ಬ್ರೇಕಿಂಗ್ ನ್ಯೂಸ್
19-09-20 05:25 pm Mangalore Reporter ಕರಾವಳಿ
ಮಂಗಳೂರು, ಸೆಪ್ಟಂಬರ್ 19: ಡ್ರಗ್ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಡ್ಯಾನ್ಸರ್ ಕಂ ಕೊರಿಯೋಗ್ರಾಫರ್ ಕಿಶೋರ್ ಅಮನ್ ಅಸಲಿಗೆ ಶೆಟ್ಟಿ ಸಮುದಾಯದವನೇ ಅಲ್ಲ. ಬಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಹೆಸರಿನ ಮುಂದೆ ಶೆಟ್ಟಿ ಸರ್ ನೇಮ್ ಸೇರಿಸಿಕೊಂಡಿದ್ದ ಎಂಬ ಮಾಹಿತಿ ಹೊರಬಿದ್ದಿದೆ.
‘ಕಿಶೋರ್ ಶೆಟ್ಟಿ’ ಬಂಧನ ಸುದ್ದಿ ಬೆಳಗ್ಗಿನಿಂದ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಸುರತ್ಕಲ್ ಪರಿಸರದ ಬಂಟ ಸಮುದಾಯದವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತ ಒರಿಜಿನಲ್ ಶೆಟ್ಟಿಯಲ್ಲ. ತನ್ನ ಹೆಸರಿನ ಮುಂದೆ ಉದ್ದೇಶಪೂರ್ವಕವಾಗಿ ಶೆಟ್ಟಿ ಹಾಕ್ಕೊಂಡಿದ್ದಾನೆ. ಬೇಕಿದ್ದರೆ ಆತನಲ್ಲಿ ಕೇಳಿ ನೋಡಿ ಎಂದು ಹೇಳಿದ್ದರು. ಈ ಬಗ್ಗೆ ಆತನನ್ನು ವಿಚಾರಣೆ ನಡೆಸುತ್ತಿದ್ದ ಸಿಸಿಬಿ ಪೊಲೀಸರು ಪ್ರಶ್ನೆ ಮಾಡಿದಾಗ, ಕಿಶೋರ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ, ಶೆಟ್ಟಿ ಹಾಕ್ಕೊಂಡಿದ್ದರ ಕಾರಣವನ್ನೂ ಹೇಳಿದ್ದಾನೆ.

ಆರಂಭದಲ್ಲಿ ಝೀಟಿವಿಯ ರಿಯಾಲಿಟಿ ಶೋಗಳಲ್ಲಿ ಇದ್ದಾಗ ಕಿಶೋರ್, ಮಂಗಳೂರು ಅಂತಷ್ಟೇ ಬಳಕೆ ಮಾಡುತ್ತಿದ್ದ. ಆನಂತರ ಸ್ವಲ್ಪ ಹೆಸರು ಬಂದೊಡನೆ ಬಾಲಿವುಡ್ ಕಲಾವಿದರ ಪರಿಚಯ ಆಗಿತ್ತು. ಮಂಗಳೂರು ಮೂಲದವ, ಹೆಸರಿನ ಜೊತೆಗೆ ಶೆಟ್ಟಿ ಸರ್ ನೇಮ್ ಇದ್ದರೆ ಹೆಚ್ಚು ಅವಕಾಶ, ಮರ್ಯಾದೆ ಸಿಗುತ್ತೆ ಅಂತ ಸೇರಿಸಿಕೊಂಡಿದ್ದೆ ಅಂತಾ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ.
ಮಂಗಳೂರಿನ ಕುಳಾಯಿ ನಿವಾಸಿಯಾಗಿದ್ದ ಕಿಶೋರ್, 2011ರ ವೇಳೆಗೆ ಝೀ ರಿಯಾಲಿಟಿ ಶೋಗಳಿಗೆ ಹೋಗಿ ಹೆಸರು ಮಾಡಿದ್ದ. ಅದು ಬಿಟ್ಟರೆ ಮಂಗಳೂರಿನಲ್ಲಿ ಡ್ಯಾನ್ಸ್ ಕ್ಲಾಸ್ ಆಗಿರಲಿ, ಯಾವುದೇ ಡ್ಯಾನ್ಸ್ ಚಟುವಟಿಕೆಯನ್ನು ಮಾಡಿಕೊಂಡಿಲ್ಲ ಎಂದು ಆತನ ನಿಕಟವರ್ತಿಗಳು ಹೇಳಿದ್ದಾರೆ.
30-01-26 12:38 pm
HK News Desk
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
ಕಾರವಾರ ರಿಶೇಲ್ ಡಿಸೋಜಾ ಆತ್ಮಹತ್ಯೆ ; ಕೊನೆಗೂ JDS ನ...
30-01-26 11:55 am
ಚೀಟಿ ವ್ಯವಹಾರ ಇತ್ಯರ್ಥಕ್ಕೆ 4 ಲಕ್ಷ ರೂ. ಲಂಚಕ್ಕೆ ಬ...
29-01-26 11:03 pm
ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ...
29-01-26 10:48 pm
29-01-26 11:07 pm
HK News Desk
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
ಶಿಮ್ಲಾದಲ್ಲಿ ಹಿಮಪಾತ ; ರೀಲ್ಸ್ ಮಾಡಲು ಹೋಗಿದ್ದ ಹುಡ...
28-01-26 02:35 pm
ತಮ್ಮ ಕರ್ಮಭೂಮಿಯಲ್ಲೇ ಅಜಿತ್ ಪವಾರ್ ಕೊನೆಯುಸಿರು ; ವ...
28-01-26 01:28 pm
29-01-26 10:38 pm
Mangalore Correspondent
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm