ಬ್ರೇಕಿಂಗ್ ನ್ಯೂಸ್
27-05-26 01:30 pm HK News Staffer ಕ್ರೈಂ
ಸಿಂಗಾಪುರ, ಮೇ 27: ಭಾರತದ ಒಂದು ಕಾಲದ ಅತ್ಯಂತ ಯಶಸ್ವಿ ಎಡ್ಟೆಕ್ ಸಂಸ್ಥೆಗಳಲ್ಲೊಂದು ಆಗಿದ್ದ ‘ಬೈಜುಸ್’ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರ ನ್ಯಾಯಾಲಯ ಭಾರೀ ಆಘಾತ ನೀಡಿದೆ. ನ್ಯಾಯಾಲಯ ನಿಂದನೆ ಆರೋಪದಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿರುವ ಕೋರ್ಟ್, ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಈ ತೀರ್ಪು ಈಗಾಗಲೇ ಆರ್ಥಿಕ ಬಿಕ್ಕಟ್ಟು, ಸಾಲದ ಒತ್ತಡ ಮತ್ತು ವಿದೇಶಿ ಹೂಡಿಕೆದಾರರ ಕಾನೂನು ಹೋರಾಟಗಳಿಂದ ಸಂಕಷ್ಟದಲ್ಲಿರುವ ಬೈಜು ರವೀಂದ್ರನ್ ಅವರಿಗೆ ಮತ್ತಷ್ಟು ದೊಡ್ಡ ಹೊಡೆತವಾಗಿ ಪರಿಣಮಿಸಿದೆ.
ಸಿಂಗಾಪುರ ನ್ಯಾಯಾಲಯದ ಪ್ರಕಾರ, ಬೈಜು ರವೀಂದ್ರನ್ ಅವರು ತಮ್ಮ ಆಸ್ತಿ ಮತ್ತು ಕಂಪನಿ ಮಾಲೀಕತ್ವಕ್ಕೆ ಸಂಬಂಧಿಸಿದಂತೆ 2024ರ ಏಪ್ರಿಲ್ನಿಂದ ನೀಡಲಾಗಿದ್ದ ಹಲವು ನ್ಯಾಯಾಲಯ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಪಾಲಿಸಿಲ್ಲ. ನ್ಯಾಯಾಲಯದ ಸೂಚನೆಗಳನ್ನು ನಿರ್ಲಕ್ಷಿಸಿರುವುದೇ ಶಿಕ್ಷೆಗೆ ಪ್ರಮುಖ ಕಾರಣ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಇದೀಗ ಅವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸಂಬಂಧಿತ ಅಧಿಕಾರಿಗಳ ಮುಂದೆ ಶರಣಾಗುವಂತೆ ಆದೇಶಿಸಲಾಗಿದ್ದು, ಜೊತೆಗೆ 90 ಸಾವಿರ ಸಿಂಗಾಪುರ ಡಾಲರ್ ಕಾನೂನು ವೆಚ್ಚವನ್ನೂ ಪಾವತಿಸಲು ಸೂಚಿಸಲಾಗಿದೆ.
ಪ್ರಕರಣದಲ್ಲಿ ‘ಬಿಯರ್ ಇನ್ವೆಸ್ಟ್ಕೋ ಪ್ರೈವೇಟ್ ಲಿಮಿಟೆಡ್’ ಕಂಪನಿಯ ನಿಜವಾದ ಹಾಗೂ ಕಾನೂನುಬದ್ಧ ಮಾಲೀಕತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಕಾನೂನು ಹೋರಾಟದಲ್ಲಿ ಕತಾರ್ ಹೋಲ್ಡಿಂಗ್ಸ್ ಪರವಾಗಿ ‘ಡ್ರೂ ಆ್ಯಂಡ್ ನೇಪಿಯರ್’ ಕಾನೂನು ಸಂಸ್ಥೆ ಹಾಗೂ ಬೈಜುಸ್ ಇನ್ವೆಸ್ಟ್ಮೆಂಟ್ಸ್ ಪರವಾಗಿ ‘ಫೆರ್ವೆಂಟ್ ಚೇಂಬರ್ಸ್’ ವಕಾಲತ್ತು ವಹಿಸಿವೆ.
ಇನ್ನೊಂದೆಡೆ, ಅಮೆರಿಕದ ಸಾಲದಾತರು ಸುಮಾರು 1.2 ಬಿಲಿಯನ್ ಡಾಲರ್ ಸಾಲ ಡೀಫಾಲ್ಟ್ ಪ್ರಕರಣದಲ್ಲಿ ಹಣ ವಸೂಲಿ ಮಾಡಲು ಬೈಜುಸ್ ವಿರುದ್ಧ ತೀವ್ರ ಕಾನೂನು ಹೋರಾಟ ಮುಂದುವರಿಸಿದ್ದಾರೆ. ಕತಾರ್ ಹೂಡಿಕೆ ಪ್ರಾಧಿಕಾರದ ಅಂಗಸಂಸ್ಥೆಯೂ ಸಿಂಗಾಪುರದಲ್ಲಿ ಪ್ರತ್ಯೇಕ ಪ್ರಕರಣ ಹೂಡಿರುವುದು ಬೈಜು ರವೀಂದ್ರನ್ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ.
ಒಂದು ಕಾಲದಲ್ಲಿ ಭಾರತೀಯ ಸ್ಟಾರ್ಟ್ಅಪ್ ಜಗತ್ತಿನ ಯಶಸ್ಸಿನ ಪ್ರತೀಕವಾಗಿ ಗುರುತಿಸಿಕೊಂಡಿದ್ದ ಬೈಜು ರವೀಂದ್ರನ್, ಇದೀಗ ಸಾಲ, ಕಾನೂನು ಪ್ರಕರಣಗಳು ಮತ್ತು ಜಾಗತಿಕ ಹೂಡಿಕೆದಾರರ ಒತ್ತಡಗಳಿಂದ ಗಂಭೀರ ಸಂಕಷ್ಟಕ್ಕೆ ಸಿಲುಕಿರುವುದು ಗಮನಾರ್ಹವಾಗಿದೆ.
ಈ ತೀರ್ಪಿನ ಕುರಿತು ಬೈಜು ರವೀಂದ್ರನ್ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ತೀರ್ಪು ಹೊರಬಿದ್ದ ವೇಳೆಗೆ ಅವರು ಸಿಂಗಾಪುರದಲ್ಲಿದ್ದಾರೆಯೇ ಅಥವಾ ಬೇರೆ ದೇಶದಲ್ಲಿದ್ದಾರೆಯೇ ಎಂಬುದೂ ಸ್ಪಷ್ಟವಾಗಿಲ್ಲ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am