ಬ್ರೇಕಿಂಗ್ ನ್ಯೂಸ್
07-02-22 08:01 pm Mangalore Correspondent ಕರಾವಳಿ
ಮಂಗಳೂರು, ಫೆ.7 : ಹಿಜಾಬ್ ವಿಚಾರದಲ್ಲಿ ಆಗಿರುವ ಬೆಳವಣಿಗೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನ ಆಗುತ್ತಿದೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಧಾರ್ಮಿಕ ಭಾವನೆಯನ್ನು ಕೆದಕುತ್ತಿರುವುದು ಸರಿಯಲ್ಲ. ಸಂಪ್ರದಾಯವನ್ನು ಬದಲಾಯಿಸಲು ಯತ್ನಿಸುತ್ತಿರುವುದು ಅವಮಾನಕಾರಿ. ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳನ್ನು ಜಾತಿ ಧರ್ಮದಿಂದ ವಿಭಜಿಸುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್, ಕರಾವಳಿಗೆ ದೊಡ್ಡ ಇತಿಹಾಸ ಇದೆ, ದೇವಾಲಯಗಳು, ಶಿಕ್ಷಣ ಸಂಸ್ಥೆಗಳು ಇರುವುದರಿಂದ ದೇಶಾದ್ಯಂತದ ಜನರು ಇಲ್ಲಿಗೆ ಆಗಮಿಸುತ್ತಾರೆ. ದೇಶ- ವಿದೇಶಕ್ಕೆ ಮಾನವ ಸಂಪನ್ಮೂಲವನ್ನು ಪೂರೈಸುತ್ತಿರುವ ಕರ್ನಾಟಕದ ಕರಾವಳಿ ಬೇಡದ ವಿಚಾರಕ್ಕೆ ಸುದ್ದಿಯಾಗುತ್ತಿರುವುದು ವಿಷಾದನೀಯ. ಜಗತ್ತಿನಲ್ಲಿ ಈ ಬೆಳವಣಿಗೆ ಬಗ್ಗೆ ಜನಸಾಮಾನ್ಯರು ಪ್ರಶ್ನೆ ಮಾಡುತ್ತಿರುವುದು ನಮಗೆಲ್ಲ ಅವಮಾನ. ಈಗಾಗ್ಲೇ ಹಿಜಾಬ್ ವಿಚಾರ ಕೋರ್ಟ್ ಕಟಕಟೆ ಏರಿದೆ.
ಕೋರ್ಟಿನಲ್ಲಿ ಏನು ತೀರ್ಪು ಬರುತ್ತದೋ ಅದಕ್ಕೆ ನಾವು ಬದ್ಧರಿದ್ದೇವೆ. ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ, ಧರ್ಮದ ಭಾವನೆ ಬಿತ್ತುವುದು, ಆಮೂಲಕ ಇಡೀ ದೇಶಕ್ಕೆ ವಿಷ ಬೀಜ ಬಿತ್ತುವುದನ್ನು ಖಂಡಿಸುತ್ತೇವೆ. ಇಡೀ ದೇಶದಲ್ಲಿ ಈ ಬಗ್ಗೆ ಪ್ರತಿಕ್ರಿಯೆಗಳು ಬರುತ್ತಿವೆ. ಇದರ ನಡುವೆ ಕೇಸರಿ ಶಾಲು ಯಾಕೆ ಬಂತು ಎನ್ನುವುದು ನಮಗೆಲ್ಲ ಗೊತ್ತಿದೆ. ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಮೊದಲು ನಾವು ದೇಶ ಉಳಿಸುವ ಬಗ್ಗೆ ಚಿಂತನೆ ಮಾಡಬೇಕಿದೆ. ಧರ್ಮದ ಹೆಸರಲ್ಲಿ ಸಮಾಜದಲ್ಲಿ ವಿಷ ಬೀಜ ಬಿತ್ತುವುದಲ್ಲ. ಹಣದುಬ್ಬರ, ಬೆಲೆಯೇರಿಕೆ. ತೆರಿಗೆ ಹೊರೆಯಿಂದಾಗಿ ಜನಸಾಮಾನ್ಯರು ಬೀದಿಗೆ ಬರುತ್ತಿದ್ದಾರೆ. ಕೊರೊನಾದಿಂದಾಗಿ ಬದುಕು ಕಳಕೊಂಡವರಿಗೆ ಬದುಕು ಕಟ್ಟುವ ಬಗ್ಗೆ ಯೋಚನೆ ಮಾಡಬೇಕಿದೆ ಎಂದು ಡಿಕೆ ಶಿವಕುಮಾರ್ ಸಲಹೆ ಮಾಡಿದರು.

ಕರಾವಳಿ ಅಂದರೆ ಜ್ಞಾನ ಭೂಮಿ. ಇಡೀ ದೇಶದಿಂದ ಲಕ್ಷಾಂತರ ಮಂದಿ ವಿದ್ಯೆಗಾಗಿ ಇಲ್ಲಿಗೆ ಬರುತ್ತಾರೆ. ದೇಶಕ್ಕೆ ಅತಿ ಹೆಚ್ಚು ವೈದ್ಯರು, ಇಂಜಿನಿಯರ್ ಗಳನ್ನು ಇಲ್ಲಿನ ಸಂಸ್ಥೆಗಳು ಕೊಡುತ್ತಿವೆ. ಆದರೆ ಕರಾವಳಿಯ ಜನರು ಉದ್ಯೋಗಕ್ಕಾಗಿ ಗಲ್ಫ್ ರಾಷ್ಟ್ರಗಳು, ಮುಂಬೈ, ಬೆಂಗಳೂರಿಗೆ ಹೋಗುತ್ತಾರೆ. ಅವರಿಗೆ ಉದ್ಯೋಗ ಸೃಷ್ಟಿಸಲು, ಜೀವನಕ್ಕೆ ದಾರಿ ಮಾಡುವ ಬದಲು ಧಾರ್ಮಿಕ ಭಾವನೆ ಕೆರಳಿಸಿ ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ. ಶಾಲೆ, ಕಾಲೇಜಿನಲ್ಲಿ ಯಾರನ್ನೂ ಭಿನ್ನವಾಗಿ ಕಾಣಲು ಸಾಧ್ಯವಿಲ್ಲ. ಒಬ್ಬೊಬ್ಬರು ತಮ್ಮ ನಂಬಿಕೆ ಪಾಲಿಸುತ್ತಾರೆ. ಯಾರೂ ನಿಮ್ಮ ಧರ್ಮ ಬದುಕಿ ಎಂದು ಹೇಳಲು ಬರುವುದಿಲ್ಲ. ಕಾನೂನು, ಪದ್ಧತಿ ಇದೆ. ಅದನ್ನು ಪಾಲಿಸುವುದರಲ್ಲಿ ತಪ್ಪೇನಿದೆ. ಇಲ್ಲದನ್ನು ಹುಟ್ಟುಹಾಕಿ ಚುನಾವಣೆಯಲ್ಲಿ ಸೋಲನ್ನು, ತಮ್ಮ ವೈಫಲ್ಯವನ್ನು ಮರೆಮಾಚಲು ಸಮಾಜದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ ಎಂದು ಡಿಕೆಶಿ ಹೇಳಿದರು.
ಸಚಿವ ಸುನಿಲ್ ಕುಮಾರ್, ಹಿಜಾಬ್ ಗೆ ಅವಕಾಶ ಕೊಡಲು ಭಾರತ ಹಿಂದು ರಾಷ್ಟ್ರ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಬಿಜೆಪಿ ನಾಯಕರು ಏನು ಮಾತನಾಡುವುದಿದ್ದರೂ, ತಮ್ಮ ಸಚಿವ ಸಂಪುಟದಲ್ಲಿ ಮಾತನಾಡಲಿ. ಅಧಿಕಾರ ಸ್ವೀಕರಿಸುವಾಗ ಮಾಡಿದ ಪ್ರಮಾಣ ವಚನಕ್ಕೆ ಬದ್ಧರಾಗಿರಲಿ. ಅವರು ತಮ್ಮ ಪ್ರಮಾಣ ವಚನದ ಸ್ವರೂಪವನ್ನು ಬದಲಾಯಿಸಿ ಈ ರೀತಿ ಮಾತನಾಡಲಿ. ಆ ಬಗ್ಗೆ ಉತ್ತರ ಕೊಡುತ್ತೇನೆ ಎಂದು ಹೇಳಿದರು.
ಹಿಜಾಬ್ ವಿಚಾರದಲ್ಲಿ ಎಸ್ ಡಿಪಿಐ ಕೈವಾಡವಿದೆ ಎಂದು ಕರಾವಳಿ ಕಾಂಗ್ರೆಸ್ ನಾಯಕರು ನಿಮಗೆ ವರದಿ ಕೊಟ್ಟಿದ್ದಾರಂತೆ ಎಂದು ಕೇಳಿದ ಪ್ರಶ್ನೆಗೆ, ಯಾರು ಕೂಡ ವರದಿ ಕೊಡುವ ಅಗತ್ಯವಿಲ್ಲ. ಯಾರೂ ವರದಿಯನ್ನೂ ಕೊಟ್ಟಿಲ್ಲ. ಇದು ಜನರ ಭಾವನೆಯನ್ನು ಕೆರಳಿಸಿ ಯುವಕರು, ವಿದ್ಯಾರ್ಥಿಗಳ ಮನಸ್ಸಲ್ಲಿ ವಿಷ ಬೀಜ ಬಿತ್ತುವ ಪ್ರಯತ್ನ. ಇದರ ಬಗ್ಗೆ ಮಾತನಾಡುವುದಿಲ್ಲ. ಪೋಷಕರು ಈ ವಿಚಾರದಲ್ಲಿ ಆತಂಕಗೊಂಡಿದ್ದಾರೆ ಎಂದು ಹೇಳಿದರು.
"The Hijab row is an insult to our country," said KPCC president D K Shivakumar here on Monday February 7. Addressing the media Shivakumar said, "Our coastal region has its own history with its culture and human resources. For long, it has been revered as an educational hub.
10-11-25 01:23 pm
Bangalore Correspondent
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm