ಬ್ರೇಕಿಂಗ್ ನ್ಯೂಸ್
21-10-21 07:29 pm Mangalore Reporter ಕರಾವಳಿ
ಉಳ್ಳಾಲ, ಅ.21: ಬಡವನದ್ದಾದರೆ ಮರಳು, ಅದೇ ಕಳ್ಳ ಸಿರಿವಂತನಾಗಿದ್ರೆ ಮರಳೇ ಜೇಡಿ ಮಣ್ಣು ಆಗಿಬಿಡುತ್ತದೆ. ಹೌದು.. ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಸದಸ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತರಾಗಿರುವ ಬಿ.ಎಂ.ಫಾರೂಕ್ ಅವರ ರೆಸಾರ್ಟ್ ನಿಂದ ಹೊರ ಹೋಗುತ್ತಿದ್ದ ಅಕ್ರಮ ಮರಳು ಲಾರಿಯನ್ನ ಉಳ್ಳಾಲ ಪೊಲೀಸರು ವಶಪಡಿಸಿದ್ದು, ಅದರಲ್ಲಿದ್ದ ಮರಳನ್ನ ಜೇಡಿ ಮಣ್ಣೆಂದು ಫಾರೂಕ್ ಬಿಂಬಿಸಲು ಹೊರಟ್ಟಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.
ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ಕಡಲ ತೀರದ ಮರಳನ್ನು ನಿರಂತರವಾಗಿ ಕಳ್ಳತನ ಮಾಡಲಾಗುತ್ತಿದೆ. ಎರಡು ದಿನಗಳ ಹಿಂದೆ ಸರಿರಾತ್ರಿಯಲ್ಲಿ ಮಂಗಳೂರು ನಗರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಆಗಿರುವ ಹರಿರಾಂ ಶಂಕರ್ ಅವರೇ ಸ್ವತಃ ಆಟೋ ರಿಕ್ಷಾದಲ್ಲಿ ಉಚ್ಚಿಲ ಪೆರಿಬೈಲ್ ಸಮುದ್ರ ತೀರಕ್ಕೆ ದಾಳಿ ಮಾಡಿ ಅಕ್ರಮ ಮರಳು ವಾಹನಗಳನ್ನ ಉಳ್ಳಾಲ ಪೊಲೀಸರ ಮೂಲಕ ಜಪ್ತಿ ಮಾಡಿಸಿದ್ದರು.
ಇದೀಗ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಸಮುದ್ರ ತೀರದ ಮರಳು ಕಳ್ಳತನ ನಡೆಸಿ ಮತ್ತೆ ಸುದ್ದಿಯಾಗಿದ್ದಾರೆ. ಕುಮಾರ ಸ್ವಾಮಿ ಆಪ್ತರಾಗಿರುವ ಫಾರೂಕ್ ಅವರ ಉಳ್ಳಾಲದ ಐಷಾರಾಮಿ ರೆಸಾರ್ಟ್ ಒಂದರಲ್ಲಿ ಈ ಹಿಂದೆಯೂ ಸಮುದ್ರ ತೀರದ ಮರಳು ಕಳ್ಳತನದ ಬಗ್ಗೆ ಸುದ್ದಿಯಾಗಿತ್ತು. ಆ ಸಮಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಅಕ್ರಮ ಮರಳು ಸಾಗಾಟದಲ್ಲಿ ಯಾರೇ ಭಾಗಿಯಾದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದು ಕೊಳ್ಳುವುದಾಗಿ ಮಾಧ್ಯಮದ ಮುಂದೆ ಹೇಳಿದ್ದರು.
ಇಂದು ಬೆಳಗ್ಗೆ ಎಂಎಲ್ಸಿ ಫಾರೂಕ್ ಅವರ ಉಳ್ಳಾಲ ಅಬ್ಬಕ್ಕ ಸರ್ಕಲ್ ನ ಬಳಿಯಿರುವ ಕಡಲ ತೀರದ ಐಷಾರಾಮಿ ರೆಸಾರ್ಟ್ ನಿಂದ ಹೊರ ಹೋಗುತ್ತಿದ್ದ ಮರಳು ತುಂಬಿದ ಈಚರ್ ವಾಹನವನ್ನ ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವಿಷಯ ತಿಳಿದ ಎಂಎಲ್ಸಿ ಫಾರೂಕ್ ಅವರು ಉಳ್ಳಾಲ ಪಿಐ ಸಂದೀಪ್ ಅವರಿಗೆ ಕರೆ ಮಾಡಿ, ಅದು ಜೇಡಿ ಮಣ್ಣು ತುಂಬಿರುವ ವಾಹನ. ಉಳ್ಳಾಲ ಕೈಕೋದಲ್ಲಿ ತಾನು ಖರೀದಿಸಿರುವ ಹೊಸ ಜಮೀನಿನ ತೋಟಕ್ಕೆ ಹಾಕಲೆಂದು ಒಯ್ಯುತ್ತಿದ್ದರು. ಅದರಲ್ಲಿರುವುದು ಬರೀ ಮಣ್ಣು ಮಾತ್ರ. ಬೇಕಾದರೆ ಟೆಸ್ಟ್ ಮಾಡಿಸಿ ಎಂದು ಹೇಳಿದ್ದಾರಂತೆ. ಪೊಲೀಸರು ವಿಧಾನ ಪರಿಷತ್ ಸದಸ್ಯ ಫಾರೂಕ್ ಅವರಿಗೆ ಸೇರಿರುವ ಮರಳು ವಾಹನವನ್ನ ಉಳ್ಳಾಲ ಠಾಣೆಯ ಮುಂಭಾಗದ ರಸ್ತೆಯಲ್ಲೇ ನಿಲ್ಲಿಸಿದ್ದು ದಾರಿ ಹೋಕರು ಅಥವಾ ದೃಷ್ಟಿ ದೋಷ ಇದ್ದವರು ಸಹ ವಾಹನದಲ್ಲಿ ತುಂಬಿರುವುದು ಮರಳೇ ಅಥವಾ ಬರೀಯ ಮಣ್ಣೇ ಎಂದು ಬರೀಯ ನೋಟದಲ್ಲೇ ಕಂಡುಕೊಳ್ಳಬಹುದು. ಆದರೆ ಪ್ರತಿಷ್ಠಿತ ಕುಳ ಫಾರೂಕ್ ಅವರೇ ಫೋನ್ ಮಾಡಿ ತಿಳಿಸಿರುವ ಕಾರಣ ಉಳ್ಳಾಲ ಪೊಲೀಸರು, ವಾಹನದಲ್ಲಿ ತುಂಬಿರುವ ಮರಳನ್ನ ಪ್ರಮಾಣೀಕರಿಸಲು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಲು ಮುಂದಾಗಿದ್ದಾರೆ. ಅಷ್ಟಕ್ಕೂ ಉಳ್ಳಾಲದಲ್ಲಿ ಮರಳೆಂದು ವಾಹನವನ್ನ ವಶಪಡಿಸಿರುವ ಪೊಲೀಸರಿಗೆ ಅದರಲ್ಲಿರುವುದು ಮರಳೋ, ಜೇಡಿ ಮಣ್ಣೋ ಎಂದು ಪರಿಶೀಲಿಸುವಷ್ಟು ಅನುಭವ ಇಲ್ಲದೇ ಹೋಯ್ತೇ ಎನ್ನೋ ಪ್ರಶ್ನೆ ಉದ್ಭವಿಸಿದೆ.
ಮರಳು ಲೂಟಿ ; ಮಾಜಿ ನಗರ ಸದಸ್ಯನ ಆಕ್ರೋಶ
ಉಳ್ಳಾಲ ನಗರಸಭಾ ಮಾಜಿ ಸದಸ್ಯ ಪೊಡಿಮೋನು ಇಸ್ಮಾಯಿಲ್ ಅವರು MLC ಫಾರೂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫಾರೂಕ್ ಅವರು ಉಳ್ಳಾಲದಲ್ಲಿರುವ ತನ್ನ ಐಷಾರಾಮಿ ರೆಸಾರ್ಟ್ ನಿಂದ ನಿತ್ಯವೂ ಕಡಲ ಮರಳನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ. ರಾಜ್ಯವನ್ನ ಪ್ರತಿನಿಧಿಸುವ ಓರ್ವ ಗೌರವಾನ್ವಿತ ಜನ ಪ್ರತಿನಿಧಿಯೇ ಪ್ರಾಕೃತಿಕ ಸಂಪತ್ತನ್ನ ಈ ರೀತಿ ಲೂಟಿ ಮಾಡುತ್ತಿರುವುದು ಅಕ್ಷಮ್ಯ. ಪೊಲೀಸರು ವಶ ಪಡಿಸಿರುವ ಈಚರ್ ವಾಹನದಲ್ಲಿ ಮರಳೇ ಇರುವುದೆಂದು ತಾನೂ ಖಾತರಿ ಪಡಿಸಿದ್ದು , ಮೊಬೈಲ್ನಲ್ಲಿ ಫೋಟೊಗಳನ್ನೂ ತೆಗೆದಿದ್ದೇನೆ. ಉಳ್ಳವರು, ಜನಪ್ರತಿನಿಧಿಗಳೆಂದು ಮಣಿದು ಪೊಲೀಸರು ಮರಳನ್ನ , ಜೇಡಿ ಮಣ್ಣಾಗಿಸುವುದು ಸರಿಯಲ್ಲ. ಪೊಲೀಸರು ತಪ್ಪಿತಸ್ಥ MLC ಫಾರೂಕ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Illegal sand Mining extracted from resort of former MLC B M Farooq in Ullal. Ullal police who gathered information have seized the truck and taken the driver into custody.
01-08-25 11:47 am
Bangalore Correspondent
ಪಾಕಿಸ್ತಾನದಿಂದಲೇ ಭಾರತವನ್ನು ಸ್ಫೋಟಿಸುತ್ತೇನೆ ! ಗೋ...
31-07-25 11:20 pm
Kolar woman blood group: ಕೋಲಾರದ ಮಹಿಳೆಯಲ್ಲಿ ವಿ...
31-07-25 10:20 am
Pranab Mohanty, SIT, Dharmasthala; ಎಡಿಜಿಪಿ ಪ್...
30-07-25 06:28 pm
Dharmasthala Burial Site, Atm, Pan Card Found...
30-07-25 05:42 pm
01-08-25 11:44 am
HK News Desk
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
01-08-25 11:45 am
Mangalore Correspondent
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
KMC Hospital Attavar Trains Armed Forces Doct...
31-07-25 09:14 pm
Mangalore KMC Attavar, Workshop: ಅತ್ತಾವರ ಕೆಎಂ...
31-07-25 09:05 pm
31-07-25 06:04 pm
Mangalore Correspondent
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm
Mangalore Crime, Arrest: ಉದ್ಯಮಿಗಳಿಗೆ ನಕಲಿ ಆಸ್...
30-07-25 08:48 pm
Mysuru Drugs, Crime, Mumbai Police: ಮೈಸೂರಿನಲ್...
30-07-25 11:37 am
ಮಕ್ಕಳಾಗಿಲ್ಲ ಅಂತ ಗಂಡನ ಮೇಲೆ ಸಿಟ್ಟು ; ಪ್ರಿಯಕರನಿಂ...
29-07-25 08:54 pm