ಬ್ರೇಕಿಂಗ್ ನ್ಯೂಸ್
27-01-22 11:50 am Mangalore Correspondent ಕರಾವಳಿ
Photo credits : Headline Karnataka
ಮಂಗಳೂರು, ಜ.27 : ಮರಕಡ ಶ್ರೀ ಗುರು ಪರಾಶಕ್ತಿ ಮಠದ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ(72) ಬುಧವಾರ ರಾತ್ರಿ ಹೃದಯಾಘಾತಕ್ಕೊಳಗಾಗಿ ವಿಧಿವಶರಾಗಿದ್ದಾರೆ.
ಮರಕಡದ ಮನೆಯಲ್ಲಿ ತಡರಾತ್ರಿ 11 ಗಂಟೆ ವೇಳೆಗೆ ಸ್ವಾಮೀಜಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸ್ವಾಮೀಜಿ ಮಂಗಳೂರಿನ ಮರಕಡ ಅಲ್ಲದೆ ಕೋಟೆಕಾರಿನ ಮಡ್ಯಾರಿನಲ್ಲೂ ಶ್ರೀ ಪರಾಶಕ್ತಿ ಕ್ಷೇತ್ರವನ್ನ ನಿರ್ಮಿಸಿದ್ದರು. ಕ್ಷೇತ್ರದಲ್ಲಿ ಕಪಿಲಾ ಎಂಬ ವಿಶಾಲವಾದ ಗೋ ಶಾಲೆಯನ್ನ ನಿರ್ಮಿಸಿ ಗೋವುಗಳಿಗೆ ಆಶ್ರಯ ಕಲ್ಪಿಸಿದ್ದರು. ಅಲ್ಲದೆ ಕೋಟೆಕಾರಿನ ನಡಾರ್ ಎಂಬಲ್ಲಿ ದೇವರ ಮನೆಯನ್ನೂ ಸ್ಥಾಪಿಸಿದ್ದರು.

ಸ್ವಾಮೀಜಿಯ ಮೃತದೇಹವನ್ನು ಇಂದು ಸಂಜೆ ಮಡ್ಯಾರಿನ ಪರಾಶಕ್ತಿ ಕ್ಷೇತ್ರ ಅಥವಾ ದೇವರ ಮನೆಗೆ ತರುವ ಸಾಧ್ಯತೆಗಳಿದ್ದು ಇಂದೇ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ನಡೆಯಲಿದೆ ಎಂದು ಅವರ ಭಕ್ತರು ತಿಳಿಸಿದ್ದಾರೆ.

ಮರಕಡದಲ್ಲಿ ನೂತನ ಶ್ರೀ ಗುರು ಪರಾಶಕ್ತಿ ಮಠ ನಿರ್ಮಾಣವಾಗಿದ್ದು ಇದೇ ಫೆ.16 ರಂದು ಸ್ವಾಮೀಜಿಗಳ ಮಠ ಪ್ರವೇಶ ಕಾರ್ಯಕ್ರಮ ನಿಗದಿಯಾಗಿತ್ತು. ಮೇ 8 ಕ್ಕೆ ವಿಜೃಂಭಣೆಯ ಬ್ರಹ್ಮಕಲಶದ ಕಾರ್ಯಕ್ರಮವೂ ನಿಗದಿಯಾಗಿತ್ತು. ಬ್ರಹ್ಮಕಲಶದ ಮೊದಲೇ ಸ್ವಾಮೀಜಿ ಇಹಲೋಕ ತ್ಯಜಿಸಿದ್ದು ಅವರ ಭಕ್ತ ವರ್ಗದವರನ್ನು ಶೋಕಕ್ಕೀಡು ಮಾಡಿದೆ. ಸ್ವಾಮೀಜಿಗಳು ತನ್ನ ಪೂರ್ವಾಶ್ರಮದ ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನ ಅಗಲಿದ್ದಾರೆ.
Marakada Mutt swami Narendranath Yogi (72) dies of heart attack. He died last night at the Mutt around 11 PM.
13-10-26 03:49 pm
HK News Staffer
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 02:54 pm
HK News Staffer
ಮೈಸೂರು ಕಂಬಳಕ್ಕೆ ಕೋಣ ತರಬೇಡಿ.. ಕುಡಿಯಲೇ ನೀರಿಲ್ಲ,...
12-10-26 10:01 pm
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm