ಬ್ರೇಕಿಂಗ್ ನ್ಯೂಸ್
23-09-20 03:51 pm Mangalore Correspondent ಕರಾವಳಿ
ಮಂಗಳೂರು, ಸೆಪ್ಟಂಬರ್ 23: ಮುಲ್ಕಿ ಸುಂದರರಾಮ ಶೆಟ್ಟಿ ಹೆಸರು ರಸ್ತೆ ನಾಮಕರಣದ ವಿವಾದ ಮುಗಿಯುತ್ತಲೇ ಒಂದು ವಿಭಾಗದವರು ನಾರಾಯಣ ಗುರು ಹೆಸರನ್ನು ಮಂಗಳೂರಿನ ವೃತ್ತವೊಂದಕ್ಕೆ ಇಡಬೇಕೆಂದು ಒತ್ತಾಯ ಆರಂಭಿಸಿದ್ದಾರೆ. ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ಹೆಸರು ಇಡಬೇಕೆಂದು ಬಿರುವೆರ್ ಕುಡ್ಲ ಸಂಘಟನೆಯಿಂದ ಮಹಾನಗರ ಪಾಲಿಕೆಗೆ ಮನವಿಯನ್ನೂ ನೀಡಲಾಗಿದೆ. ಈ ವಿಚಾರ ಪ್ರಸ್ತಾಪ ಆಗುತ್ತಲೇ ಲೇಡಿಹಿಲ್ ವೃತ್ತದ ಬಳಿ ಇರುವ ಶಾಲಾಡಳಿತ ಮಂಡಳಿಗಳು ವಿರೋಧ ಸೂಚಿಸಿದ್ದು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ.
ಈ ನಡುವೆ, ಕೆಲವರು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು ಖಾಸಗಿ ಬಸ್ ಗಳ ಮುಂದೆ ನಾರಾಯಣ ಗುರು ಸರ್ಕಲ್ ಎಂದು ಸ್ಟಿಕ್ಕರ್ ಅಂಟಿಸಿದ್ದಾರೆ. ಲೇಡಿಹಿಲ್ ದಾರಿಯಾಗಿ ಸಾಗುವ ಬಸ್ ಗಳ ಮುಂಭಾಗದಲ್ಲಿ ಈ ಸ್ಟಿಕ್ಕರ್ ಕಾಣಿಸಿಕೊಂಡಿದೆ. ಬಿರುವೆರ್ ಕುಡ್ಲ ಸಂಘಟನೆಯ ವತಿಯಿಂದ ಹೀಗೊಂದು ಅಭಿಯಾನ ನಡೀತಿದ್ಯಾ ಅನುಮಾನ ಕೇಳಿಬಂದಿದೆ. ಆದರೆ ಬಸ್ಸಿನ ಮುಂದೆ ಸ್ಟಿಕ್ಕರ್ ಅಂಟಿಸಿದ ಮಾತ್ರಕ್ಕೆ ಅಲ್ಲಿನ ಹೆಸರು ಬದಲಾವಣೆ ಆಗಲ್ಲ..! ಅಂಥ ಒತ್ತಾಯಕ್ಕೆ ಮತ್ತೊಂದಷ್ಟು ಒತ್ತಡ ಬೀಳುವುದಂತೂ ಖಚಿತ.
ಹೀಗೊಂದು ವಿವಾದ ಎದ್ದಿರುವ ಬಗ್ಗೆ ಬಿಲ್ಲವ ಸಂಘಗಳ ಅಭಿಪ್ರಾಯ ಕೇಳಿದರೆ ನಾವೇನು ಅಂತಹ ಒತ್ತಾಯ ಮಾಡಿಲ್ಲ ಎನ್ನುತ್ತಾರೆ. ನಾರಾಯಣ ಗುರು ಶಾಂತಿಪ್ರಿಯರು. ಎಲ್ಲರೂ ಒಂದೇ ಎಂದು ಸಾರಿದವರು. ಅಂಥ ವ್ಯಕ್ತಿಯ ಹೆಸರಲ್ಲಿ ವಿವಾದ ಎಬ್ಬಿಸಬಾರದು. ಈ ವಿವಾದಗಳ ಹಿಂದೆ ರಾಜಕೀಯ ಇದೆ. ಗುರುಗಳ ಹೆಸರಿಡುವ ವಿಚಾರವನ್ನು ಶಾಂತಿಯುತವಾಗೇ ಮುಗಿಸಬೇಕು. ಗುರುಗಳ ಹೆಸರಿಡುವುದಿದ್ದರೆ ಲೇಡಿಹಿಲ್ ವೃತ್ತವೇ ಆಗಬೇಕಂತಿಲ್ಲ. ಹೆಸರು ಇಲ್ಲದ ವೃತ್ತಗಳಿಗೆ ಇಟ್ಟು ಸೌಹಾರ್ದದಿಂದ ಕೆಲಸ ಮುಗಿಸಬಹುದು. ಹಂಪನಕಟ್ಟೆಯ ವೃತ್ತಕ್ಕೆ ಯಾವುದೇ ಹೆಸರಿಲ್ಲ. ಮಂಗಳೂರಿನಲ್ಲಿ ಪ್ರಮುಖ ವೃತ್ತವೂ ಹೌದು.. ಹಾಗೆ ನೋಡಿದರೆ ಹಂಪನಕಟ್ಟೆ ಸಿಗ್ನಲ್ ವೃತ್ತಕ್ಕೆ ನಾರಾಯಣ ಗುರುಗಳ ಹೆಸರು ಇಡಬಹುದು ಎಂದು ಬಿಲ್ಲವ ಸಂಘಟನೆಯ ಪ್ರಮುಖರೊಬ್ವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
22-10-25 08:12 pm
HK News Desk
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
22-10-25 05:45 pm
HK News Desk
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
22-10-25 09:55 pm
Mangalore Correspondent
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm