ಮಂಗಳೂರಿನಲ್ಲಿ ರೆಡಿಯಾಗ್ತಿದೆ ಮುಸ್ಲಿಂ ಡಿಫೆನ್ಸ್ ಟೀಮ್ ; ಬುರ್ಖಾ ಮರೆಯಲ್ಲಿ ಮೈಮರೆಯುವವರೇ ಟಾರ್ಗೆಟ್ ! ಮಾಲ್ ದಾಳಿಗೆ ಸಜ್ಜಾಗಿದ್ಯಂತೆ ಗೂಂಡಾ ಗ್ಯಾಂಗ್ ! 

17-02-22 01:47 pm       Mangalore Correspondent   ಕರಾವಳಿ

ಮಂಗಳೂರಿನಲ್ಲಿ ಹಿಂದು ಸಂಘಟನೆಗಳು, ಕೆಲವೊಮ್ಮೆ ಹಿಂದುಗಳಿಗೆ ಪ್ರತಿಯಾಗಿ ಮುಸ್ಲಿಂ ಸಂಘಟನೆಗಳು ನೈತಿಕ ಪೊಲೀಸ್ ಗಿರಿ ನಡೆಸುವುದನ್ನು ಕೇಳಿದ್ದೇವೆ. ಸಂಘಟನೆಗಳ ನಾಯಕರ ಕೃಪೆಯಲ್ಲಿ ಪುಂಡು ಪೋಕರಿ ನಡೆಸುವ ಕಾರ್ಯಕರ್ತರು ಈ ಕೆಲಸ ಮಾಡುತ್ತಾರೆ.

ಮಂಗಳೂರು, ಫೆ.17 : ಮಂಗಳೂರಿನಲ್ಲಿ ಹಿಂದು ಸಂಘಟನೆಗಳು, ಕೆಲವೊಮ್ಮೆ ಹಿಂದುಗಳಿಗೆ ಪ್ರತಿಯಾಗಿ ಮುಸ್ಲಿಂ ಸಂಘಟನೆಗಳು ನೈತಿಕ ಪೊಲೀಸ್ ಗಿರಿ ನಡೆಸುವುದನ್ನು ಕೇಳಿದ್ದೇವೆ. ಸಂಘಟನೆಗಳ ನಾಯಕರ ಕೃಪೆಯಲ್ಲಿ ಪುಂಡು ಪೋಕರಿ ನಡೆಸುವ ಕಾರ್ಯಕರ್ತರು ಈ ಕೆಲಸ ಮಾಡುತ್ತಾರೆ. ಆದರೆ ಈಗ ಈ ರೀತಿಯ ಕೆಲಸಕ್ಕೆ ಮುಸ್ಲಿಂ ಸಂಘಟನೆಯಿಂದಲೂ ವ್ಯವಸ್ಥಿತ ಕಾರ್ಯತಂತ್ರ ನಡೆದಿದೆಯಾ ಅನ್ನುವ ಶಂಕೆ ಮೂಡಿದೆ. ಅದಕ್ಕೆ ಪೂರಕ ಎನ್ನುವಂತೆ, ಮುಸ್ಲಿಂ ವಾಟ್ಸಪ್ ಗ್ರೂಪ್ ಗಳಲ್ಲಿ ಹೊಸತೊಂದು ಟೀಮ್ ರೆಡಿಯಾಗಿರುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ.

ಮುಸ್ಲಿಂ ಡಿಫೆನ್ಸ್ ಫೋರ್ಸ್ ಎನ್ನುವ ಹೆಸರಲ್ಲಿ ಮಂಗಳೂರಿನಲ್ಲಿ ಯುವಕರು ರೆಡಿಯಾಗಿದ್ದಾರಂತೆ. ಬುರ್ಖಾ ಹಾಕ್ಕೊಂಡು ಅನೈತಿಕ ಕೆಲಸ ಮಾಡುವ ಹುಡುಗಿಯರನ್ನು ಪತ್ತೆ ಮಾಡುವಲ್ಲಿ ಇವರು ಬೆನ್ನು ಬೀಳಲಿದ್ದಾರಂತೆ. ವಾಟ್ಸಪ್ ಜಾಲತಾಣದಲ್ಲಿ ಬಂದಿರುವ ಮಾಹಿತಿ ಪ್ರಕಾರ, ಇವರು ಮೊದಲಿಗೆ ಟಾರ್ಗೆಟ್ ಮಾಡಿಕೊಂಡಿದ್ದು ಮಂಗಳೂರಿನ ಸಿಟಿ ಸೆಂಟರ್ ಮಾಲನ್ನು. ಸಿಟಿ ಸೆಂಟರಿನಲ್ಲಿ ಬುರ್ಖಾ ಹಾಕ್ಕೊಂಡು ಅನೈತಿಕ ಕೆಲಸವನ್ನು ಹುಡುಗಿಯರು ಮಾಡುತ್ತಿದ್ದಾರೆ. ಪಾರ್ಕಿಂಗ್ ಏರಿಯಾ ಸೇರಿದಂತೆ ಜನರು ಓಡಾಡದ ಕಟ್ಟಡದ ಮೂಲೆಗಳಲ್ಲಿ ಬುರ್ಖಾದ ಮರೆಯಲ್ಲಿ ಮೈಮರೆಯುವ ಕೆಲಸ ಆಗುತ್ತಿದೆ.

ಈ ಬಗ್ಗೆ ಹಲವು ಬಾರಿ ಪಡ್ಡೆ ಹುಡುಗಿಯರು ಸಿಕ್ಕಿಬಿದ್ದಿದ್ದು ಅವರ ಮನೆಯವರಿಗೂ ಎಚ್ಚರಿಕೆ ನೀಡಿದ್ದೇವೆ. ಆದರೂ ಹುಡುಗಿಯರು ಸುಧಾರಣೆ ಆಗಿಲ್ಲ. ಇನ್ಮುಂದೆ ನಾವು ಬಿಡೋದಿಲ್ಲ. ಧರ್ಮದೇಟು ಕೊಟ್ಟೇ ಕಳಿಸುತ್ತೇವೆ. ಈ ಬಗ್ಗೆ ಪೋಷಕರಿಗೂ ಎಚ್ಚರಿಕೆ ಕೊಡುತ್ತಿದ್ದೇವೆ. ಕಾಲೇಜಿಗೆ ಹೋಗುವ ಮಕ್ಕಳು ಎಷ್ಟೊತ್ತಿಗೆ ಹೋಗುತ್ತಾರೆ, ಎಷ್ಟು ಗಂಟೆಗೆ ಮರಳುತ್ತಾರೆ ಎಂಬ ಬಗ್ಗೆ ನಿಗಾ ಇಡಬೇಕು. ಹುಡುಗಿಯರ ಚಲನವಲನದ ಬಗ್ಗೆ ಪರಿಶೀಲನೆ ಮಾಡಿ. ಆಬಳಿಕ ಎಂಡಿಎಫ್ ಸಂಘಟನೆಯ ಕೈಗೆ ಸಿಕ್ಕಿಬಿದ್ದು ಮಾನ ಹರಾಜು ಆದಲ್ಲಿ ನಾವು ಜವಾಬ್ದಾರಿಯಲ್ಲ. ಪೋಷಕರೇ ಮತ್ತು ಹುಡುಗಿಯರೇ ಎಚ್ಚತ್ತುಕೊಳ್ಳಿ ಎಂದು ಎಚ್ಚರಿಕೆ ನೀಡಲಾಗಿದೆ.

ಆದರೆ ಇದು ಯಾರನ್ನು ಉದ್ದೇಶಿಸಿ ಎಚ್ಚರಿಕೆ ನೀಡಿದ್ದಾರೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಿಲ್ಲ. ಬುರ್ಖಾದ ಮರೆಯಲ್ಲಿ ಅನೈತಿಕ ಕೆಲಸ ಮಾಡುವ ಮಂದಿ ಯಾರು ಎನ್ನುವುದನ್ನೂ ಹೇಳಿಲ್ಲ. ಒಟ್ಟಿನಲ್ಲಿ ಮುಸ್ಲಿ ಡಿಫೆನ್ಸ್ ಫೋರ್ಸ್ ಹೆಸರಲ್ಲಿ ಮಂಗಳೂರಿನಲ್ಲಿ ಹೊಸತೊಂದು ಟೀಮ್ ರೆಡಿಯಾಗ್ತಿದೆ ಅನ್ನುವುದು ವಾಟ್ಸಪ್ ಜಾಲತಾಣದಿಂದ ಗೊತ್ತಾಗಿದೆ. ಇತ್ತೀಚೆಗೆ ಮಂಗಳೂರಿನ ಫೋರಂ ಫಿಜಾ ಮಾಲ್ ನಲ್ಲಿ ಬುರ್ಖಾ ಧರಿಸಿದ್ದ ಹುಡುಗಿಯ ಜೊತೆ ಯುವಕನೊಬ್ಬ ರೊಮ್ಯಾನ್ಸ್ ಮಾಡಿದ್ದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಾಡಹಗಲೇ ಮಾಲ್ ಮೂಲೆಯಲ್ಲಿ ಮೈಮರೆತ ಹುಡುಗ- ಹುಡುಗಿಯ ಬಗ್ಗೆ ಭಾರೀ ಆಕ್ರೋಶವೂ ಕೇಳಿಬಂದಿತ್ತು.

Mangalore Defense Force a new organization created for Moral policing in Malls, WhatsApp messages leaked. The group has threatened Assault on muslin girls who are wearing hijab and are involved in love relationships.