ಬ್ರೇಕಿಂಗ್ ನ್ಯೂಸ್
23-10-21 01:45 pm Mangalore Reporter ಕರಾವಳಿ
ಮಂಗಳೂರು, ಅ.23 : ನಿಧಿ ಆಸೆಯಿಂದ ಕಳ್ಳರು ಪುರಾತನ ಹುತ್ತವೊಂದನ್ನು ಅಗೆದಿರುವ ಘಟನೆ ಕೋಣಾಜೆ ಬಳಿಯ ಇರಾದಲ್ಲಿ ನಡೆದಿದ್ದು ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಬಂಟ್ವಾಳ ತಾಲೂಕಿನ ಇರಾ ಶ್ರೀ ಕುಂಡಾವು ಸೋಮನಾಥೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಬಪ್ಪರ ಕಂಬಳದ ನಾಗಬನದ ಪಕ್ಕದ ಹುತ್ತವೊಂದರಲ್ಲಿ ಕಳ್ಳರು ನಿಧಿಯ ಆಸೆಯಿಂದ ಭೂಮಿಯನ್ನು ಸುಮಾರು ಹತ್ತು ಅಡಿ ಆಗೆದಿದ್ದಾರೆ.

ದೇವಸ್ಥಾನಕ್ಕೆ ಸಂಬಂಧಪಟ್ಟ ನಾಗಬನಕ್ಕೆ ನಾಗನಕಟ್ಟೆಯನ್ನು ಕಟ್ಟಲಾಗಿದೆ. ಕಳ್ಳರು ನಾಗನಕಟ್ಟೆಗೆ ಯಾವುದೇ ಹಾನಿಯನ್ನುಂಟು ಮಾಡಿಲ್ಲ. ಪ್ರಚಲಿತದಲ್ಲಿರುವಂತೆ ಈ ಭಾಗದಲ್ಲಿ ನಿಧಿ ಇದೆ ಎಂಬುದನ್ನು ಹಿಂದಿನ ಕಾಲದ ಜನರು ಆಡಿಕೊಳ್ಳುವುದನ್ನು ಕೇಳಿ ಅದು ಜನರ ಬಾಯಿಂದ ಕಿವಿಗೆ ಹರಡಿ ದುರಾಸೆಯಿಂದ ಕಳ್ಳರು ನಿಧಿ ಶೋಧ ನಡೆಸಿದ್ದಾರೆ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ದೇವಸ್ಥಾನ ಸಮಿತಿ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗಿದೆ.

ಇವೆಲ್ಲದರ ಜೊತೆಯಲ್ಲಿ ಇರಾ ಸಾಮರಸ್ಯದ ಗ್ರಾಮವಾಗಿದ್ದು ಈ ಘಟನೆಯನ್ನು ಯಾವುದೇ ಕಾರಣಕ್ಕೂ ಕೋಮು ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ಮುಂದುವರಿಸಬೇಕೆಂದು ಕ್ಷೇತ್ರದ ಸಮಿತಿ ಸದಸ್ಯರೊಬ್ಬರು ವಿನಂತಿಸಿಕೊಂಡಿದ್ದಾರೆ.
ನಾಗಬನದ ಆಸುಪಾಸಿನಲ್ಲಿ ಕಂಬಳ ಗದ್ದೆ ಇದ್ದು ಧಾರ್ಮಿಕ ನೆಲೆಗಟ್ಟಿನಲ್ಲಿ ಕಾರಣಿಕ ಬೀರುತ್ತಿರುವುದರಿಂದ ಅಲ್ಲೆಲ್ಲ ನಿಧಿ ಇರುತ್ತದೆ, ನಾಗ ಕಾವಲು ಕಾಯುತ್ತಾನೆ ಎಂಬ ಪ್ರತೀತಿ ಇದ್ದು ನಿಧಿ ಆಶೆಯಿಂದ ಕಳ್ಳರು ಭೂಮಿ ಅಗೆಯುವ ಪ್ರಕರಣ ಆಗಾಗ್ಗೆ ಕೇಳಿಬರುತ್ತಿದೆ. ನಿಧಿ ಸಿಗದೆ ನಿರಾಶರಾದರೂ ಭೂಮಿ ಅಗೆಯುವುದು ನಿಂತಿಲ್ಲ.
Mangalore Treasure hunt at Bantwal Ira Nagabana temple premises found.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 10:01 pm
HK News Staffer
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm