ಬ್ರೇಕಿಂಗ್ ನ್ಯೂಸ್
24-11-21 09:33 am HK news Desk ಕರಾವಳಿ
ಉಡುಪಿ, ನ. 24: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಒಂದಕ್ಕೆ ಬಂಪರ್ ಲಾಟರಿ ಸಿಕ್ಕಂತಾಗಿದೆ. ಅದರಲ್ಲಿದ್ದ ಮೀನುಗಾರರ ತಂಡಕ್ಕೆ ಅಪರೂಪದ ಮೀನು ಬಲೆಗೆ ಬಿದ್ದಿದ್ದು ಆ ಒಂದು ಮೀನು ಬರೋಬ್ಬರಿ ಒಂದು ಲಕ್ಷದ ಎಂಬತ್ತು ಸಾವಿರ ರೂಪಾಯಿಗೆ ಮಾರಾಟವಾಗಿ ಮೀನುಗಾರರನ್ನೇ ಹುಬ್ಬೇರಿಸಿದೆ.
ಮಲ್ಪೆ ಕಡಲ ಕಿನಾರೆಯಿಂದ ಸೋಮವಾರ ರಾತ್ರಿ ಮೀನುಗಾರಿಕೆಗೆ ತೆರಳಿದ್ದ ಶಾನ್ ರಾಜ್ ತೊಟ್ಟಂ ಎಂಬವರ ಬಲರಾಮ್ ಎಂಬ ಹೆಸರಿನ ಬೋಟ್‌ಗೆ ಅದೃಷ್ಟ ಖುಲಾಯಿಸಿತ್ತು. ಮೀನುಗಾರರು ಬೀಸಿದ ಬಲೆಗೆ 18 ಕೆಜಿ ತೂಕದ ಅಪರೂಪದ ಗೋಳಿ ಅನ್ನುವ ಹೆಸರಿನ ಮೀನು ಲಭ್ಯವಾಗಿದ್ದು, ಈ ಮೀನು ಬರೋಬ್ಬರಿ 1,80,200 ರೂಪಾಯಿಗೆ ಮಾರಟವಾಗಿದೆ. ಮಲ್ಪೆ ಬಂದರಿನಲ್ಲಿ ಮೀನಿನ ಹರಾಜು ಪ್ರಕ್ರಿಯೆ ನಡೆದಿದ್ದು, ನೂರಾರು ಮಂದಿಯ ಕುತೂಹಲಕ್ಕೆ ಸಾಕ್ಷಿಯಾಗಿದೆ.
ಪ್ರತಿ ಕೆಜಿಗೆ 9060 ರೂ.ನಂತೆ ಗೋಳಿ ಮೀನು ಮಾರಾಟವಾಗಿದೆ. ಇದು ಅಪರೂಪದ ಮೀನಾಗಿದ್ದು, ಅತೀ ಹೆಚ್ಚಾಗಿ ಔಷಧಿ ತಯಾರಿಕೆಗೆ ಬಳಸಲಾಗುತ್ತದೆ. ಮಧುಮೇಹ, ಅಸ್ತಮಾದಂತಹ ಖಾಯಿಲೆಗಳ ಔಷಧಿಗೆ ಈ ಮೀನನ್ನು ಬಳಸಲಾಗುತ್ತದೆ. ಈ ಮೀನು ಕಲ್ಲು ಬಂಡೆಗಳ ಅಡಿಯಲ್ಲಿ ವಾಸವಾಗಿದ್ದು ಮೀನುಗಾರರ ಬಲೆಗೆ ಬೀಳೋದು ಅಪರೂಪ ಎನ್ನಲಾಗಿದೆ.
ಮಲ್ಪೆ ಬಂದರಿನಿಂದ ಹರಾಜಿನಲ್ಲಿ ತೆಗೆದುಕೊಂಡ ಈ ಮೀನನ್ನು ಮುಂಬೈ ಮೀನುಗಾರಿಕಾ ಬಂದರಿನಲ್ಲಿ ಮಾರಾಟ ಮಾಡಲಾಗುತ್ತದೆ. ಮುಂಬೈಯಲ್ಲಿ ಈ ಮೀನಿನ ದರ ಪ್ರತೀ ಕೆಜಿಗೆ ಹದಿನೈದು ಸಾವಿರದಿಂದ ಹದಿನೆಂಟು ಸಾವಿರದ ವರೆಗೂ ಹೋಗಲಿದೆ ಎಂದು ಮೀನುಗಾರರು ಹೇಳುತ್ತಾರೆ. ಮುಂಬೈನಿಂದ ನೇರ ಔಷಧ ಕಂಪೆನಿಗಳೇ ಈ ಮೀನನ್ನು ಖರೀದಿ ಮಾಡಲಿದ್ದು ಭಾರೀ ಬೆಲೆ ಸಿಗಲಿದೆಯಂತೆ.
ಉಡುಪಿಯ ಮಲ್ಪೆಯಲ್ಲಿ ಈ ರೀತಿಯ ಮೀನು ದೊರಕಿರೋದು ಇದೇ ಮೊದಲು. ಈ ಹಿಂದೆ ಗೋಳಿ ಜಾತಿಯ ಸಣ್ಣ ಮೀನುಗಳು ಬಲೆಗೆ ಬಿದ್ದಿದ್ದು ಪ್ರಥಮ ಬಾರಿಗೆ ಭಾರೀ ತೂಕದ ಮೀನು ಲಭ್ಯವಾಗಿದೆ. ಮಲ್ಪೆ ಬಂದರಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ದರಕ್ಕೆ ಮೀನು ಮಾರಾಟವಾಗಿದೆ.
Udupi Maple Fishermen sells fish 18 kilo fish for 1.18 lakhs. The fish was auctioned by Mumbai fishermen for 15 thousand per kilo ane later it was sold for 1.18 lakhs.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 10:01 pm
HK News Staffer
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm