ಬ್ರೇಕಿಂಗ್ ನ್ಯೂಸ್
10-01-22 04:18 pm Mangalore Correspondent ಕರಾವಳಿ
Photo credits : Headline Karnataka
ಮಂಗಳೂರು, ಜ.10 : ಆನ್ಲೈನ್ ಲೋನ್ ಆ್ಯಪ್ ನಲ್ಲಿ ಸಾಲ ಪಡೆದು ಕಿರುಕುಳಕ್ಕೆ ಒಳಗಾದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಬಳಿಯ ಪಕ್ಷಿಕೆರೆಯಲ್ಲಿ ನಡೆದಿದೆ.
ಕಿನ್ನಿಗೋಳಿ ಬಳಿಯ ಪಕ್ಷಿಕೆರೆ ನಿವಾಸಿ ಸುಶಾಂತ್ (26) ಮೃತ ಯುವಕ. ಸುರತ್ಕಲ್ ಬಳಿ ಸಿಮೆಂಟ್ ಅಂಗಡಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು ಇಂದು ಬೆಳಗ್ಗೆ ಕಚೇರಿಗೆ ಬಂದಿದ್ದಾಗ ಟವೆಲ್ ಶಾಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾನೆ.
ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು ತುಳುವಿನಲ್ಲಿ ಆತ್ಮಹತ್ಯೆ ಬಗ್ಗೆ ಬರೆದುಕೊಂಡಿದ್ದಾನೆ. "ಸಾರಿ.. ಮಾತೆರೆಗ್ಲಾ.. ಎಂಕ್ ಏರೆನಲಾ ನಂಬಿಕೆ ಒರಿಪಾಯೆರೆ ಆಯಿಜಿ. ಕಾಸ್ ದ ವಿಷಯಡ್ ತೊಂದರೆ ಆಂಡ್. ಆನ್ಲೈನ್ ಡು ಲೋನ್ ದ ಬಗೆಟ್ ಕಾಲ್ ಮಂತೆರುಂಡ ಆತೆ ಡೆತ್ ಆತೆ ಪನ್ಲೆ.. ರಿಯಲಿ ಸಾರಿ ಫಾರ್ ಆಲ್.. (ಕ್ಷಮಿಸಿ, ನನಗೆ ನಂಬಿಕೆ ಉಳಿಸಲಿಕ್ಕೆ ಸಾಧ್ತವಾಗಲಿಲ್ಲ. ಹಣದ ವಿಷಯದಲ್ಲಿ ತೊಂದರೆ ಆಯ್ತು. ಆನ್ಲೈನಲ್ಲಿ ಸಾಲದ ಬಗ್ಗೆ ಕೇಳಿದರೆ ಸತ್ತಿದ್ದಾನೆಂದು ತಿಳಿಸಿ) ಎಂದು ಪತ್ರದಲ್ಲಿ ಬರೆದಿದ್ದಾನೆ.
ಸುಶಾಂತ್ ಹೆತ್ತವರು 15 ವರ್ಷಗಳ ಹಿಂದೆ ತೀರಿಕೊಂಡಿದ್ದು ಅಣ್ಣ ಅಶ್ವಿತ್ ಜೊತೆಗೆ ವಾಸವಿದ್ದ. ಈಗ ಯಾವ ಕಾರಣಕ್ಕಾಗಿ ಹಣ ಸಾಲ ಪಡೆದಿದ್ದ ಅನ್ನುವುದು ಗೊತ್ತಾಗಿಲ್ಲ. ಆನ್ಲೈನ್ ಏಪ್ ನಲ್ಲಿ ಸಾಲ ಪಡೆದು ಹಿಂತಿರುಗಿಸಲಾಗದೆ ಕಿರುಕುಳಕ್ಕೆ ಒಳಗಾಗಿ ಸಾವಿಗೆ ಶರಣಾಗಿದ್ದಾನೆ. ಒಂದು ತಿಂಗಳ ಅಂತರದಲ್ಲಿ ಕರಾವಳಿಯಲ್ಲಿ ಎರಡನೇ ವ್ಯಕ್ತಿ ಆನ್ಲೈನ್ ಸಾಲ ಪಡೆದು ಜೀವ ತೆತ್ತಿದ್ದಾನೆ. ಇತ್ತೀಚೆಗೆ ಕುಂದಾಪುರದಲ್ಲಿ ಸಾಫ್ಟ್‌ವೇರ್ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
Mangalore blackmail by Bank Loan App 26-year-old ends life at workplace. Facing a financial crisis, a youth allegedly ended his life hanging at his workplace. The deceased is identified as Sushant (26), son of late Dinesh. He was a resident of Pakshikere, Kinnigoli. He ended his life at the office of Sunrise Corporation in Kulai under Surathkal
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm