ಬ್ರೇಕಿಂಗ್ ನ್ಯೂಸ್
24-12-21 05:39 pm HK Desk news ಕರಾವಳಿ
Photo credits : Headline Karnataka
ಉಳ್ಳಾಲ, ಡಿ.24 : ಕೋಟೆಕಾರು ಪ.ಪಂ ವ್ಯಾಪ್ತಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರೂ, ಅಂತಿಮ ಮತದಾರ ಪಟ್ಟಿಯಿಂದ ನಕಲಿ ಮತದಾರರ ಹೆಸರು ತೆರವು ಆಗಿಲ್ಲ.
ಇದೇ ಡಿ.27 ರಂದು ಕೋಟೆಕಾರು ಪಟ್ಟಣ ಪಂಚಾಯತ್ ಚುನಾವಣೆ ನಡೆಯಲಿದೆ. ಈ ನಡುವೆ ಅಂತಿಮ ಮತದಾರ ಪಟ್ಟಿ ಬಿಡುಗಡೆಯಾಗಿದ್ದು ಕೋಟೆಕಾರು ಪಟ್ಟಣದ ವಾರ್ಡ್ ನಂಬರ್ 6 (ಬಗಂಬಿಲ, ವೈದ್ಯನಾಥ ನಗರ) ಮತಗಟ್ಟೆ ಸಂಖ್ಯೆ 154 ರಲ್ಲೇ ಮೂರು ವೈದ್ಯಕೀಯ ಕಾಲೇಜುಗಳಿಗೆ ಸೇರಿದ 300 ಮಂದಿ ಹೊರ ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳ ಹೆಸರನ್ನ ಮತಪಟ್ಟಿಗೆ ಸೇರಿಸಿರುವುದು ಕಂಡುಬಂದಿದೆ.
ವಿಶೇಷ ಅಂದ್ರೆ 300 ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ 60 ರಷ್ಟು ಮಂದಿಯಲ್ಲಿ ತಂದೆಯ ಹೆಸರು ಬಿಟ್ಟರೆ ವಿಳಾಸ, ಡೋರ್ ನಂಬರ್ ನಮೂದಿಸಿಲ್ಲ. ಉಳಿದ ವೈದ್ಯಕೀಯ ವಿದ್ಯಾರ್ಥಿ ಮತದಾರರ ದಾಖಲೆಯಲ್ಲಿ ಹೆಸರು ಮತ್ತು ಹಾಸ್ಟೆಲ್ ಕೊಠಡಿ ಸಂಖ್ಯೆಯನ್ನ ನಮೂದಿಸಲಾಗಿದೆ.
ಈ ಬಗ್ಗೆ ಎಂಟು ತಿಂಗಳ ಹಿಂದೆಯೇ ಬಿಜೆಪಿ ಮುಖಂಡ, ವಕೀಲರೂ ಆಗಿರುವ ಮೋಹನರಾಜ್ ಕೋಟೆಕಾರ್ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಲಿಖಿತ ದೂರು ನೀಡಿದ್ದು ಹೊರ ರಾಜ್ಯದ ವಿದ್ಯಾರ್ಥಿಗಳನ್ನು ತಾತ್ಕಾಲಿಕ ನೆಲೆಯಲ್ಲಿ ಮತದಾರ ಪಟ್ಟಿಗೆ ಸೇರ್ಪಡೆಗೊಳಿಸಿದ ಬಗ್ಗೆ ಮತ್ತು ಅದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ದೂರಿನ ಬಗ್ಗೆ ಚುನಾವಣಾ ಆಯೋಗದಿಂದ ದ.ಕ ಜಿಲ್ಲಾಧಿಕಾರಿಯವರಿಗೆ ತನಿಖೆ ನಡೆಸಿ, ವರದಿ ನೀಡುವಂತೆ ಕಳೆದ ಆಗಸ್ಟ್ 8ರಂದು ಆದೇಶ ಮಾಡಲಾಗಿತ್ತು. ಜಿಲ್ಲಾಧಿಕಾರಿ ಈ ಬಗ್ಗೆ ಸಹಾಯಕ ಆಯುಕ್ತರಿಗೆ ವರದಿ ನೀಡಲು ಸೂಚಿಸಿದ್ದರು. ಸಹಾಯಕ ಆಯುಕ್ತರು ತನ್ನ ಕೆಲಸವನ್ನು ಆಗಸ್ಟ್ 16 ರಂದು ತಹಶೀಲ್ದಾರ್ ಗೆ ವರ್ಗಾಯಿಸಿ ಮಗುಮ್ಮಾಗಿ ಕುಳಿತಿದ್ದಾರೆ. ಆದರೆ ತನಿಖೆ ನಡೆಸಲು ಸೂಚಿಸಿ ಮೂರು ತಿಂಗಳು ಕಳೆದರೂ ತಹಸೀಲ್ದಾರ್ ಜಿಲ್ಲಾಧಿಕಾರಿಗೆ ವರದಿ ಕೊಟ್ಟಿಲ್ಲ.
ಚುನಾವಣೆ ವರ್ಷದಲ್ಲಿ ಹೆಸರು ತೆಗೆದು ಹಾಕಲು ಆಗಲ್ಲ !
ಈ ಬಗ್ಗೆ ತಹಸೀಲ್ದಾರ್ ಗುರುಪ್ರಸಾದ್ ಅವರಲ್ಲಿ ಕೇಳಿದರೆ ಚುನಾವಣೆ ವರ್ಷದಲ್ಲಿ ಮತದಾರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಸಾಧ್ಯವಿಲ್ಲ. ಅವರೆಲ್ಲ ಏಳು ವರ್ಷ ಹಿಂದೆಯೇ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ. ಇವರ ದೂರಿನಲ್ಲಿ ಸತ್ಯಾಂಶ ಇದ್ದರೆ ಮುಂದಿನ ಅಸೆಂಬ್ಲಿ ಚುನಾವಣೆ ವೇಳೆಗೆ ನಕಲಿ ಮತದಾರರು ಅಂತ ಕಂಡುಬಂದರೆ ತೆಗೆದು ಹಾಕುವುದಾಗಿ ನಿರ್ಲಜ್ಜವಾಗಿ ಹೇಳುತ್ತಾರೆ. ಅಕ್ರಮ ಮತದಾರರು ಸೇರ್ಪಡೆ ಆಗಿದ್ದಾರೆ ಎಂದು ಹೇಳಿದರೂ, ಈ ರೀತಿ ವರ್ತಿಸುವ ಅಧಿಕಾರಿಗೆ ಏನನ್ನಬೇಕು.
ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ 6 ನೇ ವಾರ್ಡ್ ಒಂದರಲ್ಲೇ 3 ಮೆಡಿಕಲ್ ಕಾಲೇಜ್ ಗಳಿದ್ದು ಸುಮಾರು 5000 ವಿದ್ಯಾರ್ಥಿಗಳು ವಾಸ್ತವ್ಯ ಇದ್ದಾರೆ. ಇವರೆಲ್ಲರಿಗೂ ಚುನಾವಣೆಯಲ್ಲಿ ಮತ ಹಾಕಲು ಅವಕಾಶ ನೀಡಿದಲ್ಲಿ ಸ್ಥಳೀಯರು ಮತದಾನ ನಡೆಸದೇ ಇರುವುದೇ ಸೂಕ್ತ ಎಂದು ಅಲ್ಲಿನ ಕೆಲವು ನಿವಾಸಿಗಳು ಅಭಿಪ್ರಾಯ ಪಟ್ಟಿದ್ದಾರೆ. 6ನೇ ವಾರ್ಡಿನಲ್ಲಿ ಅಲ್ಲಿನ ನಿವಾಸಿಗಳ ಮತಗಳು ಇರೋದು 550 ಮಾತ್ರ. ಈಗ ಹೆಚ್ಚುವರಿಯಾಗಿ 300 ಮತಗಳು ಸೇರಿದ್ದು ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಮತ ಚಲಾವಣೆಗೆ ಅವಕಾಶ ಕೊಡಲಾಗಿದೆ.
ಚುನಾವಣಾ ಆಯೋಗದ ನೀತಿಯ ಪ್ರಕಾರ ಒಬ್ಬನಿಗೆ ದೇಶದ ಯಾವುದೇ ಪ್ರದೇಶದಲ್ಲಿದ್ದರೂ ಒಂದೇ ಮತದಾನದ ಗುರುತು ಚೀಟಿ ಇರಬೇಕು. ಆದರೆ ಈ ವಿದ್ಯಾರ್ಥಿಗಳು ಕೇರಳದಲ್ಲಿರುವ ತಮ್ಮ ಮೂಲ ಗುರುತುಚೀಟಿಯನ್ನು ಹಿಂತಿರುಗಿಸಿದ ಬಗ್ಗೆ ದಾಖಲೆ ಇಲ್ಲ. ಮೂಲ ವಾಸ್ತವ್ಯದ ಗುರುತು ಚೀಟಿಯಲ್ಲಿ ತಮ್ಮ ಹೆಸರನ್ನು ಅಳಿಸಿ ಹಾಕಿದ ಬಗ್ಗೆ ದಾಖಲೆ ಪತ್ರವನ್ನೂ ಹಾಜರು ಪಡಿಸಿಲ್ಲ. ಕಾನೂನು ಬಾಹಿರವಾಗಿ ಮತದಾರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶ ಇದೆ. ಆ ಕೆಲಸವನ್ನು ತಹಸೀಲ್ದಾರ್ ಅಥವಾ ಸ್ಥಳೀಯ ಚುನಾವಣಾಧಿಕಾರಿಗಳು ಮಾಡಬೇಕು ಎಂದು ವಕೀಲ ಮೋಹನ್ ರಾಜ್ ಒತ್ತಾಯಿಸಿದ್ದಾರೆ.
Mangalore Kotekar Gram Panchayat issues voter ID with fake address to students of different state. More than 300 students have been issued voter ID by panchayat itself creating fake addresses. More than 60 students have not mentioned accurate address as well as door number except their fathers name. Advocate Mohanraj Kotekar has filed a complaint to Election commission in regards to this.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:05 pm
Mangalore Correspondent
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
Congress, Mangalore: ಸಿದ್ದರಾಮಯ್ಯ ಆಡಳಿತದಲ್ಲೇ ದ...
26-07-25 10:44 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm