-25 06:51 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm